ಭಾರತವೆಂದರೆ ಕೇವಲ ಹಿಂದಿ ಭಾಷೆಯಲ್ಲ: ನಟಿ ರಮ್ಯಾ

ಭಾರತವು ವಿಭಿನ್ನ ಸಂಸ್ಕೃತಿಗಳು ಮತ್ತು ಭಾಷೆಗಳ ವೈವಿಧ್ಯಮಯ ದೇಶವೆಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಭಾರತವೆಂದರೆ ಕೇವಲ ಹಿಂದಿಯಲ್ಲ. ಭಾರತ ಕೇವಲ ಬಾಲಿವುಡ್ ಅಲ್ಲ. ಭಾರತವೆಂದರೆ ಹಿಂದಿಯೆಂಬ ರೂಢಿಗತ ಚಿಂತನೆಯೊಂದು ಆಲಸಿತನ ಎಂದು ನಟಿ ರಮ್ಯಾ ಹೇಳಿದ್ದಾರೆ

Written by - Puttaraj K Alur | Last Updated : Mar 13, 2023, 03:47 PM IST
  • RRR ಸಿನಿಮಾದ ‘ನಾಟು-ನಾಟು’ ಹಾಡಿಗೆ ಆಸ್ಕರ್ ಸಿಕ್ಕಿದ್ದಕ್ಕೆ ನಟಿ ರಮ್ಯಾ ಖುಷ್
  • ಭಾರತವು ವಿಭಿನ್ನ ಸಂಸ್ಕೃತಿ & ಭಾಷೆಗಳ ವೈವಿಧ್ಯಮಯ ದೇಶವೆಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ
  • ಭಾರತವೆಂದರೆ ಕೇವಲ ಹಿಂದಿಯಲ್ಲ, ಭಾರತ ಕೇವಲ ಬಾಲಿವುಡ್ ಅಲ್ಲವೆಂದ ನಟಿ ರಮ್ಯಾ
ಭಾರತವೆಂದರೆ ಕೇವಲ ಹಿಂದಿ ಭಾಷೆಯಲ್ಲ: ನಟಿ ರಮ್ಯಾ  title=
'ಭಾರತವೆಂದರೆ ಕೇವಲ ಹಿಂದಿಯಲ್ಲ'

ಬೆಂಗಳೂರು: ಭಾರತವೆಂದರೆ ಕೇವಲ ಹಿಂದಿಯಲ್ಲ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು, ಹಿಂದಿವಾಲಿಗೆ ಚಳಿ ಬಿಡಿಸಿದ ಕನ್ನಡಿಗ ಆಟೋ ಚಾಲಕನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದಿಲ್ಲವೆಂದು ಜಗಳವಾಡಿದ್ದ ಹಿಂದಿ ಮಹಿಳೆಯನ್ನು ಆಟೋದಿಂದ ಕೆಳಕ್ಕಿಳಿಸಿದ ಆಟೋ ಚಾಲಕನ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ನಟಿ ರಮ್ಯಾ ಹಂಚಿಕೊಂಡಿದ್ದಾರೆ. ‘ನಾಟು–ನಾಟು’ ಗೀತೆಗೆ ಆಸ್ಕರ್‌ ಪ್ರಶಸ್ತಿ ಪಡೆದಿರುವ ‘RRR’ ಚಿತ್ರತಂಡವನ್ನು ನಟಿ ರಮ್ಯಾ ಅಭಿನಂದಿಸಿದ್ದು, ‘ಭಾರತವೆಂದರೆ ಕೇವಲ ಹಿಂದಿಯಲ್ಲ’ವೆಂದು ಹೇಳಿದ್ದಾರೆ.

ಇದನ್ನೂ ಓದಿ: Oscars 2023 : ಇದೇನಿದು ನಾಮಿನೇಟ್‌ ಆಗದೆಯೇ ಆಸ್ಕರ್‌ ಗೆದ್ರಾ ವಿವೇಕ್ ಅಗ್ನಿಹೋತ್ರಿ!

'ಎಸ್.ಎಸ್.ರಾಜಮೌಳಿ ನಿರ್ದೇಶನದ RRR ಸಿನಿಮಾದ ‘ನಾಟು-ನಾಟು’ ಹಾಡಿಗೆ ಆಸ್ಕರ್ ಸಿಕ್ಕಿದ್ದು, ಈ ಸಾಧನೆ ಮಾಡಿರುವುದು ನನಗೆ ತುಂಬಾ ಖುಷಿಯಾಗಿದೆ. ಭಾರತವು ವಿಭಿನ್ನ ಸಂಸ್ಕೃತಿಗಳು ಮತ್ತು ಭಾಷೆಗಳ ವೈವಿಧ್ಯಮಯ ದೇಶವೆಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಭಾರತವೆಂದರೆ ಕೇವಲ ಹಿಂದಿಯಲ್ಲ. ಭಾರತ ಕೇವಲ ಬಾಲಿವುಡ್ ಅಲ್ಲ. ಭಾರತವೆಂದರೆ ಹಿಂದಿಯೆಂಬ ರೂಢಿಗತ ಚಿಂತನೆಯೊಂದು ಆಲಸಿತನ’ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಹತ್ತಿದ್ದ ಮಹಿಳೆಯೊಬ್ಬಳು ಚಾಲಕನಿಗೆ ‘ನನಗೆ ಕನ್ನಡ ಗೊತ್ತಿಲ್ಲ, ಹಿಂದಿಯಲ್ಲಿಯೇ ಮಾತನಾಡಿ’ ಎಂದು ಅವಾಜ್ ಹಾಕಿದ್ದಳು. ಇದಕ್ಕೆ ಆಟೋ ಚಾಲಕ ‘ನೀವು ಇರುವುದು ಕರ್ನಾಟಕದಲ್ಲಿ ಮೊದಲು ಕನ್ನಡ ಮಾತನಾಡಿ, ನಾನೇಕೆ ಹಿಂದಿ ಮಾತನಾಡಬೇಕು’ ಎಂದು ಮಹಿಳೆಗೆ ಚಳಿ ಬಿಡಿಸಿದ್ದ. ಈ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋಗೆ ಕನ್ನಡಪರ ಹೋರಾಟಗಾರರು ಸೇರಿದಂತೆ ಲಕ್ಷಾಂತರ ಕನ್ನಡಿಗರು ಬೆಂಬಲ ಸೂಚಿಸಿದ್ದರು. 

ಇದನ್ನೂ ಓದಿ: OSCA’RRR’… ದೇಶಕ್ಕೆ ಆಸ್ಕರ್ ಬಂದಿದೆ ನಿಜ… ಆದ್ರೆ ಕರ್ನಾಟಕಕ್ಕೆ ಡಬಲ್-ಸ್ಪೆಷಲ್ ಧಮಾಖ ಯಾಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News