Food Poisoning: ಹುಟ್ಟುಹಬ್ಬದ ಹಳಸಿದ ಬಿರಿಯಾನಿ ಸೇವಿಸಿ 24 ಜನ ಅಸ್ವಸ್ಥ

Food Poisoning - ಹುಟ್ಟು ಹಬ್ಬದ ತಂಗಳು ಬಿರಿಯಾನಿ ತಿಂದು 24 ಜನ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಅರೇಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಂತೋಷ್ ಕುಮಾರ್ ಎಂಬುವವರ ಮನೆಯಲ್ಲಿ ನೆನ್ನೆ ಅವರ ಪುತ್ರನ ಹುಟ್ಟುಹಬ್ಬ ಕಾರ್ಯಕ್ರಮ ನೆರವೇರಿತ್ತು. 

Written by - Zee Kannada News Desk | Edited by - Nitin Tabib | Last Updated : Jul 19, 2022, 10:05 PM IST
  • ತಂಗಳು ಅಥವಾ ಹಳಸಿದ ಬಿರಿಯಾನಿಯನ್ನು ಸೇವಿಸಿದ ಕೂಲಿಯಾಳುಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.
  • ತಂಗಳು ಬಿರಿಯಾನಿ ಸೇವಿಸಿದ ಸುಮಾರು 24 ಕೂಲಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
  • ಘಟನೆಯ ಮಾಹಿತಿ ತಿಳಿದ ಬಳಿಕ ಶಾಸಕ ಮಹೇಶ್ ಕೂಡಲೇ ಆಸ್ಪತ್ರೆಗೆ ಧಾವಿಸಿ ಅಸ್ವಸ್ಥರಾಗಿರುವ ಕೂಲಿ ಕಾರ್ಮಿಕರ ವಿಚಾರಣೆ ನಡೆಸಿದ್ದಾರೆ
Food Poisoning: ಹುಟ್ಟುಹಬ್ಬದ ಹಳಸಿದ ಬಿರಿಯಾನಿ ಸೇವಿಸಿ 24 ಜನ ಅಸ್ವಸ್ಥ title=
Biriyani (Representational Image)

Food Poisoning - ಹುಟ್ಟು ಹಬ್ಬದ ತಂಗಳು ಬಿರಿಯಾನಿ ತಿಂದು 24 ಜನ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಅರೇಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಂತೋಷ್ ಕುಮಾರ್ ಎಂಬುವವರ ಮನೆಯಲ್ಲಿ ನೆನ್ನೆ ಅವರ ಪುತ್ರನ ಹುಟ್ಟುಹಬ್ಬ ಕಾರ್ಯಕ್ರಮ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಭರ್ಜರಿ ಬಿರಿಯಾನಿ ಊಟ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಉಳಿದ ಬಿರಿಯಾನಿಯನ್ನು ಸಂತೋಷ್ ಕುಮಾರ್ ತಮ್ಮ ತೊಟದ ಕೂಲಿ ಕಾಮಿಕರಿಗೆ ಕೊಟ್ಟಿದ್ದರು ಎನ್ನಲಾಗಿದೆ. 

ಇದನ್ನೂ ಓದಿ-Har Ghar Tiranga: ರಾಜ್ಯದ ಎಲ್ಲಾ ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಬೇಕು: ಶಿಕ್ಷಣ ಇಲಾಖೆಯಿಂದ ಖಡಕ್ ಆದೇಶ

ಆದರೆ, ನಂತರ ತಂಗಳು ಅಥವಾ ಹಳಸಿದ ಬಿರಿಯಾನಿಯನ್ನು ಸೇವಿಸಿದ ಕೂಲಿಯಾಳುಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಂಗಳು ಬಿರಿಯಾನಿ ಸೇವಿಸಿದ ಸುಮಾರು 24 ಕೂಲಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಹಳಸಿದ ಬಿರಿಯಾನಿ ಸೇವಿಸಿದ ಪುಟ್ಟ ಲಕ್ಷಮ್ಮ.ಮೇಘನಾ. ಲಾವಣ್ಯ.ಕಮಲ. ಯಶವಂತ್. ಸೇರಿದಂತೆ ಎಲ್ಲಾ 24 ಜನರನ್ನು ಹತ್ತಿರದ ಅಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ-'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ'

ಘಟನೆಯ ಮಾಹಿತಿ ತಿಳಿದ ಬಳಿಕ ಶಾಸಕ ಮಹೇಶ್ ಕೂಡಲೇ ಆಸ್ಪತ್ರೆಗೆ ಧಾವಿಸಿ ಅಸ್ವಸ್ಥರಾಗಿರುವ ಕೂಲಿ ಕಾರ್ಮಿಕರ ವಿಚಾರಣೆ ನಡೆಸಿದ್ದಾರೆ ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News