Mandya: ನೆಚ್ಚಿನ ನಾಯಕನಿಗೆ ಹಾರ ಹಾಕುವ ಬರದಲ್ಲಿ ಅಭಿಮಾನಿಗಳಿಂದ ಎಡವಟ್ಟು!

ತಮ್ಮ ನೆಚ್ಚಿನ ನಾಯಕರಿಗೆ ಹಾರ ಹಾಕಿ ಸಂಭ್ರಮ ಪಡುವುದು ಟ್ರೆಂಡ್‌ ಆಗಿದೆ. ಆದರೆ ಇಲ್ಲೊಂದು ಹಾರದ ಕಥೆ ಶಿಕ್ಷಾರ್ಹ ಅಪರಾಧಗೆ ಗುರಿಯಾಗಿದೆ ಅಷ್ಟಕ್ಕೂ ಹಾರದ ಹಿಂದಿರುವ ರಹಸ್ಯವೇನು ನೋಡೋಣ ಬನ್ನಿ.. 

Written by - Zee Kannada News Desk | Last Updated : Mar 13, 2023, 06:07 PM IST
  • ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಮುಖಂಡ, ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ
  • ಬೃಹತ್ ನವಿಲು ಗರಿ ಹಾರದ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್
  • ಅಸಲಿ ನವಿಲು ಗರಿ ಹಾರವೆಂದು ಜೆಡಿಎಸ್ ನಾಯಕರ ವಾದ
Mandya: ನೆಚ್ಚಿನ ನಾಯಕನಿಗೆ ಹಾರ ಹಾಕುವ ಬರದಲ್ಲಿ ಅಭಿಮಾನಿಗಳಿಂದ ಎಡವಟ್ಟು! title=

ಮಂಡ್ಯ: ಇತ್ತೀಚೇಗೆ ರಾಜಕೀಯ ಹಾಗೂ ಸಿನಿಮಾ ನಾಯಕರ ಮೇಲೆ ವಿಭಿನ್ನ ರೀತಿಯಲ್ಲಿ ಅಭಿಮಾನ ವ್ಯಕ್ತ ಪಡಿಸುವುದು ಸಾಮಾನ್ಯವಾಗಿದೆ.ಅದರಲ್ಲೂ ತಮ್ಮ ನೆಚ್ಚಿನ ನಾಯಕರಿಗೆ ಹಾರ ಹಾಕಿ ಸಂಭ್ರಮ ಪಡುವುದು ಟ್ರೆಂಡ್‌ ಆಗಿದೆ.ಅದರಲ್ಲೂಕೆಲ ತಿಂಗಳುಗಳ ಹಿಂದೆ ಜೆಡಿಎಸ್‌ ನಾಯಕ ಹೆಚ್ ಡಿ ಕುಮಾರಸ್ವಾಮಿ ಹಾಕಿರುವ ಹಾರದ ಪಟ್ಟಿಗಳು ಇತ್ತೀಚಿನ ಗಿನ್ನಿಸ್  ದಾಖಲೆ ಸೇರಿರುವುದು ಗೊತ್ತೆ ಇದೆ. ಆದರೆ ಇಲ್ಲೊಂದು ಹಾರದ ಕಥೆ ಶಿಕ್ಷಾರ್ಹ ಅಪರಾಧಗೆ ಗುರಿಯಾಗಿದೆ ಅಷ್ಟಕ್ಕೂ ಹಾರದ ಹಿಂದಿರುವ ರಹಸ್ಯವೇನು ನೋಡೋಣ ಬನ್ನಿ.. 

ಇದನ್ನೂ ಓದಿ: ಭಾರತವೆಂದರೆ ಕೇವಲ ಹಿಂದಿ ಭಾಷೆಯಲ್ಲ: ನಟಿ ರಮ್ಯಾ

ನೆಚ್ಚಿನ ನಾಯಕನಿಗೆ ಹಾರ ಹಾಕುವ ಬರದಲ್ಲಿ  ಟ್ರೆಂಡ್‌ ಹುಟ್ಟಿಸುವ ಜೋಶ್‌ಲ್ಲಿ  ಅಭಿಮಾನಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಮುಖಂಡ, ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಇವರಿಗೆ ಅಭಿಮಾನಿಗಳು ಕಾನೂನಿಗೆ ಕಣ್ಣಿಗೆ ಗುರಿಯಾಗಿದ್ದಾರೆ. ತಮ್ಮ ನಾಯಕನಿಗೆ ಬೃಹತ್ ನವಿಲು ಗರಿಯ ಹಾರ ಹಾಕಿದ್ದಾರೆ.

ಇದನ್ನೂ ಓದಿ: CM Bommai: ʼಮಂಡ್ಯ ಇಸ್ ಇಂಡಿಯಾʼ - ಸಿ.ಎಂ.ಬೊಮ್ಮಾಯಿ

ಇದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇದು ಆರ್ಟಿಫಿಶಿಯಲ್ ನವಿಲು ಗರಿ ಹಾರ ಎಂದು ದರ್ಶನ್ ಪುಟ್ಟಣ್ಣಯ್ಯ ಅಭಿಮಾನಿಗಳು ಹೇಳಿದ್ದಾರೆ. ಒಂದು ವೇಳೆ ಅಸಲಿ ನವಿಲು ಗರಿ ಹಾರವಾದ್ರೆ ಪುಟ್ಟಣ್ಣಯ್ಯ ಅಭಿಮಾನಿಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ (Taxidermy) Rules 1973, section 3, 5, 2(e) ಪ್ರಕಾರ ಶಿಕ್ಷಾರ್ಹ ಅಪರಾಧ ಗುರಿಯಾಗುವ ಸಾಧ್ಯತೆ ಇದೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News