ಶಾಲೆಗಳನ್ನು ತೆರೆಯಲು ನಿರ್ಧರಿಸಿದೆಯೇ ಸರ್ಕಾರ ? ಇಲ್ಲಿದೆ ಮಹತ್ವದ ಮಾಹಿತಿ

ಶಾಲೆಗಳನ್ನು ತೆರೆಯುವುದು ಕರೋನಾ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಸರ್ಕಾರ ಹೇಳುತ್ತದೆ.

Last Updated : Aug 13, 2020, 06:22 AM IST
ಶಾಲೆಗಳನ್ನು ತೆರೆಯಲು ನಿರ್ಧರಿಸಿದೆಯೇ ಸರ್ಕಾರ ? ಇಲ್ಲಿದೆ ಮಹತ್ವದ ಮಾಹಿತಿ title=

ನವದೆಹಲಿ: ಕರೋನಾ ಸೋಂಕಿನಿಂದಾಗಿ ಕಳೆದ 5 ತಿಂಗಳಿನಿಂದ ಮುಚ್ಚಿದ ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಶಾಲೆಗಳನ್ನು (Schools) ತೆರೆಯುವುದು ಕರೋನಾದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಸರ್ಕಾರ ಹೇಳುತ್ತದೆ. ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾದರೆ ಮುಂದಿನ ತಿಂಗಳಿನಿಂದ ಶಾಲೆಯನ್ನು ತೆರೆಯುವ ಆಲೋಚನೆ ಇರಬಹುದು. ಪ್ರಸ್ತುತ ಚಂಡೀಗಢದ ಕೇಂದ್ರಾಡಳಿತ ಪ್ರದೇಶವು ಶಾಲೆಯನ್ನು ತೆರೆಯುವ ಉದ್ದೇಶವನ್ನು ವ್ಯಕ್ತಪಡಿಸಿದೆ ಮತ್ತು ಕೇಂದ್ರ ಸರ್ಕಾರದಿಂದ ಅನುಮೋದನೆ ಕೋರಿದೆ.

ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆ ಕೇಳಿದ ಕೇಂದ್ರ

ಏತನ್ಮಧ್ಯೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಮಿತಿ ಸಭೆ ಸೋಮವಾರ ನಡೆಯಿತು. ಬಿಜೆಪಿ ಸಂಸದ ವಿನಯ್ ಸಹಸ್ರಬುದ್ದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇಶದಲ್ಲಿ ಶಾಲೆಗಳನ್ನು ತೆರೆಯುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು. ಸದ್ಯಕ್ಕೆ ಶಾಲೆ ತೆರೆಯುವ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಗಳ ಸಲಹೆಯ ನಂತರ ಮತ್ತು ಕರೋನದ ಸ್ಥಿತಿಯನ್ನು ನೋಡಿದ ನಂತರವೇ ಶಾಲೆಗಳ ಪುನರಾರಂಭದ ಬಗ್ಗೆ ಪರಿಗಣಿಸಲಾಗುತ್ತದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 3 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲು ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಕ್ಕಳ ಪೋಷಕರು ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಬಹುದು ಮತ್ತು ನಂತರ ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಬಹುದು. ಅದೇ ಸಮಯದಲ್ಲಿ, 4 ರಿಂದ 7 ನೇ ತರಗತಿಗಳಿಗೆ ಸೀಮಿತವಾದ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಬಹುದು.

ಸ್ಕೂಲ್ ತೆರೆಯುವ ಮುನ್ನ ಶುಲ್ಕ ವಿಧಿಸದಂತೆ ಸರ್ಕಾರದ ಸೂಚನೆ, ಆನ್‌ಲೈನ್ ಕ್ಲಾಸ್ ಮುಚ್ಚಿದ ಶಾಲೆಗಳು

ಅನೇಕ ಮಕ್ಕಳಿಗೆ ಮೊಬೈಲ್ ಮತ್ತು ಲ್ಯಾಪ್‌ಟಾಪ್ (Laptop) ಸೌಲಭ್ಯವಿಲ್ಲ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಬಡ ಮಕ್ಕಳಿಗೆ ರೇಡಿಯೋ ವಿತರಿಸಬೇಕು. ಆ ಮೂಲಕ ಸಮುದಾಯ ರೇಡಿಯೋ ಮೂಲಕ ಆ ಮಕ್ಕಳು ಓದಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಕಾಲೇಜುಗಳಲ್ಲಿ ಶೂನ್ಯ ವರ್ಷ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರರ್ಥ ಶೂನ್ಯ ವರ್ಷ ಎಂದು ಕರೆಯಲ್ಪಡುವ ಈ ವರ್ಷದ ಕೊನೆಯಲ್ಲಿ ಪರೀಕ್ಷೆ ಇರುತ್ತದೆ.

ಕಾಲೇಜು ವಿದ್ಯಾರ್ಥಿಗಳಿಗೆ 'ಪ್ರಶ್ನೆ ಬ್ಯಾಂಕ್' ರಚಿಸಬೇಕು ಎಂದು ಸಂಸದ ವಿನಯ್ ಸಹಸ್ರಬುದ್ಧ ಸರ್ಕಾರಕ್ಕೆ ಸೂಚಿಸಿದರು. ಇದರಲ್ಲಿ ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆಗಳನ್ನು ಕೊಟ್ಟಿರುವ ಪ್ರಶ್ನೆಗಳಿಂದ ಕೇಳಬೇಕು ಎನ್ನಲಾಗಿದೆ. 
 

Trending News