R Dhruvanarayana Funeral : ಮಣ್ಣಲ್ಲಿ ಮಣ್ಣಾದ ಅಜಾತಶತ್ರು ಆರ್‌ ಧ್ರುವನಾರಾಯಣ

ರಾಜಕಾಣರದಲ್ಲಿದ್ದ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಆರ್.ಧ್ರುವನಾರಾಯಣ ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಮಣ್ಣಲ್ಲಿ ಮಣ್ಣಾದರು. ಧ್ರುವನಾರಾಯಣ ಅವರ ತಂದೆ-ತಾಯಿ ಪಕ್ಕವೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನಡೆಯಿತು.

Written by - MALLIKARJUN PATIL | Last Updated : Mar 12, 2023, 04:32 PM IST
  • ರಾಜಕಾಣರದಲ್ಲಿದ್ದ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಆರ್.ಧ್ರುವನಾರಾಯಣ
  • ಇಂದು ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಮಣ್ಣಲ್ಲಿ ಮಣ್ಣಾದರು
  • ತಂದೆ-ತಾಯಿ ಪಕ್ಕವೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ
R Dhruvanarayana Funeral : ಮಣ್ಣಲ್ಲಿ ಮಣ್ಣಾದ ಅಜಾತಶತ್ರು ಆರ್‌ ಧ್ರುವನಾರಾಯಣ title=

ಚಾಮರಾಜನಗರ : ರಾಜಕಾಣರದಲ್ಲಿದ್ದ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಆರ್.ಧ್ರುವನಾರಾಯಣ ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಮಣ್ಣಲ್ಲಿ ಮಣ್ಣಾದರು. ಧ್ರುವನಾರಾಯಣ ಅವರ ತಂದೆ-ತಾಯಿ ಪಕ್ಕವೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನಡೆಯಿತು.  ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಕುರ್ಜು ಕಟ್ಟಿ ಧ್ರುವ ಅವರ ಅಂತಿಮ  ಮೆರವಣಿಗೆ ನಡೆಸಿ ಬಳಿಕ ಮಣ್ಣು ಮಾಡಲಾಯಿತು.  ಪತ್ನಿ ವೀಣಾ ಮಕ್ಕಳಾದ ದರ್ಶನ್, ಧೀರನ್ ಶೋಕ ಸಾಗರದಲ್ಲಿ ಮುಳುಗಿದ್ದರು.  ದುಃಖ ಹೊತ್ತ ಸಾವಿರಾರು ಕಣ್ಣುಗಳು ಕಂಬನಿ ಹಾಕುತ್ತ ರಾಜಕೀಯ ಧ್ರುವತಾರೆಯನ್ನು ಭಾರವಾದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು.

ಶನಿವಾರ ತಡರಾತ್ರಿ ಚಾಮರಾಜನಗರಕ್ಕೆ ಫಾರ್ಥಿವ ಶರೀರ ತರಲಾಗಿತ್ತು. ಜಿಲ್ಲಾಕೇಂದ್ರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಹುಟ್ಟೂರಿಗೆ ಪಾರ್ಥೀವ ಶರೀರವನ್ನು ತಂದು ಡಾ‌‌.ಬಿ‌.ಆರ್.ಅಂಬೇಡ್ಕರ್ ಭವನ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನೆಚ್ಚಿನ  ಜನನಾಯಕನಿಗೆ ಅಂತಿಮ ನಮನ ಸಲ್ಲಿಸಲು ಹಳ್ಳಿ-ಹಳಿಗಳಿಂದ ಜನರು ಆಟೋ, ಜೀಪ್‌, ಟ್ರಕ್‌, ಟ್ಯಾಕ್ಟರ್‌ ಹೀಗೆ ಅನೇಕ ವಾಹನಗಳನ್ನು ಮಾಡಿಕೊಂಡು ತಂಡೊಪತಂಡವಾಗಿ ಬಂದು ಅಂತಿಮ ನಮನ ಸಲ್ಲಿಸಿದರು‌‌. 

ಇದನ್ನೂ ಓದಿ : MB Patil : ಗ್ರಾಮಸ್ಥರಿಂದ ಲೋರ್ಕಾಪಣೆಗೆ ಸಿದ್ಧಗೊಂಡಿದೆ ಎಂಬಿ ಪಾಟೀಲ ಕಂಚಿನ ಪುತ್ಥಳಿ

ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಮಾಜಿ ಸಂಸದ ಧ್ರುವನಾರಾಯಣ ಅವರಿಗೆ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಚಾಮರಾಜನಗರ ಪೊಲೀಸ್ ಇಲಾಖೆಯು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿತು. ಜಿಲ್ಲಾಡಳಿತ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಶಾಸಕರುಗಳು ಪುಷ್ಪ ಮಾಲೆ ಅರ್ಪಿಸಿ ಅಂತಿಮ ಗೌರವ ಸಲ್ಲಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌ ಧ್ರವನಾರಾಯಣ ಅಂತಿಮ ನಮನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಧ್ರುವನಾರಾಯಣ ಪುತ್ರ ದರ್ಶನ ಭುಜ ತಟ್ಟಿ ಸಮಾಧಾನ ಪಡಿಸಿದ ಸಿದ್ದರಾಮಯ್ಯ ದೈರ್ಯ ತುಂಬಿದರು. ನಂತರ, ಡಿಕೆ ಶಿವಕುಮಾರ್ ಕಾಂಗ್ರೆಸ್ ಧ್ವಜವನ್ನು ಪಾರ್ಥೀವ  ಶರೀರದ ಮೇಲೆ ಹೊದಿಸಿ ಬಿಕ್ಕಿ-ಬಿಕ್ಕಿ ಅತ್ತರು. ಸಲೀಂ ಅಹ್ಮದ್, ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಕೆ.ಎಚ್‌.ಮುನಿಯಪ್ಪ, ಸತೀಶ್ ಜಾರಕಿಹೊಳಿ, ವಿಶ್ವನಾಥ್, ರೋಜಿ ಜಾನ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಸಿ‌.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕರುಗಳು ಕುಟುಂಬಸ್ಥರಿಗೆ ಸಮಾಧಾನ ಪಡಿಸುತ್ತಿದುದು ಸಾಮಾನ್ಯವಾಗಿತ್ತು.

ಇನ್ನೂ ಸಾಧನೆಯ ಎತ್ತರಕ್ಕೆ ಬೆಳೆಯಬೇಕಾಗದ್ದ ದ್ರುವತಾರೆ ಚಕ್ಕವಯಸ್ಸಿನಲ್ಲೇ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಇವರ ರಾಜಕೀಯ ಜೀವನ ಇತರ ರಾಜಕೀಯ ವ್ಯಕ್ತಿಗಳಿಗೂ ಮಾಧರಿಯಾಗಲಿ ಎಂಬುದೇ ಹಾರೈಕೆ.

ಇದನ್ನೂ ಓದಿ : ಮೋದಿಯವರೇ ಪೇಟಿಎಂ ಲೂಟಿಯಲ್ಲಿ ನಿಮಗೂ ಪಾಲಿದೆಯೇ...?; ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News