Rain : ಚಳಿ ಇರಬೇಕಾದ ಹೊತ್ತಲ್ಲಿ ಭರ್ಜರಿ ಮಳೆ..! ಯಾಕೆ ಹೀಗಾಯ್ತೋ..?

ಎರಡು ದಿನ ರಾಜ್ಯದಲ್ಲಿ ಭಾರೀ  ಮಳೆಯಾಗುವ  ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ..

Written by - Zee Kannada News Desk | Last Updated : Jan 8, 2021, 09:44 AM IST
  • ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ, ರಾಜ್ಯದಲ್ಲಿ ಮಳೆ
  • ಜ. 12ರ ತನಕ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
  • ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆ ನಿರೀಕ್ಷೆ.
Rain : ಚಳಿ ಇರಬೇಕಾದ ಹೊತ್ತಲ್ಲಿ ಭರ್ಜರಿ ಮಳೆ..! ಯಾಕೆ ಹೀಗಾಯ್ತೋ..? title=
ಜ. 12ರ ತನಕ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಈ ಹೊತ್ತಿಗೆ ಮರಗಟ್ಟುವ ಚಳಿ ಇರಬೇಕಾಗಿತ್ತು. ಬದಲಿಗೆ ಭರ್ಜರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.  ರಾಜ್ಯದ ಏಳು ಜಿಲ್ಲೆಗಳಲ್ಲಿ  ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. 

ಚಳಿಗಾಲದಲ್ಲಿ ಯಾಕೆ ಇಷ್ಟೊಂದು ಮಳೆ..?
ಸಾಮಾನ್ಯವಾಗಿ ಈ ಹೊತ್ತಲ್ಲಿ ರಾಜ್ಯದಲ್ಲಿ ಕೊರೆಯುವ ಚಳಿ 
(Winter) ದಾಖಲಾಗುತ್ತದೆ. ಆದರೆ, ಈಗ ಮಳೆಯೋ ಮಳೆ (Rain). ಇದಕ್ಕೆ ಕಾರಣ ಮೇಲ್ಮೈ ಸುಳಿಗಾಳಿ.  ಬಂಗಾಳ ಕೊಲ್ಲಿಯಲ್ಲಿ (Bay of Bengal) ಇದೀಗ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದ್ದು, ರಾಜ್ಯದ ಕರಾವಳಿ, ಒಳನಾಡಿನಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ದೊರೆತಿದೆ. ಹಾಗಾಗಿ ಜ.8 ಮತ್ತು ಜ.9ರಂದು ಮಳೆಯಾಗಲಿದೆ. 

ಇದನ್ನೂ ಓದಿ : ಭಾರಿ ಮಳೆಯಿಂದಾಗಿ ಧಾರವಾಡದ ರಸ್ತೆಗಳು ಜಲಾವೃತ

ಕರಾವಳಿಯ ದಕ್ಷಿಣ ಕನ್ನಡ(Dakshina Kannada), ಉಡುಪಿ (Udupi), ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು(Kodagu) , ಶಿವಮೊಗ್ಗ,(Shimoga) ಹಾಸನ (Hassan) ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದಲ್ಲಿ ಈಗಾಗಲೇ ಅಲ್ಲಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. 

ಜ.12ರ ತನಕ ಮಳೆ ಸಾಧ್ಯತೆ:
ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ತುಂತುರು ಮಳೆಯ ಮುನ್ಸೂಚನೆ ನೀಡಲಾಗಿದೆ.  ಜ.12 ರ ತನಕ ವರುಣ ದೇವ ರಾಜ್ಯದಲ್ಲಿ ಅಬ್ಬರಿಸಬಹುದು ಎಂಬ ಮುನ್ಸೂಚನೆ ನೀಡಲಾಗಿದೆ. 

ಇದನ್ನೂ ಓದಿ : ಭಾರೀ ಮಳೆಗೆ ತತ್ತರಿಸಿದ ಮಂಗಳೂರು!

ಕೈಯಲ್ಲೊಂದು ಕೊಡೆ ಇರಲಿ:
ರಾಜ್ಯದಲ್ಲಿ ಈಗ ಸರಾಸರಿ ಗರಿಷ್ಠ 25 ಡಿಗ್ರಿ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಾಗಾಗಿ, ಮನೆಯಿಂದ ಹೊರ ಹೋಗುವ ಮೊದಲು ಕೈಯಲ್ಲೊಂದು ಕೊಡೆ ಇಟ್ಟುಕೊಳ್ಳುವುದು ಒಳ್ಳೆಯದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News