Karnataka Election Results 2023: ಕಲ್ಯಾಣ ಕರ್ನಾಟಕದ ಈ ನಾಡಿನಲ್ಲಿ ಯಾರಿಗೆ ಸಿಗಲಿದೆ ಮಠ-ಮಠಾಧೀಶರ ಆಶೀರ್ವಾದ?

Bidar District Assembly Election Results 2023: ಧರ್ಮ, ಸೌಹಾರ್ಧ, ಸಂಸ್ಕೃತಿಗಳು ಬಲವಾಗಿ ಬೇರೂರಿರುವ 'ಕಲ್ಯಾಣ'ದ ಈ ಜಿಲ್ಲೆಯಲ್ಲಿ ಒಟ್ಟು 6 ವಿಧಾನ ಸಭಾ ಕ್ಷೇತ್ರಗಳಿವೆ. ಈ ಭಾಗದಲ್ಲಿ ಮಠಗಳು ಹಾಗೂ ಮಠಾಧೀಶರ ಪ್ರಭಾವವೇ ಹೆಚ್ಚು. ಕಳೆದ ಬಾರಿಯ ಅಂದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಒಟ್ಟು 6 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Written by - Nitin Tabib | Last Updated : May 12, 2023, 11:27 PM IST
  • 2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಒಟ್ಟು 6 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
  • ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. ಕಳೆದ ಬಾರಿ ಜಿಲ್ಲೆಯ ಬೀದರ್, ಭಾಲ್ಕಿ, ಬಸವಕಲ್ಯಾಣ ಹಾಗೂ ಹುಮಾನಾಬಾದ್ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು
  • ಇವುಗಳಲ್ಲಿ ಭಾಲ್ಕಿ ಕಾಂಗ್ರೆಸ್ ನ ಭದ್ರ ಕೋಟೆ ಎಂದರೆ ತಪ್ಪಾಗಲಾರದು.
Karnataka Election Results 2023: ಕಲ್ಯಾಣ ಕರ್ನಾಟಕದ ಈ ನಾಡಿನಲ್ಲಿ ಯಾರಿಗೆ ಸಿಗಲಿದೆ ಮಠ-ಮಠಾಧೀಶರ ಆಶೀರ್ವಾದ? title=
ಬೀದರ್ ಜಿಲ್ಲೆ

Karnataka Assembly Election Results 2023: ಧರ್ಮ, ಸೌಹಾರ್ಧ, ಸಂಸ್ಕೃತಿಗಳು ಬಲವಾಗಿ ಬೇರೂರಿರುವ 'ಕಲ್ಯಾಣ'ದ ಈ ಜಿಲ್ಲೆಯಲ್ಲಿ ಒಟ್ಟು 6 ವಿಧಾನ ಸಭಾ ಕ್ಷೇತ್ರಗಳಿವೆ. ಈ ಭಾಗದಲ್ಲಿ ಮಠಗಳು ಹಾಗೂ ಮಠಾಧೀಶರ ಪ್ರಭಾವವೇ ಹೆಚ್ಚು. ಕಳೆದ ಬಾರಿಯ ಅಂದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಒಟ್ಟು 6 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. ಕಳೆದ ಬಾರಿ ಜಿಲ್ಲೆಯ ಬೀದರ್, ಭಾಲ್ಕಿ, ಬಸವಕಲ್ಯಾಣ ಹಾಗೂ ಹುಮಾನಾಬಾದ್ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು ಇವುಗಳಲ್ಲಿ ಭಾಲ್ಕಿ ಕಾಂಗ್ರೆಸ್ ನ ಭದ್ರ ಕೋಟೆ ಎಂದರೆ ತಪ್ಪಾಗಲಾರದು. ಜಿಲ್ಲೆಯ ಔರಾದ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು, ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾನ್ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ದಾಖಲಿಸಿದ್ದರು. ಬೀದರ್ ಜಿಲ್ಲೆಯಲ್ಲಿ ಮಠ-ಮಠಾಧೀಶರ ಪ್ರಭಾವ ಹೆಚ್ಚಾಗಿರುವುದನ್ನು ಮನಗಂಡ ಭಾರತೀಯ ಜನತಾ ಪಕ್ಷ ಈ ಬಾರಿ ತನ್ನ ಹಲವು ರಾಷ್ಟ್ರೀಯ ನಾಯಕರನ್ನು ಪ್ರಚಾರದ ಆರಂಭದಲ್ಲಿಯೇ ಕಣಕ್ಕಿಳಿಸಿ ಭರ್ಜರಿ ಪ್ರಚಾರ ನಡೆಸಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ತನ್ನ ಹಲವು ರಾಷ್ಟ್ರೀಯ ನಾಯಕರನ್ನು ಕರೆತಂದು ಚುನಾವಣಾ ಅಖಾಡದಲ್ಲಿ ಪ್ರಚಾರ ಕಾರ್ಯ ನಡೆಸಿದೆ. ಜೆಡಿಎಸ್ ಕೂಡ ಹಲವು ಪಂಚರತ್ನ ಯಾತ್ರೆಗಳನ್ನು ಈ ಜಿಲ್ಲೆಯಲ್ಲಿ ಹಮ್ಮಿಕೊಂಡಿತ್ತು. 

