ಮಹಾರಾಷ್ಟ್ರದಲ್ಲಿ 50:50 ಸೂತ್ರಕ್ಕೆ ಪಟ್ಟು ಹಿಡಿದ ಶಿವಸೇನಾ..!

ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದಿಂದ ಉತ್ತೇಜಿತರಾಗಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಈ ವರ್ಷದ ಆರಂಭದಲ್ಲಿ ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯಲ್ಲಿ ಮಾಡಿ 50:50 ಒಪ್ಪಂದವನ್ನು ಬಿಜೆಪಿ ಗೌರವಿಸಬೇಕೆಂದು ಒತ್ತಾಯಿಸಿದರು.  

Last Updated : Oct 24, 2019, 06:08 PM IST
ಮಹಾರಾಷ್ಟ್ರದಲ್ಲಿ 50:50 ಸೂತ್ರಕ್ಕೆ ಪಟ್ಟು ಹಿಡಿದ ಶಿವಸೇನಾ..!  title=
file photo

ನವದೆಹಲಿ:  ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದಿಂದ ಉತ್ತೇಜಿತರಾಗಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಈ ವರ್ಷದ ಆರಂಭದಲ್ಲಿ ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯಲ್ಲಿ ಮಾಡಿ 50:50 ಒಪ್ಪಂದವನ್ನು ಬಿಜೆಪಿ ಗೌರವಿಸಬೇಕೆಂದು ಒತ್ತಾಯಿಸಿದರು. 

126 ಸ್ಥಾನಗಳಲ್ಲಿ ಸ್ಪರ್ಧಿಸಿದ ಶಿವಸೇನಾ 58 ರಲ್ಲಿ ಮುನ್ನಡೆ ಸಾಧಿಸುತ್ತಿದೆ, ಈ ಬಾರಿ ಶಿವಸೇನಾ ಪಕ್ಷಕ್ಕೆ 126 ಸ್ಥಾನಗಳನ್ನು ಬಿಜೆಪಿ ನೀಡಿತ್ತು, ಇನ್ನೊಂದೆಡೆಗೆ ಬಿಜೆಪಿ 150 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು, ಆದರೆ ಇಂದಿನ ಮತಗಳ ಎಣಿಕೆಯಲ್ಲಿ ಪ್ರವೃತ್ತಿಗಳು ಬರಲಾರಂಭಿಸಿ ಮತ್ತು ಶಿವಸೇನಾ ದೊಡ್ಡ ಸಂಖ್ಯೆಯಲ್ಲಿ ಸಾಗುತ್ತಿದೆ ಎಂದು ಮುನ್ನಡೆಗಳು ಸೂಚಿಸುತ್ತಿದ್ದಂತೆ, ಪಕ್ಷವು ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡಬೇಕು ಎನ್ನುವ ಮಾತುಗಳು ಕೇಳಿ ಬಂದವು.

ಈ ಬಗ್ಗೆ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು  'ಇದು 50:50 ಸೂತ್ರವನ್ನು ಕಾರ್ಯಗತಗೊಳಿಸುವ ಸಮಯ' ಎಂದು ಹೇಳಿದರು.ಲೋಕಸಭಾ ಚುನಾವಣೆಗೆ ಮುನ್ನ ಅಮಿತ್ ಶಾ ತಮ್ಮ ಮುಂಬೈ ನಿವಾಸ ಮಾತೋಶ್ರೀನಲ್ಲಿ ಸೇನಾ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು. 'ಬಿಜೆಪಿಯ ಕೋರಿಕೆಯ ಮೇರೆಗೆ ಶಿವಸೇನಾ ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸಿತು; ನಾವು ಯಾವಾಗಲೂ ಸ್ಥಳಾವಕಾಶವನ್ನು ಹೊಂದಲು ಸಾಧ್ಯವಿಲ್ಲ' ಎಂದು ಉದ್ಧವ್ ಠಾಕ್ರೆ ಹೇಳಿದರು. ಆ ಮೂಲಕ ಈಗ ಶಿವಸೇನಾಗೆ ನೀಡಿರುವ ಸ್ಥಾನಗಳ ಸಂಖ್ಯೆಯ ಬಗ್ಗೆ ಅನುಮಾನ ಸೂಚಿಸುತ್ತದೆ.  

Trending News