NEET PG 2023ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳ ಬೇಡಿಕೆ ! ಸರ್ಕಾರ ಕೊಟ್ಟ ಉತ್ತರವೇನು ?

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET PG 2023 ಪರೀಕ್ಷೆ ಯನ್ನು ಮುಂದೂಡಬೇಕು ಎನ್ನುವ ಬೇಡಿಕೆ ಮುಂದುವರೆದಿದೆ. ಆದರೆ ಪರೀಕ್ಷೆಯನ್ನು ಮುಂದೂಡುವುಡು ಸಾಧ್ಯವಿಲ್ಲ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ  ಸ್ಪಷ್ಟಪಡಿಸಿದ್ದಾರೆ.

Written by - Ranjitha R K | Last Updated : Feb 13, 2023, 01:31 PM IST
  • NEET PG 2023 ಪರೀಕ್ಷೆ ಯನ್ನು ಮುಂದೂಡಬೇಕು ಎನ್ನುವ ಒತ್ತಾಯ
  • ಯಾವುದೇ ಕಾರಣಕ್ಕೂ ಮುಂದೂಡಲಾಗುವುದಿಲ್ಲ - ಕೇಂದ್ರ ಸ್ಪಷ್ಟನೆ
  • ಪರೀಕ್ಷಾ ತಯಾರಿ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಸೂಚನೆ
NEET PG 2023ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳ ಬೇಡಿಕೆ ! ಸರ್ಕಾರ ಕೊಟ್ಟ ಉತ್ತರವೇನು ?  title=

ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET PG 2023 ಪರೀಕ್ಷೆ ಯನ್ನು ಮುಂದೂಡಬೇಕು ಎನ್ನುವ ಬೇಡಿಕೆ ಮುಂದುವರೆದಿದೆ. ಆದರೆ ಪರೀಕ್ಷೆಯನ್ನು ಮುಂದೂಡುವುಡು ಸಾಧ್ಯವಿಲ್ಲ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ  ಸ್ಪಷ್ಟಪಡಿಸಿದ್ದಾರೆ. ದಿ ನೀಟ್ ಪಿಜಿ 2023 ಇಂಟರ್ನ್‌ಶಿಪ್ ಕಟ್ ಆಫ್ ಮಾನದಂಡಗಳನ್ನು ಪರಿಷ್ಕರಿಸಲಾಗಿದೆ. ಇದೀಗ ಅಭ್ಯರ್ಥಿಗಳು ಪರೀಕ್ಷೆಯ ದಿನಾಂಕವನ್ನು ಕನಿಷ್ಠ ಒಂದು ಅಥವಾ ಎರಡು ತಿಂಗಳವರೆಗೆ ಮುಂದೂಡಬೇಕು ಎನ್ನುವ ಬೇಡಿಕೆ ಮುಂದಿಟ್ಟಿದ್ದಾರೆ.  

ಆದರೆ, ಯಾವುದೇ ಕಾರಣಕ್ಕೂ  NEET PG 2023 ಅನ್ನು ಮುಂದೂಡಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲೋಕಸಭೆಯಲ್ಲಿ  ಸ್ಪಷ್ಟಪಡಿಸಿದ್ದಾರೆ.  

ಇದನ್ನೂ ಓದಿ : "ಅಲ್ಲಾ - ಓಂ ಒಂದೇ.. ಮನು ಅಲ್ಲಾನನ್ನು ಪೂಜಿಸಿದ್ದಾನೆ" : ಮದನಿ ಮಾತಿಗೆ ವೇದಿಕೆಯಿಂದ ಹೊರನಡೆದ ಜೈನ ಮುನಿ
 
 ಈ ಎಲ್ಲಾ ಬೆಳವಣಿಗೆಯ ಮಧ್ಯೆಯೇ ಆಕಾಂಕ್ಷಿಗಳು ನೀಟ್ ಪಿಜಿ ಮುಂದೂಡುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒತ್ತಾಯಿಸುತ್ತಲೇ ಇದ್ದಾರೆ.  ಇಲ್ಲಿಯವರೆಗೆ NEET PG ಮುಂದೂಡಿಕೆ ಕುರಿತು ರಾಷ್ಟ್ರೀಯ ಶಿಕ್ಷಣ ಮಂಡಳಿ, ಯಾವುದೇ ಅಪ್ಡೇಟ್ ಬಿಡುಗಡೆ ಮಾಡಿಲ್ಲ. ಅಭ್ಯರ್ಥಿಗಳು NEET PG ಯ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ನ್ಯಾಟ್‌ಬೋರ್ಡ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸುವಂತೆ ಸಲಹೆ ನೀಡಿದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವಿಷಯಗಳಿಗೆ ಕಿವಿಗೊಡದಂತೆ ಎಚ್ಚರಿಸಿದೆ. 

NEET PG ಪರೀಕ್ಷೆಯ ದಿನಾಂಕ 2023 :
NEET PG 2023 ಅನ್ನು ಮಾರ್ಚ್ 5, 2023 ರಂದು ನಡೆಸಲು ನಿರ್ಧರಿಸಲಾಗಿದೆ.

ಅಧಿಕೃತ ವೇಳಾಪಟ್ಟಿಯ ಪ್ರಕಾರ NEET PG ಪ್ರವೇಶ ಕಾರ್ಡ್ ಅನ್ನು ಫೆಬ್ರವರಿ 27, 2023 ರಂದು ನೀಡಲಾಗುತ್ತದೆ. NEET PG ಫಲಿತಾಂಶವನ್ನು ಮಾರ್ಚ್ 31, 2023 ರೊಳಗೆ ನೀಡಲಾಗುತ್ತದೆ. 
ಪರೀಕ್ಷೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದು, ವಿದ್ಯಾರ್ಥಿಗಳು ನೀಟ್ ಪಠ್ಯಕ್ರಮದ ಪ್ರಕಾರ ಪರೀಕ್ಷೆಗೆ ತಯಾರಿ ನಡೆಸುವಂತೆ ಸೂಚಿಸಲಾಗಿದೆ.
NEET PG 2023 CBT ಮೋಡ್  ಆಧಾರದ ಮೇಲೆ ನಡೆಯಲಿದ್ದು, ಪ್ರಶ್ನೆಗಳು MCQ ಪ್ರಕಾರವಾಗಿರುತ್ತವೆ.

NEET PG 2023 ಪ್ರಶ್ನೆ ಪತ್ರಿಕೆಯು 200 ಪ್ರಶ್ನೆಗಳನ್ನು ಹೊಂದಿರುತ್ತದೆ

 ಪ್ರತಿ ಪ್ರಶ್ನೆಯು 4 ಅಂಕಗಳದ್ದಾಗಿರುತ್ತದೆ. ತಪ್ಪು ಉತ್ತರಗಳಿಗಾಗಿ 1 ಅಂಕವನ್ನು ಕಳೆದುಕೊಳ್ಳಬೇಕಾಗುತ್ತದೆ. 

ಇದನ್ನೂ ಓದಿ ಏರೋ ಇಂಡಿಯಾ ದೇಶದ ಉತ್ಪಾದನಾ ಸಾಮರ್ಥ್ಯ ಪ್ರದರ್ಶಿಸಲಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News