Karnataka Assembly Election Resulta 2023: ಮುಳುಗಡೆ ಜಿಲ್ಲೆ ಎಂದೇ ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಬಾಗಲಕೋಟೆ, ಹುಣಗುಂದ, ಜಮಖಂಡಿ, ಮುಧೋಳ, ತೆರದಾಳ, ಬಾದಾಮಿ ಹಾಗೂ ಬೀಳಗಿ ವಿಧಾನಸಭೆ ಕ್ಷೇತ್ರಗಳು ಈ ಜಿಲ್ಲೆಯಲ್ಲಿ ಬರುತ್ತವೆ. ಒಟ್ಟು 15, 60,828 ಪುರುಷ, ಮಹಿಳಾ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ಈ ಈ ಜಿಲ್ಲೆಯಲ್ಲಿ ಕಳೆದ ಬಾರಿ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 7 ಸ್ಥಾನಗಳ ಪೈಕಿ ಬಿಜೆಪಿ 5 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್ 2 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಬಾಗಲಕೋಟೆ, ಹುನಗುಂದ, ಮುಧೋಳ, ತೆರದಾಳ ಹಾಗೂ ಬೀಳಗಿ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಗೆ ಈ ಬಾರಿ ಕೆಲ ಕ್ಷೇತ್ರಗಳಲ್ಲಿ ಸ್ವಪಕ್ಷೀಯರ ಒಳ ಏಟು ಮೂಳುವಾಗುವ ಸಾಧ್ಯತೆ ಇದೆ. ಟಿಕೆಟ್ ಹಂಚಿಕೆಯ ಬೆನ್ನಲ್ಲೇ ಭುಗಿಲೆದ್ದ ಭಾರಿ ಅಸಮಾಧಾನವನ್ನು ತಣಿಸಲು ಪಕ್ಷಾತೀತವಾಗಿ ಹರಸಾಹಸಗಳೇ ನಡೆದಿವೆ. ಬಾದಾಮಿ, ಬಾಗಲಕೋಟೆ, ತೆರದಾಳ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಓಟಕ್ಕೆ ಬಿಜೆಪಿಯವರೆ ಬ್ರೇಕ್ ಹಾಕುವ ಸಾಧ್ಯತೆ ಇದೆ ಎಂದು ವರ್ತಿಸಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಪಾಳೆಯ ಕೂಡ ಇದಕ್ಕೆ ಹೊರತಾಗಿಲ್ಲ. ಏಕೆಂದರೆ ಕಾಂಗ್ರೆಸ್ ಬಂಡಾಯ ನಾಯಕರುಗಳು ಜಿಲ್ಲೆಯ ಜಮಖಂಡಿ, ಮುಧೋಳ, ತೆರದಾಳ, ಬಾಗಲಕೋಟೆ ಹಾಗೂ ಬೀಳಗಿ ಕ್ಷೇತ್ರಗಳಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗಳಿಗೆ ತೊಡಗಾಲು ಹಾಗುವ ಸಾಧ್ಯತೆ ಇದೆ.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರ ಸ್ಪರ್ಧೆಯಿಂದ ಇಡೀ ದೇಶ ಹಾಗೂ ರಾಜ್ಯದ ಗಮನ ಸೆಳೆದಿದ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಬಿ ಚಿಕ್ಕನಕಟ್ಟಿ ಅವರ ಪುತ್ರ ಭೀಮಸೇನ ಚಿಕ್ಕನಕಟ್ಟಿ ಈ ಬಾರಿ ಕಣಕ್ಕಿಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ವತಿಯಿಂದ ಶಾಂತಗೌಡಾ ಪಾಟೀಲ್ ಕಣದಲ್ಲಿದ್ದು, ಟಿಕೆಟ್ ಪಡೆದು ಪಕ್ಷದ ಹಲವು ಮುಖಂಡರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಜೆಡಿಎಸ್ ವತಿಯಿಂದ ಹನುಮಂತ್ ಮಾವಿನಮರದ ಈ ಇಬ್ಬರು ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ ಎನ್ನಲಾಗುತ್ತಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನೇಕಾರರೆ ನಿರ್ಣಾಯಕರಾಗಿರುವ ತೆರದಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಉಮಾಶ್ರೀಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್, ಈ ಬಾರಿ ಸಿದ್ಧು ಕೊಣ್ಣೂರ್ ಎಂಬ ಹೊಸ ಮುಖಕ್ಕೆ ಮಣೆಹಾಕಿರುವ ಕಾರಣ, ಮತ್ತೊರ್ವ ಟಿಕೆಟ್ ಆಕಾಂಕ್ಷಿ ಡಾ. ಪದ್ಮಜೀತ ನಾಡಗೌಡ ಪಾಟೀಲ್ ಬಂಡಾಯ ಎದ್ದಿದ್ದಾರೆ. ಇನ್ನೊಂದೆಡೆ ಬಿಜೆಪಿ ವತಿಯಿಂದ ಈ ಬಾರಿ ಕೂಡ ಸಿದ್ದು ಸವದಿ ತಮ್ಮ ಅದೃಷ್ಟವನ್ನು ಮತ್ತೆ ಪರೀಕ್ಷಿಸಲಿದ್ದಾರೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಕ್ಷೇತ್ರ ಮುಧೋಳ ವಿಧಾನಸಭಾ ಕ್ಷತ್ರದಲ್ಲಿ ಈ ಬಾರಿಯೂ ಕೂಡ ಬಿಜೆಪಿ ವತಿಯಿಂದ ಅವರು ಕಣಕ್ಕಿಳ್ಳಿದಿದ್ದರೆ, ಅವರು ತಮ್ಮ ಕಾಂಗ್ರೆಸ್ ಪಕ್ಷದ ತಮ್ಮ ಹಳೆ ಪ್ರತಿಸ್ಪರ್ಧಿಗೆ ನೇರ ಚಾಲೆಂಜ್ ನೀಡಿದ್ದಾರೆ. ಹೀಗಾಗಿ ಕ್ಷೇತ್ರ ಹಳೆ ಪ್ರತಿಸ್ಪರ್ಧಿಗಳ ಹಣಾಹಣಿಗೆ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಕಳೆದ ಚುನಾವಣೆಯಲ್ಲಿ ಕಾಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿದ್ದ ಸತೀಶ್ ಬಂಡಿವಡ್ಡರ್ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದು ಭಾರಿ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಬೀಳಗಿ ವಿಧಾನಸಭಾ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಾಲ ನಡುವೆ ಫೈಟ್ ನೋಡಲು ಸಿಗಲಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಮುರುಗೇಶ್ ನೀರಾಣಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಜಿ ಟಿ ಪಾಟೀಲ್ ನೇರ ಪೈಪೋಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನಗೊಂಡು ಕೇವಲ ನೆಪ ಮಾತ್ರಕ್ಕೆ ಪ್ರಚಾರಕ್ಕೆ ಇಳಿದ ಮುಖಂಡರಿಂದ ಈ ಕ್ಷೇತ್ರದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಒಳಏಟೀನ್ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ. ಹುನಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಏಕೆಂದರೆ ಕಳೆದ ಮೂರು ಬಾರಿ ಪ್ರತಿಸ್ಪರ್ಧಿಗಳಾಗಿದ್ದ ಬಿಜೆಪಿಯ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ನ ವಿಜಯಾನಂದ್ ಕಾಶಪ್ಪನವರ ಈ ಬಾರಿಯೂ ಕೂಡ ಪ್ರತಿಸ್ಪರ್ಧಿಗಳಾಗಿ ಪೈಪೋಟಿ ನಡೆಸುತ್ತಿದ್ದರೆ. ಕಳೆದ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದ ಆರ್. ಎಸ್ ನವಲಿ ಹಿರೇಮಠ ಈ ಬಾರಿ ಜನಾರ್ಥನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಚುನಾವಣಾ ರಂಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬಾಗಲಕೋಟೆ ಕ್ಷೇತ್ರದ ಕುರಿತು ಹೇಳುವುದಾದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ದೇವರಾಜ್ ಪಾಟೀಲ್ ಟಿಕೆಟ್ ಸಿಗದ ಕಾರಣ ಬಂಡಾಯವೆದ್ದು ತೆನೆಹೊತ್ತ ಮಹಿಳೆಯ ಬಾವುಟ ಹಿಡಿದುಕೊಂಡಿದ್ದಾರೆ. ಕಾಂಗ್ರೆಸ್ ಈ ಬಾರಿ ಬಾಗಲಕೋಟೆಯಿಂದ ಹೆಚ್ ವೈ ಮೇಟಿ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ವತಿಯಿಂದ ಶಾಸಕ ವೀರಣ್ಣ ಚರಂತಿಮಠ ಮತ್ತೊಮ್ಮೆ ತಮ್ಮ ಹಣೆಬರಹ ಪರೀಕ್ಷಿಸಲಿದ್ದಾರೆ. ಅವರ ಸಹೋದರ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ತಮ್ಮ ತಂದೆಯ ನಿಧನದ ನಂತರ ಜಮಖಂಡಿ ಕ್ಷೇತ್ರದಿಂದ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದ ಆನಂದ್ ನ್ಯಾಮಗೌಡ ಅವರಿಗೆ ಈ ಬಾರಿಯೂ ಕೂಡ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ, ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹೊಸ ಮುಖಕ್ಕೆ ಮಣೆಹಾಕಿದೆ. ಜಗದೀಶ್ ಗುಡಗುಂಟಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ.
