Ashwath Narayan: ‘ಪಕ್ಷದಲ್ಲಿ ನಾನೇ ಸೂಪರ್‌ಮ್ಯಾನ್, ಸೂಪರ್‌ಪವರ್ ಅಂದ್ರೆ ಕೆಲಸ ಆಗಲ್ಲ’

ಬಿಜೆಪಿಯ ಗೆಲುವು ಯಾವುದೇ ನಾಯಕರಿಗೆ ಸಲ್ಲಬೇಕಿಲ್ಲ. ಅದು ಪಕ್ಷದ ಗೆಲುವು. ಜನರು ನಂಬಿಕೆ ಇಟ್ಟು ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ

Last Updated : Jan 8, 2021, 01:20 PM IST
  • ಬಿಜೆಪಿಯ ಗೆಲುವು ಯಾವುದೇ ನಾಯಕರಿಗೆ ಸಲ್ಲಬೇಕಿಲ್ಲ. ಅದು ಪಕ್ಷದ ಗೆಲುವು. ಜನರು ನಂಬಿಕೆ ಇಟ್ಟು ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ
  • ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಸ್ಪಷ್ಟ
  • ಗೆಲುವಿನ ‌ಕ್ರೆಡಿಟ್ ಯಾರಿಗೆ ಸೇರಬೇಕು ಎಂಬ ಶೀರ್ಷಿಕೆಯಡಿ ವಿಕ ಪ್ರಕಟಿಸಿದ್ದ ವಿಶೇಷ ವರದಿ ಬಗ್ಗೆ ಪ್ರಸ್ತಾಪಿಸಿದರು.
Ashwath Narayan: ‘ಪಕ್ಷದಲ್ಲಿ ನಾನೇ ಸೂಪರ್‌ಮ್ಯಾನ್, ಸೂಪರ್‌ಪವರ್ ಅಂದ್ರೆ ಕೆಲಸ ಆಗಲ್ಲ’ title=

ರಾಮನಗರ: ಬಿಜೆಪಿಯ ಗೆಲುವು ಯಾವುದೇ ನಾಯಕರಿಗೆ ಸಲ್ಲಬೇಕಿಲ್ಲ. ಅದು ಪಕ್ಷದ ಗೆಲುವು. ಜನರು ನಂಬಿಕೆ ಇಟ್ಟು ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಸ್ಪಷ್ಟ ಪಡಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೆಲುವಿನ ‌ಕ್ರೆಡಿಟ್ ಯಾರಿಗೆ ಸೇರಬೇಕು ಎಂಬ ಶೀರ್ಷಿಕೆಯಡಿ ವಿಕ ಪ್ರಕಟಿಸಿದ್ದ ವಿಶೇಷ ವರದಿ ಬಗ್ಗೆ ಪ್ರಸ್ತಾಪಿಸಿದರು. ಬಿಜೆಪಿ(BJP) ಪಕ್ಷವು ವ್ಯಕ್ತಿಗಳ ಮೇಲೆ ನಿಂತಿಲ್ಲ. ಇಲ್ಲಿ ಸಿದ್ಧಾಂತ ಹಾಗೂ ಗುರಿಗಳಷ್ಟೆ ಮುಖ್ಯ. ಬಿಜೆಪಿಯ ಗೆಲುವು ಸ್ಥಳೀಯ ಕಾರ್ಯಕರ್ತರಿಂದ ಹಿಡಿದು ಪಕ್ಷದವರೆಗೂ ಸಲ್ಲಬೇಕು ಎಂದು ಟಾಂಗ್ ನೀಡಿದರು.

Cabinet Expansion: ಸಚಿವ ಸ್ಥಾನದ ಆಕಾಂಕ್ಷಿಗಳಿಗೊಂದು 'ಗುಡ್ ನ್ಯೂಸ್'..!

ಅಲ್ಲದೇ ಬಿಜೆಪಿಯಲ್ಲಿ ಗುಂಪುಗಾರಿಕೆಗಳಿಲ್ಲ. ಜನರು ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ನಮ್ಮ ಮೇಲಿರುವ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೆವೆ. ಕೆಲ ಭಿನ್ನಾಭಿಪ್ರಾಯಗಳಿದ್ದರೂ, ಪಕ್ಷದಲ್ಲಿ ಅವುಗಳಿಗೆ ಮಾನ್ಯತೆ ಇಲ್ಲ. ಪಕ್ಷದ ಶಿಸ್ತು ಉಲ್ಲಂಘನೆ ಮಾಡುವವರಿಗೆ ಇಲ್ಲಿ ಮಾನ್ಯತೆ ಇಲ್ಲ. ಅಂತಹವರಿಗೆ ಅಸ್ತಿತ್ವವು ಇರುವುದಿಲ್ಲ‌ ಎಂದು ರುದ್ರೇಶ್ ಅವರಿಗೆ ತಿರುಗೇಟು ನೀಡಿದರು.

Rain : ಚಳಿ ಇರಬೇಕಾದ ಹೊತ್ತಲ್ಲಿ ಭರ್ಜರಿ ಮಳೆ..! ಯಾಕೆ ಹೀಗಾಯ್ತೋ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News