ನ್ಯೂ ಇಯರ್ ಗೆ ಬೆಂಗಳೂರು ಹೊರವಲಯದಲ್ಲಿ ಪೊಲೀಸ್ ಸರ್ಪಗಾವಲು: ಮೂರು ದಿನ ಚಾರಣ ಬೆಟ್ಟಗಳು ಬಂದ್

ಸಂಭ್ರಮಾಚರಣೆಗೆ 31 ರಾತ್ರಿ 1 ಗಂಟೆವರಿಗೂ ಮಾತ್ರ ಅನುಮತಿಯಿದ್ದು, ಒಂದು ಗಂಟೆ ನಂತರ ಡಾಬಾ ಪಬ್ ಎಲ್ಲವನ್ನೂ ಬಂದ್ ಮಾಡಲು ಸೂಚಿಸಲಾಗಿದೆ. ಅನುಮತಿ ಇಲ್ಲದೆ ಪಾರ್ಟಿ ಅಯೋಜನೆ ಆಯೋಜನೆ‌ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Written by - VISHWANATH HARIHARA | Last Updated : Dec 29, 2023, 03:33 PM IST
  • ಡಿಸೆಂಬರ್ 30 ರಿಂದ ಜನವರಿ 1 ರವರೆಗೂ ಶಿವಗಂಗೆ , ಸಿದ್ದರಬೆಟ್ಟ, ಅವತಿ ಬೆಟ್ಟ, ಮಾಕಳಿ ಬೆಟ್ಟದಲ್ಲಿ ಚಾರಣಕ್ಕೆ ನಿಷೇಧಿಸಲಾಗಿದೆ.
  • ಮ್ಯೂಸಿಕ್ , ಡಿಜೆ ಕಾರ್ಯಕ್ರಮದ ಮೇಲೆ ನಿಗಾ ವಹಿಸಲಾಗಿದ್ದು, ರೆಸ್ಟೋರೆಂಟ್ ಮತ್ತು ಫಾರ್ಮ್ ಹೌಸ್ ನಲ್ಲಿ ಮ್ಯೂಸಿಕ್ ಪ್ರೋಗ್ರಾಂ ಇಡುವವರು ಪೊಲೀಸರಿಗೆ ಮಾಹಿತಿ‌ ನೀಡುವಂತೆ ಸೂಚನೆ
ನ್ಯೂ ಇಯರ್ ಗೆ ಬೆಂಗಳೂರು ಹೊರವಲಯದಲ್ಲಿ ಪೊಲೀಸ್ ಸರ್ಪಗಾವಲು: ಮೂರು ದಿನ ಚಾರಣ ಬೆಟ್ಟಗಳು ಬಂದ್ title=

ಬೆಂಗಳೂರು: ಹೊಸ ವರ್ಷಕ್ಕೆ ಇನ್ನೆರಡು ದಿನ ಬಾಕಿ ಇದೆ‌. ಈ ಹಿನ್ನೆಲೆ ಬೆಂಗಳೂರು ಹೊರ ವಲಯ ಮತ್ತು ಗ್ರಾಮಾಂತರ ದಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
31 ರಾತ್ರಿ ಹೊಸ ವರ್ಷಾಚರಣೆ  ಹಿನ್ನೆಲೆ ನಂದಿ ಹಿಲ್ಸ್ ರಸ್ತೆ , ನೆಲಮಂಗಲ ಅನೆಕಲ್ ಹೊಸಕೋಟೆ ಸೇರಿ ಹಲವೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಸೆಂಬರ್ 30 ರಿಂದ ಜನವರಿ 1 ರವರೆಗೂ ಶಿವಗಂಗೆ , ಸಿದ್ದರಬೆಟ್ಟ, ಅವತಿ ಬೆಟ್ಟ, ಮಾಕಳಿ ಬೆಟ್ಟದಲ್ಲಿ ಚಾರಣಕ್ಕೆ ನಿಷೇಧಿಸಲಾಗಿದೆ. ಮ್ಯೂಸಿಕ್ , ಡಿಜೆ ಕಾರ್ಯಕ್ರಮದ ಮೇಲೆ ನಿಗಾ ವಹಿಸಲಾಗಿದ್ದು, ರೆಸ್ಟೋರೆಂಟ್ ಮತ್ತು ಫಾರ್ಮ್ ಹೌಸ್ ನಲ್ಲಿ ಮ್ಯೂಸಿಕ್ ಪ್ರೋಗ್ರಾಂ ಇಡುವವರು ಪೊಲೀಸರಿಗೆ ಮಾಹಿತಿ‌ ನೀಡುವಂತೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ- ಹೊಸ ವರ್ಷಾಚರಣೆ ಸಂಭ್ರಮಾಚರಣೆ ಹಿನ್ನೆಲೆ ಕೋವಿಡ್‌ ಬಗ್ಗೆ ಆರೋಗ್ಯ ಇಲಾಖೆ ಅಲರ್ಟ್‌

ಸಂಭ್ರಮಾಚರಣೆಗೆ 31 ರಾತ್ರಿ 1 ಗಂಟೆವರಿಗೂ ಮಾತ್ರ ಅನುಮತಿಯಿದ್ದು, ಒಂದು ಗಂಟೆ ನಂತರ ಡಾಬಾ ಪಬ್ ಎಲ್ಲವನ್ನೂ ಬಂದ್ ಮಾಡಲು ಸೂಚಿಸಲಾಗಿದೆ. ಅನುಮತಿ ಇಲ್ಲದೆ ಪಾರ್ಟಿ ಅಯೋಜನೆ ಆಯೋಜನೆ‌ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ- ಯತ್ನಾಳ್‌ 40 ಸಾವಿರ ಕೋಟಿ ಆರೋಪ ಬಿಜೆಪಿಗೆ ತಲೆಬಿಸಿ..!

ಅಷ್ಟೇ ಅಲ್ಲದೆ ಬೆಂಗಳೂರು ಸಿಟಿ ಸಂಪರ್ಕಿಸುವ ರಸ್ತೆಗಳಲ್ಲಿ ನಾಕ ಬಂದಿಯಿದ್ದು, ಗಾಂಜಾ, ಡ್ರಗ್ ನಗರ ಪ್ರವೇಶಿಸಿದಂತೆ ತಪಾಸಣೆ ನಡೆಸಲಾಗುವುದು ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News