ಬಾಗಲಕೋಟೆ ಜಿಲ್ಲೆಯ ಕುರುಕ್ಷೇತ್ರ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ-70
ಒಟ್ಟು ಮತದಾರರ ಸಂಖ್ಯೆ- 15,10,828
ಪುರುಷ ಮತದಾರರ ಸಂಖ್ಯೆ- 7,78,376
ಮಹಿಳಾ ಮತದಾರರ ಸಂಖ್ಯೆ- 7,82,368
ಲೈಂಗಿಕ ಅಲ್ಪಸಂಖ್ಯಾತರು - 84
1. ಮುಧೋಳ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,91,946
ಪುರುಷ ಮತದಾರರ ಸಂಖ್ಯೆ-95,216
ಮಹಿಳಾ ಮತದಾರರ ಸಂಖ್ಯೆ-96,727
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಗೋವಿಂದ ಮಕ್ತಪ್ಪ ಕಾರಜೋಳ್- 76,431 ಅಂತರ: 15482 (51.63%)
INC- ಬಂಡಿವಡ್ಡರ್ ಸತೀಶ್ ಚಿನ್ನಪ್ಪ- 60,949 (41.17%)
JDS- ಶಂಕರ್ ಎನ್ ನಾಯಕ್- 4,431 (2.99%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಗೋವಿಂಡ್ ಮುಕ್ತಪ್ಪ ಕಾರಜೋಳ
ಕಾಂಗ್ರೆಸ್-ತಿಮ್ಮಾಪುರ್ ರಾಮಪ್ಪ ಬಾಳಪ್ಪಾ
ಜೆಡಿಎಸ್-ಧರ್ಮರಾಜ್ ವಿದ್ಧಲ್ ದೊಡಮನಿ
ತೆರದಾಳ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,16,384
ಪುರುಷ ಮತದಾರರ ಸಂಖ್ಯೆ-1,08,618
ಮಹಿಳಾ ಮತದಾರರ ಸಂಖ್ಯೆ-1,07,757
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಸಿದ್ದು ಸವದಿ - 87,583 ಅಂತರ: 21113(50.45%)
INC- ಉಮಾಶ್ರೀ -66,470 (38.29%)
JDS- ಬಸಪ್ಪ ಕೆ ಕೊಣ್ಣೂರ- 12,462(7.18%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಸಿದ್ದು ಸವದಿ
ಕಾಂಗ್ರೆಸ್- ಸಿದ್ದು ರಾಮಪ್ಪ ಕೊಣ್ಣೂರ್
ಜೆಡಿಎಸ್- ಸುರೇಶ್ ಅರ್ಜುನ್ ಮಡಿವಾಳರ್
3 ಜಮಖಂಡಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,98,957
ಪುರುಷ ಮತದಾರರ ಸಂಖ್ಯೆ-1,00,023
ಮಹಿಳಾ ಮತದಾರರ ಸಂಖ್ಯೆ-98,929
2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಸಿದ್ದು ಭೀಮಪ್ಪ ನ್ಯಾಮಗೌಡ 49,245-ಅಂತರ: 2795(32.06%)
BJP- ಕುಲಕರ್ಣಿ ಶ್ರೀಕಾಂತ್ ಸುಬ್ರಾವ್-46,450 (30.24%)
IND- ನಿರಾಣಿ ಸಂಗ್ಮೇಶ್ ರುದ್ರಪ್ಪ- 24,461(15.92%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಜಗದೀಶ್ ಶಿವಯ್ಯ ಗುಡಗುಂಟಿ
ಕಾಂಗ್ರೆಸ್ - ಆನಂದ್ ಸಿದ್ದು ನ್ಯಾಮಗೌಡ
ಜೆಡಿಎಸ್-ಯಾಕೂಬ್ ಕಪಡೆವಾಲೆ
4. ಬೀಳಗಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,14,327
ಪುರುಷ ಮತದಾರರ ಸಂಖ್ಯೆ-1,06,581
ಮಹಿಳಾ ಮತದಾರರ ಸಂಖ್ಯೆ-1,07,719
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP-ಮುರುಗೇಶ್ ರುದ್ರಪ್ಪ ನಿರಾಣಿ- 85,135-ಅಂತರ: 4811 (49.12)%