ಜಿಲ್ಲೆಯ ಹುಮಾನಾಬಾದ್ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಪುತ್ರ ಸಿಎಂ ಫೈಜ್ ಚುನಾವಣಾ ಅಖಾಡಕ್ಕೆ ಇಳಿದರೆ, ಕಾಂಗ್ರೆಸ್ ವತಿಯಿಂದ ಚುನಾವಣೆಗೆ ಇಳಿದ ರಾಜಶೇಖರ್ ಬಸವರಾಜ್ ಪಾಟೀಲ್ ಅವರಿಗೆ ಭಾರಿ ಪೆಟ್ಟು ಕೊಡುವ ನಿರೀಕ್ಷೆ ಇದೆ. ಬಿಜೆಪಿ ವತಿಯಿಂದ ಸಿದ್ಧು ಪಾಟೀಲ್ ಚುನಾವಣಾ ಅಖಾಡದಲ್ಲಿದಲ್ಲಿರುವ ಕಾರಣ ಕ್ಷೇತ್ರದ ಲಿಂಗಾಯತ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಭಾಲ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ಸಹೋದರರಿಬ್ಬರ ನೇರ ಹಣಾಹಣಿ ನೋಡಲು ಸಿಗಲಿದೆ ಕಾರಣ ಇಲ್ಲಿ ಬಿಜೆಪಿ ವತಿಯಿಂದ ಈ ಈಶ್ವರ್ ಖಂಡ್ರೆ ಸ್ಪರ್ಧಿಸುತ್ತಿದ್ದರೆ ಅವರ ಸಹೋದರ ಸಂಬಂಧಿ ಪ್ರಕಾಶ್ ಖಂಡ್ರೆ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸುತ್ತಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪಾ ಕಾಶೆಂಪುರ್ ಹಾಗೂ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಶೈಲೇಂದ್ರ್ ಬೆಳ್ದಾಲ್ ಮಧ್ಯೆ ನೆರೆ ಪೈಪೋಟಿ ನಡೆಯಲಿದೆ. ಕಾಂಗ್ರೆಸ್ ಮತ್ತೊಮ್ಮೆ ಅಶೋಕ್ ಖೇಣಿ ಅವರಿಗೆ ಟಿಕೆಟ್ ನೀಡಿದೆ. 

