Karnataka Election Result 2023: ಬೆಳಿಗ್ಗೆ 8 ಗಂಟೆ ಮತ ಎಣಿಕೆ ಶುರು: ಕದನಕಲಿಗಳ ಭವಿಷ್ಯ ಇಂದು ನಿರ್ಧಾರ!

Karnataka Assembly Election Result 2023: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಮತ ಎಣಿಕಾ ಕಾರ್ಯವು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭಗೊಳ್ಳಲಿದೆ. ಮತಪೆಟ್ಟಿಗೆಯಲ್ಲಿ 2615 ಅಭ್ಯರ್ಥಿಗಳ ಭವಿಷ್ಯ ಅಡಗಿದೆ. ರಾಜ್ಯದಲ್ಲಿ ಮೇ 10 ರಂದು 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ರಾಜ್ಯದ ಎಲ್ಲಾ 58,285 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.

Written by - Bhavishya Shetty | Last Updated : May 13, 2023, 06:18 AM IST
    • ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ
    • ಮಧ್ಯಾಹ್ನ 12 ಗಂಟೆಯೊಳಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
    • ಮೇ 10 ರಂದು 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು
Karnataka Election Result 2023: ಬೆಳಿಗ್ಗೆ 8 ಗಂಟೆ ಮತ ಎಣಿಕೆ ಶುರು: ಕದನಕಲಿಗಳ ಭವಿಷ್ಯ ಇಂದು ನಿರ್ಧಾರ! title=
Karnataka Assembly Election Result 2023

Karnataka Assembly Election Result 2023: ಕರ್ನಾಟಕ ವಿಧಾನಸಭಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆಗೆ ಕೌಂಟ್ ಡೌನ್ ಶುರುವಾಗಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯೊಳಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ನಿರೀಕ್ಷೆಯಿದೆ. ಮತಪೆಟ್ಟಿಗೆಯಲ್ಲಿ 2615 ಅಭ್ಯರ್ಥಿಗಳ ಭವಿಷ್ಯ ಅಡಗಿದೆ. ರಾಜ್ಯದಲ್ಲಿ ಮೇ 10 ರಂದು 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ರಾಜ್ಯದ ಎಲ್ಲಾ 58,285 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಮತ ಎಣಿಕಾ ಕಾರ್ಯವು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರತಿ ಮತ ಎಣಿಕಾ ಕೇಂದ್ರದಲ್ಲೂ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಲು ಸುಸಜ್ಜಿತ ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: ಭಾರಿ ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾದ ಮುಳುಗಡೆ ಜಿಲ್ಲೆಯಲ್ಲಿ ತೇಲುವರು ಯಾರು?

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಮತ ಎಣಿಕಾ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರತಿ ಮತ ಎಣಿಕಾ ಕೇಂದ್ರದಲ್ಲೂ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಲು ಸುಸಜ್ಜಿತ ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ 162- ಶಿವಾಜಿನಗರ, 154- ಆರ್.ಆರ್ ನಗರ, 163- ಶಾಂತಿನಗರ, 164-ಗಾಂಧಿನಗರ, 165-ರಾಜಾಜಿನಗರ, 168-ಚಾಮರಾಜಪೇಟೆ, 169- ಚಿಕ್ಕಪೇಟೆ ಕ್ಷೇತ್ರಗಳ ಮತ ಎಣಿಕಾ ಕಾರ್ಯವು ನಗರದ ಬಿ.ಎಂ.ಎಸ್ ಮಹಿಳೆಯರ ಕಾಲೇಜಿನಲ್ಲಿ , ನಂ.30, ಬ್ಯೂಗಲ್  ರಾಕ್ ರಸ್ತೆ, ಗಾಂಧಿ  ಬಜಾರ್, ಬಸವನಗುಡಿ, ಬೆಂಗಳೂರು -04, ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ಡಾ. ಕೆ ಎನ್ ಕವನ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9844855371 ಮೂಲಕ ಸಂಪರ್ಕಿಸಬಹುದಾಗಿದೆ.

ಬೆಂಗಳೂರು ಉತ್ತರ ವಿಭಾಗದ 151-ಕೆ.ಆರ್.ಪರಂ, 157- ಮಲ್ಲೇಶ್ವರಂ, 156- ಮಹಾಲಕ್ಷ್ಮೀ ಲೇ ಔಟ್, 158- ಹೆಬ್ಬಾಳ, 159- ಪುಲಕೇಶಿನಗರ,160-ಸರ್ವಜ್ಞನಗರ, 161-ಸಿ.ವಿ.ರಾಮನ್ ನಗರ ಕ್ಷೇತ್ರಗಳ ಮತ ಎಣಿಕೆಯು ಮೌಂಟ್  ಕಾರ್ಮೆಲ್  ಕಾಲೇಜು, 58, ಪ್ಯಾಲೇಸ್  ರಸ್ತೆ,  ವಸಂತನಗರ, ಬೆಂಗಳೂರು-52 ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ಬಿ. ಜಿ ಪೂರ್ಣಿಮಾ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9448682771 ಮೂಲಕ ಸಂಪರ್ಕಿಸಬಹುದಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ 166- ಗೋವಿಂದರಾಜನಗರ, 167-ವಿಜಯನಗರ, 170-ಬಸವನಗುಡಿ, 171- ಪದ್ಮನಾಭನಗರ, 172-ಬಿ.ಟಿ.ಎಂ ಲೇ ಔಟ್, 173-ಜಯನಗರ, 175- ಬೊಮ್ಮನಹಳ್ಳಿ, ಕ್ಷೇತ್ರಗಳ ಮತ ಎಣಿಕೆಯು ಎಸ್.ಎಸ್.ಎಂ.ಆರ್.ವಿ  ಪಿ.ಯು ಕಾಲೇಜು, ನಂ.17, 36ನೇ ಕ್ರಾಸ್, 28ನೇ ಮೈನ್ ರೋಡ್ , 4ಏ ಬ್ಲಾಕ್ , ಜಯನಗರ, ಬೆಂಗಳೂರು ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ವೈ. ಸಿ ಸಂಪತ್ ಕುಮಾರ್ ಮುಖ್ಯ ವರದಿಗಾರರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9448536962 ಮೂಲಕ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಈ ನಾಡಿನಲ್ಲಿ ಯಾರಿಗೆ ಸಿಗಲಿದೆ ಮಠ-ಮಠಾಧೀಶರ ಆಶೀರ್ವಾದ?

ಬೆಂಗಳೂರು ನಗರ ಜಿಲ್ಲಾ ವಿಭಾಗದ 150-ಯಲಹಂಕ, 152- ಬ್ಯಾಟರಾಯನಪುರ, 153-ಯಶವಂತಪುರ, 155-ದಾಸರಹಳ್ಳಿ, 174- ಮಹದೇವಪುರ, 176-ಬೆಂಗಳೂರು ದಕ್ಷಿಣ ಹಾಗೂ 177-ಆನೇಕಲ್ ಕ್ಷೇತ್ರಗಳ ಮತ ಎಣಿಕೆಯು ಸೆಂಟ್  ಜೋಸೆಫ್ ಇಂಡಿಯನ್  ಹೈಸ್ಕೂಲ್ ನಂ. 23, ವಿಠ್ಠಲ್  ಮಲ್ಯ ರಸ್ತೆ, ಬೆಂಗಳೂರು-01ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ಪಲ್ಲವಿ ಹೊನ್ನಾಪುರ, ಉಪನಿರ್ದೇಶಕರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9480841219 ಮೂಲಕ ಸಂಪರ್ಕಿಸಬಹುದಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News