INC- ಜಗದೀಶ ತಿಮ್ಮನಗೌಡ ಪಾಟೀಲ- 80,324 (46.34%)
JDS- ಸಂಗಪ್ಪ ತಿಪ್ಪಣ್ಣ ಕಂದಗಲ್- 1,773 (1.02%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ನಿರಾಣಿ ಮುರುಗೇಶ್ ರುದ್ರಪ್ಪ
ಕಾಂಗ್ರೆಸ್ -ಜೆಟಿ ಪಾಟೀಲ್
ಜೆಡಿಎಸ್-ರುಕಮುದ್ದೀನ್ ಸೌದಾಗರ್
5. ಬಾದಾಮಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,14,834
ಪುರುಷ ಮತದಾರರ ಸಂಖ್ಯೆ-1,08,524
ಮಹಿಳಾ ಮತದಾರರ ಸಂಖ್ಯೆ-1,06,294
2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಸಿದ್ದರಾಮಯ್ಯ- 67,599-ಅಂತರ: 1696(41.24%)
BJP- ಬಿ. ಶ್ರೀರಾಮುಲು -65,903 (40.20%)
JDS- ಹನಮಂತ ಮಾವಿನಮರದ- 24,484 (14.94%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಶಾಂತನಗೌಡಾ ತೀರ್ಥಗೌಡಾ ಪಾಟೀಲ್
ಕಾಂಗ್ರೆಸ್- ಬಿ ಬಿ ಚಿಮ್ಮನಕಟ್ಟಿ
ಜೆಡಿಎಸ್-ಹಣಮಂತ್ ಬಿ ಮಾವಿನಮರದ
ಇದನ್ನೂ ಓದಿ-Karnataka Assembly Election Result 2023: ಬೆಂಗಳೂರಿನ 32 ಕ್ಷೇತ್ರಗಳಲ್ಲಿ ಗೆಲುವಿನ ಹಾರ ಯಾರ ಕೊರಳಿಗೆ?
6. ಬಾಗಲಕೋಟೆ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ- 2,26,012
ಪುರುಷ ಮತದಾರರ ಸಂಖ್ಯೆ-1,13,131
ಮಹಿಳಾ ಮತದಾರರ ಸಂಖ್ಯೆ-1,12,866
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ವೀರಭದ್ರಯ್ಯ (ವೀರಣ್ಣ) ಚರಂತಿಮಠ - 85,653 - ಅಂತರ: 15934(53.03%)
INC- ಮೇಟಿ ಹುಲ್ಲಪ್ಪ ಯಮನಪ್ಪ - 69,719 (43.17%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ವೀರಣ್ಣ ಚರಂತಿಮಠ
ಕಾಂಗ್ರೆಸ್- ಮೇಟಿ ಹುಲ್ಲಪ್ಪ ಯಮನಪ್ಪ
ಜೆಡಿಎಸ್-ದೇವರಾಜ್ ಪಾಟೀಲ್
7. ಹುನಗುಂದ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,11,724
ಪುರುಷ ಮತದಾರರ ಸಂಖ್ಯೆ- 1,06,186
ಮಹಿಳಾ ಮತದಾರರ ಸಂಖ್ಯೆ- 1,05,526
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ದೊಡ್ಡನಗೌಡ ಜಿ ಪಾಟೀಲ್- 65,012 - ಅಂತರ: 5227(41.53)%
INC- ಕಾಶಪ್ಪನವರ್ ವಿಜಯಾನಂದ್ ಶಿವಶಂಕ್ರಪ್ಪ- 59,785 (38.19%)
IND- ಎಸ್.ಆರ್.ನವಲಿಹಿರೇಮಠ- 25,850 (16.51%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ದೊಡ್ಡಣಗೌಡ ಜಿ ಪಾಟೀಲ್
ಕಾಂಗ್ರೆಸ್-ವಿಜಯಾನಂದ್ ಕಾಶಪ್ಪನವರ್
ಜೆಡಿಎಸ್-ಬೊಲಿ ಶಿವಪ್ಪಾ ಮಹಾದೇವಪ್ಪ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.