Har Ghar Tiranga: ರಾಜ್ಯದ ಎಲ್ಲಾ ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಬೇಕು: ಶಿಕ್ಷಣ ಇಲಾಖೆಯಿಂದ ಖಡಕ್ ಆದೇಶ

Har Ghar Tiranga: 75ನೇ  ಸ್ವಾತಂತ್ರ್ಯೋತ್ಸವ ಹಿನ್ನೆಲೆ ರಾಜ್ಯ ಹಾಗು ದೇಶದಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ ನಡೆಸಲಾಗುತ್ತಿದೆ.  ಅಮೃತ ಮಹೋತ್ಸವ ಹೆಸರಿನಲ್ಲಿ ಜನಜಾಗೃತಿ ನಡೆಯುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮುಂಬರುವ  ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ  'ಹರ್ ಘರ್ ತಿರಂಗಾ' ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ. ಸೂಚನೆ ಅನ್ವಯ ರಾಜ್ಯದ ಎಲ್ಲಾ  ಪದವಿ, ಸ್ನಾತಕೋತ್ತರ ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.  

Written by - Manjunath Hosahalli | Edited by - Nitin Tabib | Last Updated : Jul 19, 2022, 09:39 PM IST
  • ಸ್ವಾತಂತ್ರ್ಯೋತ್ಸವ ಹಿನ್ನೆಲೆ ರಾಜ್ಯ ಹಾಗು ದೇಶದಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ ನಡೆಸಲಾಗುತ್ತಿದೆ.
  • ಅಮೃತ ಮಹೋತ್ಸವ ಹೆಸರಿನಲ್ಲಿ ಜನಜಾಗೃತಿ ನಡೆಯುತ್ತಿದೆ.
  • ಅದರಲ್ಲಿಯೂ ವಿಶೇಷವಾಗಿ ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ 'ಹರ್ ಘರ್ ತಿರಂಗಾ' ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ.
Har Ghar Tiranga: ರಾಜ್ಯದ ಎಲ್ಲಾ ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಬೇಕು: ಶಿಕ್ಷಣ ಇಲಾಖೆಯಿಂದ ಖಡಕ್ ಆದೇಶ title=
Her Ghar Tiranga Campaign

Har Ghar Tiranga: ಬೆಂಗಳೂರು - 75ನೇ  ಸ್ವಾತಂತ್ರ್ಯೋತ್ಸವ ಹಿನ್ನೆಲೆ ರಾಜ್ಯ ಹಾಗು ದೇಶದಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ ನಡೆಸಲಾಗುತ್ತಿದೆ.  ಅಮೃತ ಮಹೋತ್ಸವ ಹೆಸರಿನಲ್ಲಿ ಜನಜಾಗೃತಿ ನಡೆಯುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮುಂಬರುವ  ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ  'ಹರ್ ಘರ್ ತಿರಂಗಾ' ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ. ಸೂಚನೆ ಅನ್ವಯ ರಾಜ್ಯದ ಎಲ್ಲಾ  ಪದವಿ, ಸ್ನಾತಕೋತ್ತರ ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ-'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ'

ಆಗಸ್ಟ್ 11 ರಿಂದ  17ರವರೆಗೆ  ತ್ರಿವರ್ಣ ದ್ವಜ ಹಾರಿಸಬೇಕು;
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರದ ಈ ಆದೇಶಾನಸಾರ  ಆಗಸ್ಟ್ 11 ರಿಂದ 17ರವರೆಗೆ  ರಾಷ್ಟ್ರಧ್ವಜ ಹಾರಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 19 ಅಂದರ ಮಂಗಳವಾರ ದಿನ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತಾನಾಡಿರುವ ಅವರು, ಇಡೀ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು, ಮದರಸಾಗಳು, ಸೇರಿದಂತೆ ಎಲ್ಲಾ ಸರ್ಕಾರರಿ ಕಚೇರಿಗಳ ಮೇಲೆ ತ್ರಿವರ್ಣ ದ್ವಜ ಹಾರಲಿದೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಈ ಆದೇಶವನ್ನು ಯಾರಾದರು ಮೀರಿದರೆ, ಅವರ ವಿರುದ್ಧ ಕ್ರಮ ಕೂಡ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ-Bangalore: ಡೆತ್‌ ನೋಟ್‌ ಬರೆದಿಟ್ಟು ಪ್ರೊಫೆಸರ್ ಆತ್ಮಹತ್ಯೆ

ಶಾಲಾ , ಕಾಲೇಜುಗಳ ಭೋದಕ, ಭೋದಕೇತರ ಸಿಬ್ಬಂದಿಗಳ ಮನೆ ಮೇಲೆ ತ್ರಿವರ್ಣ ಧ್ವಜ;
ಈ ಅಭೂತಪೂರ್ವ ಅಮೃತ ಮಹೋತ್ಸವ ಹಿನ್ನೆಲೆ ರಾಜ್ಯದ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಸಲುವಾಗಿ ಶಾಲೆಗಳು ಪ್ರಬಂಧ, ರಸಪ್ರಶ್ನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜಿಸಲಿವೆ. ಈ ಆಯೋಜನೆಗಳನ್ನು ರಾಜ್ಯದ ಎಲ್ಲಾ ಶಾಲಾ, ಕಾಲೇಜು ಮತ್ತು ಮದರಸಾಗಳಲ್ಲಿ ಆಯೋಜಿಸಬೇಕು ಎಂದು ರಾಜ್ಯ ಶಿಕ್ಷಣ ಇಲಾಖೆ  ಸೂಚಿಸಿದೆ. ಇದ್ರಲ್ಲಿ ಮತ್ತೊಂದು ವಿಶೇಷತೆ ಎಂದರೆ, ಅಯಾ ಶಾಲಾ , ಕಾಲೇಜುಗಳ ಭೋದಕ, ಭೋದಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ತಮ್ಮ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News