ಔರಾದ್ ಕ್ಷೇತ್ರದಿಂದ ಸತತ ಮೂರು ಬಾರಿ ವಿಧಾನಸಭೆಗೆ ಆಯ್ಕೆಗೊಂಡ ಸಚಿವ ಪ್ರಭು ಚವಾಣ್ ಈ ಬಾರಿಯೂ ಕೂಡ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸುತ್ತಿದ್ದು, ಗೆಲ್ಲುವ ನೀರೇಕ್ಷೆಯಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಭೀಮಸೇನ್ ರಾವ್ ಶಿಂಧೆ ಅವರ ಮೇಲೆ ಭರವಸೆಯನ್ನು ಹೊಂದಿದೆ. ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಹೀಮ್ ಖಾನ್ ಅವರಿಗೆ ಬಿಜೆಪಿ ಅಭ್ಯರ್ಥಿ ಈಶ್ವರ್ ಷಿಂಗ್ ಠಾಕೂರ್ ಪೈಪೋಟಿ ನೀಡಲಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಷ್ಟ್ರೀಯ ನಾಯಕರ ಭರ್ಜರಿ ಪ್ರಚಾರ, ಭರವಸೆಗಳು. ಪ್ರಾದೇಶಿಕ ಲೆಕ್ಕಾಚಾರಗಳ ಮಧ್ಯೆ ಈ ಬಾರಿ ಬೀದರ್ ಜಿಲ್ಲೆಯಲ್ಲಿ ಮತದಾರ ಪ್ರಭು ಯಾವ ಯಾವ ನಾಯಕರುಗಳಿಗೆ ಮಣೆ ಹಾಕಲಿದ್ದಾನೆ ಎಂಬುದರ  ಎಂಬುದು ಚಿತ್ರಣ ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. 

ಬೀದರ್ ಜಿಲ್ಲೆಯ ಕುರುಕ್ಷೇತ್ರ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು-63 
ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ- 13,01,546 
ಪುರುಷ ಮತದಾರರ ಸಂಖ್ಯೆ- 6,78, 421
ಮಹಿಳಾ ಮತದಾರರ ಸಂಖ್ಯೆ- 6.23.061
ಲೈಂಗಿಕ ಅಲ್ಪಸಂಖ್ಯಾತರು- 64

ಜಿಲ್ಲೆಯಲ್ಲಿ ಬರುವ ವಿವಿಧ ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ
1. ಹುಮಾನಾಬಾದ್ 
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,33,577
ಪುರುಷ ಮತದಾರರ ಸಂಖ್ಯೆ-1,21,884
ಮಹಿಳಾ ಮತದಾರರ ಸಂಖ್ಯೆ-1,11,681

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ರಾಜಶೇಖರ್- 74,945 ಅಂತರ: 31814(47.04%)
BJP- ಸುಭಾಷ್ -43,131 (27.07%)    
JDS-ಎಂ ನಸೀಮೊದ್ದಿನ್ ಪಟೇಲ್ 34,280 (21.51%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಸಿದ್ದು ಪಾಟೀಲ್
ಕಾಂಗ್ರೆಸ್- ರಾಜಶೇಖರ್ ಬಸವರಾಜ್ ಪಾಟೀಲ್
ಜೆಡಿಎಸ್-ಸಿ ಎಂ ಫೈಜ್     

2. ಬೀದರ್ ದಕ್ಷಿಣ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-1,96,623
ಪುರುಷ ಮತದಾರರ ಸಂಖ್ಯೆ-1,01,920
ಮಹಿಳಾ ಮತದಾರರ ಸಂಖ್ಯೆ-94,700

2018ರ ವಿಧಾನಸಭೆ ಚುನಾವಣಾ ಫಲಿತಾಂಶ
JDS- ಬಂಡೆಪ್ಪ- 55,107 (39.68%)- ಅಂತರ- 12742 (39.68%)
BJP- ಡಾ ಶೈಲೇಂದ್ರ ಬೆಲ್ದಾಳೆ- 42,365 (30.50%)    
INC- ಅಶೋಕ್ ಖೇಣಿ- 35,131 (25.29%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಡಾ. ಶೈಲೇಂದ್ರ ಬೆಳದಲೆ
ಕಾಂಗ್ರೆಸ್- ಅಶೋಕ್ ಖೇಣಿ
ಜೆಡಿಎಸ್    - ಬಂಡೆಪ್ಪಾ ಕಾಶೆಂಪುರ್

3. ಬೀದರ್
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,14,608
ಪುರುಷ ಮತದಾರರ ಸಂಖ್ಯೆ-1,09,861
ಮಹಿಳಾ ಮತದಾರರ ಸಂಖ್ಯೆ-1,04,721

