Unlock 4.0: ಸೆಪ್ಟೆಂಬರ್‌ನಿಂದ ಶಾಲಾ-ಕಾಲೇಜು ಮತ್ತೆ ತೆರೆಯುವುದೇ?

ಅನ್ಲಾಕ್ 3.0 ರ ಅಡಿಯಲ್ಲಿ ಗೃಹ ಸಚಿವಾಲಯವು ವ್ಯಾಯಾಮಶಾಲೆಗಳು ಮತ್ತು ಯೋಗ ಸಂಸ್ಥೆಗಳನ್ನು ಪುನಃ ತೆರೆಯಲು ಅನುಮತಿ ನೀಡಿತ್ತು ಮತ್ತು ಆಗಸ್ಟ್ 31 ರವರೆಗೆ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ ಎಂದು ತಿಳಿಸಿತ್ತು.

Last Updated : Aug 25, 2020, 10:32 AM IST
Unlock 4.0: ಸೆಪ್ಟೆಂಬರ್‌ನಿಂದ ಶಾಲಾ-ಕಾಲೇಜು ಮತ್ತೆ ತೆರೆಯುವುದೇ?  title=

ನವದೆಹಲಿ: ಕೊರೊನಾವೈರಸ್ ಕಾರಣ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳನ್ನು ಕಳೆದ 5 ತಿಂಗಳುಗಳಿಂದ ಮುಚ್ಚಲಾಗಿದೆ. ಅನ್ಲಾಕ್ 3.0 ಆಗಸ್ಟ್ 31ಕ್ಕೆ ಕೊನೆಗೊಳ್ಳುವುದರೊಂದಿಗೆ ಅನ್ಲಾಕ್ 4.0 ರ ಅಡಿಯಲ್ಲಿ ಶಾಲೆಗಳನ್ನು (School) ಪುನರಾರಂಭಿಸುವ ಬಗ್ಗೆ ಗೃಹ ಸಚಿವಾಲಯ (MHA) ಶೀಘ್ರದಲ್ಲೇ ತೀರ್ಮಾನಿಸುವ ನಿರೀಕ್ಷೆಯಿದೆ.

ಅನ್ಲಾಕ್ 3.0 ರ ಅಡಿಯಲ್ಲಿ ಗೃಹ ಸಚಿವಾಲಯವು ವ್ಯಾಯಾಮಶಾಲೆಗಳು ಮತ್ತು ಯೋಗ ಸಂಸ್ಥೆಗಳನ್ನು ಪುನಃ ತೆರೆಯಲು ಅನುಮತಿ ನೀಡಿತ್ತು ಮತ್ತು ಆಗಸ್ಟ್ 31 ರವರೆಗೆ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ ಎಂದು ಸೂಚಿಸಿತ್ತು.

ಆಗಸ್ಟ್ ತಿಂಗಳು ಮುಗಿಯುತ್ತಿದ್ದಂತೆ ಅನ್ಲಾಕ್ 4 ಗಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಆದಾಗ್ಯೂ ಕೆಲವು ವರದಿಗಳು ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗುವುದು ಎಂದು ಸೂಚಿಸುತ್ತದೆ. ಏಕೆಂದರೆ ಗರಿಷ್ಠ ಭದ್ರತೆ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಇದರರ್ಥ ನಿರ್ದಿಷ್ಟ ಮಾನದಂಡದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಒಂದೇ ದಿನ ಶಾಲೆಗೆ ಹೋಗುವುದಿಲ್ಲ.

ಶಾಲೆಗಳನ್ನು ತೆರೆಯಲು ನಿರ್ಧರಿಸಿದೆಯೇ ಸರ್ಕಾರ ? ಇಲ್ಲಿದೆ ಮಹತ್ವದ ಮಾಹಿತಿ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾ ಸಾಂಕ್ರಾಮಿಕ ಮಕ್ಕಳ ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ಮಾರ್ಚ್ 3 ರಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಆನ್‌ಲೈನ್ ತರಗತಿಗಳನ್ನು (Online Classes) ಪ್ರಾರಂಭಿಸಲು ಸರ್ಕಾರ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಸೂಚನೆ ನೀಡಿದ್ದರೂ, ವಿಶೇಷವಾಗಿ ಸರಿಯಾದ ವ್ಯವಸ್ಥೆಯ ಕೊರತೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಕೊರತೆಯಿಂದಾಗಿ ಇದು ಪರಿಣಾಮಕಾರಿ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

ಅದೇ ಸಮಯದಲ್ಲಿ ಲಾಕ್ಡೌನ್ ತಮ್ಮ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಪೋಷಕರು ಶುಲ್ಕದಲ್ಲಿ ರಿಯಾಯಿತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ, ಆದರೆ ಶುಲ್ಕದಲ್ಲೂ ಯಾವುದೇ ರಿಯಾಯಿತಿ ನೀಡಲಾಗಿಲ್ಲ.

Trending News