Sachin Tendulkar : ಮಹಾರಾಷ್ಟ್ರದ ಸೆಮಿಕಂಡಕ್ಟರ್ ಉದ್ಯಮಕ್ಕೆ 5000 ಕೋಟಿ ಹೂಡಿಕೆ ಮಾಡುತ್ತಿರುವ ಮಾಜಿ ಕ್ರಿಕೆಟಿಗ

ಮಹಾರಾಷ್ಟ್ರದ ಸೆಮಿ ಕಂಡಕ್ಟರ್ ಉದ್ಯಮಕ್ಕೆ ಸಚಿನ್ ತೆಂಡೂಲ್ಕರ್ 5000 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ತಿಳಿಸಿದೆ.

Written by - Zee Kannada News Desk | Last Updated : Mar 26, 2024, 10:08 PM IST
  • ಮಹಾರಾಷ್ಟ್ರದ ಸೆಮಿ ಕಂಡಕ್ಟರ್ ಉದ್ಯಮಕ್ಕೆ ಸಚಿನ್ ತೆಂಡೂಲ್ಕರ್ 5000 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ತಿಳಿಸಿದೆ.
  • ಆಟೋಮೊಬೈಲ್, ಇಂಧನ, ಎಲೆಕ್ಟ್ರಾನಿಕ್ಸ್ ಹಾಗೂ ಕೈಗಾರಿಕೆಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದೆ
  • ಈ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಒಂದು ಅತ್ಯುತ್ತಮ ಕಂಪನಿಗಳಲ್ಲಿ ಆರ್ ಆರ್ ಪಿ ಒಂದಾಗಲಿದೆ
Sachin Tendulkar : ಮಹಾರಾಷ್ಟ್ರದ ಸೆಮಿಕಂಡಕ್ಟರ್ ಉದ್ಯಮಕ್ಕೆ 5000 ಕೋಟಿ ಹೂಡಿಕೆ ಮಾಡುತ್ತಿರುವ ಮಾಜಿ ಕ್ರಿಕೆಟಿಗ title=

ಮಹಾರಾಷ್ಟ್ರದ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು 5000 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ಘೋಷಿಸಿದೆ.

ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆರ್‌ಆರ್‌ಪಿ ಎಲೆಕ್ಟ್ರಾನಿಕ್ ಸೆಮಿಕಂಡಕ್ಟರ್ ತಯಾರಿಕಾ ಘಟಕ ಇದಾಗಿದೆ. 

ಇದನ್ನು ಓದಿ : IPL 2024 : ಶಿವಂ ದುಬೆಯ ಸಿಕ್ಸ್ ಗಳ ಸುರಿಮಳೆ, ಜಿಟಿ ಗೆ 207ರನ್ ಗಳ  ಟಾರ್ಗೆಟ್

ನವೀ ಮುಂಬೈನಲ್ಲಿರುವ 25000 ಚದರ ಅಡಿ ವಿಸ್ತೀರ್ಣದ ಕಂಪನಿಯ ಜಾಗದಲ್ಲಿ ಈ ಘೋಷಣೆ ಕುರಿತು ಮಾಹಿತಿ ಹೊರಬಂದಿದೆ.  ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಕಂಪನಿಯ ಸಂಸ್ಥಾಪಕ, ನಿವೃತ್ತ ಪರಮಾಣುವಿಜ್ಞಾನಿ ಅನಿಲ್ ಕಾಕೋಡ್ಕರ್ ಮತ್ತು ಕಂಪನಿಯ ಅಧ್ಯಕ್ಷ ಹಾಗೂ ಸಿಇಓ ರಾಜೇಂದ್ರ ಚೋಡಂಕರ್ ಇದ್ದರು.

ಈ ತಯಾರಿಕಾ ಘಟಕದಲ್ಲಿ ಸರ್ಕಾರದ ಸಬ್ಸಿಡಿ ಯೋಚನೆಗಳನ್ನು ಯೋಜನಾಭದ್ಧವಾಗಿ ಬಳಸಿಕೊಳ್ಳಲಾಗುವುದು ಮತ್ತು ಆಟೋಮೊಬೈಲ್, ಇಂಧನ, ಎಲೆಕ್ಟ್ರಾನಿಕ್ಸ್ ಹಾಗೂ ಕೈಗಾರಿಕೆಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದೆ, ಸಚಿನ್ ತೆಂಡೂಲ್ಕರ್ ಅವರ ಈ ಹೂಡಿಕೆಯು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿರಲಿದೆ ಎಂದು ಕಂಪನಿ ತಿಳಿಸಿದೆ.

ಇದನ್ನು ಓದಿ : Yuva : 'ಯುವ' ಸಿನಿಮಾದಲ್ಲಿ ಹಿತ ಚಂದ್ರಶೇಖರ್ : ಪ್ರಮುಖ ಪಾತ್ರವೊಂದರಲ್ಲಿ ಸಿಹಿ ಕಹಿ ಪುತ್ರಿ

ಈ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಒಂದು ಅತ್ಯುತ್ತಮ ಕಂಪನಿಗಳಲ್ಲಿ ಆರ್ ಆರ್ ಪಿ ಒಂದಾಗಲಿದೆ ಮತ್ತು ಈ ಕಂಪನಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಚಿನ್ ತೆಂಡೂಲ್ಕರ್ ಅಂಥವರ ಯೋಚನಾಭತಾ ಹೂಡಿಕೆದಾರರು ಬಹಳ ಸಹಾಯಕವಾಗಿರುತ್ತದೆ ಎಂದು ಅಧ್ಯಕ್ಷ ಹಾಗೂ ಸಿಇಓ ರಾಜೇಂದ್ರ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News