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ರಹೀಂ ಖಾನ್- 73,270- ಅಂತರ: 10245(52.10%)
BJP- ಸೂರ್ಯಕಾಂತ್ ನಾಗಮಾರಪಳ್ಳಿ- 63,025 (44.82%)
BSP- ಎಂ ಮುನಿಯಪ್ಪ- 1,384 (0.98%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಈಶ್ವರ್ ಚಂದ್ರ ವಿದ್ಯಾಸಾಗರ್
ಕಾಂಗ್ರೆಸ್- ರಹೀಮ್ ಖಾನ್ 
ಜೆಡಿಎಸ್- ಸೂರ್ಯಕಾಂತ್ ನಾಗಮಾರಪಳ್ಳಿ    

4. ಭಾಲ್ಕಿ 
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ- 2,22,472
ಪುರುಷ ಮತದಾರರ ಸಂಖ್ಯೆ- 1,16,904
ಮಹಿಳಾ ಮತದಾರರ ಸಂಖ್ಯೆ- 1,05,560

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಈಶ್ವರ್ ಖಂಡ್ರೆ- 84,673 ಅಂತರ: 21438 (50.68%)
BJP-ಡಿ ಕೆ ಸಿದ್ರಾಮ್- 63,235 (37.85%)    
JDS- ಖಂಡ್ರೆ ಪ್ರಕಾಶ್- 15,142 (9.06%)

ಇದನ್ನೂ ಓದಿ- Karnataka Election Results 2023: ಭಾರಿ ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾದ ಮುಳುಗಡೆ ಜಿಲ್ಲೆಯಲ್ಲಿ ತೇಲುವರು ಯಾರು?

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಪ್ರಕಾಶ್ ಖಂಡ್ರೆ
ಕಾಂಗ್ರೆಸ್- ಈಶ್ವರ್ ಖಂಡ್ರೆ
ಜೆಡಿಎಸ್- ರೌಫ್ ಪಟೇಲ್    

5. ಔರಾದ್
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,13,194
ಪುರುಷ ಮತದಾರರ ಸಂಖ್ಯೆ- 1,11,027
ಮಹಿಳಾ ಮತದಾರರ ಸಂಖ್ಯೆ- 1,02,167

2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಪ್ರಭು ಚೌಹಾಣ್-75,061- ಅಂತರ: 10592  (50.92%)
INC- ವಿಜಯಕುಮಾರ್-64,469 (43.73%)
JDS- ಧನಾಜಿ- 2,605 (1.77%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಪ್ರಭು ಚವ್ಹಾನ್
ಕಾಂಗ್ರೆಸ್- ಡಾ. ಶಿಂಧೆ ಭೀಮಸೇನ್ ರಾವ್
ಜೆಡಿಎಸ್- ಜೈಸಿಂಗ    

ಇದನ್ನೂ ಓದಿ-Karnataka Elections Results 2023: ಕಾಂಗ್ರೆಸ್-ಬಿಜೆಪಿ ಪಾರಮ್ಯದ ವಿಜಯಪುರ ಜಿಲ್ಲೆಯಲ್ಲಿ ಗೌಡ-ಪಾಟೀಲರದ್ದೇ ವರ್ಚ್ಚಸ್ಸು!

6. ಬಸವಕಲ್ಯಾಣ
ಕ್ಷೇತ್ರದ ಮಾಹಿತಿ

ಮತದಾರರ ಸಂಖ್ಯೆ-2,21,073
ಪುರುಷ ಮತದಾರರ ಸಂಖ್ಯೆ-1,16,826
ಮಹಿಳಾ ಮತದಾರರ ಸಂಖ್ಯೆ-1,04,232

2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಬಿ ನಾರಾಯಣರಾವ್-61,425- ಅಂತರ: 17272(42.27%)
BJP- ಮಲ್ಲಿಕಾರ್ಜುನ ಖೂಬಾ- 44,153 (30.38%)    
JDS-ಪಿ ಜಿ ಆರ್ ಸಿಂಧ್ಯ- 31,414 (21.62%)

2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಶರಣು ಸಲಗರ್
ಕಾಂಗ್ರೆಸ್-ವಿಜಯ್ ಸಿಂಗ್
ಜೆಡಿಎಸ್- ಸಂಜು ಕುಮಾರ್ ವಾಡೇಕರ್    

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News