ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ನೆರವು... ಸಹಾಯಹಸ್ತ ನೀಡಿದರೇ 'ನಿಂತು ಮಾತನಾಡಳಿದ್ದಾಳೆ' ಕಂದಮ್ಮ!

ಗುಂಡ್ಲುಪೇಟೆ (Gundlupete) ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಬದುಕು ಹಸನಾಗಲು ಸಹಾಯ ಹಸ್ತಬೇಕಿದೆ. ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದು ಸೂಕ್ತ ವೈದ್ಯಕೀಯ ನೆರವು ಸಿಕ್ಕರೇ ಎಲ್ಕರಂತೇ ತನ್ನ ಮಗಳಾಗುವಳು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.

Written by - Zee Kannada News Desk | Last Updated : Apr 6, 2022, 12:15 PM IST
  • ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ನೆರವು
  • ಸಹಾಯಹಸ್ತ ನೀಡಿದರೇ 'ನಿಂತು ಮಾತನಾಡಳಿದ್ದಾಳೆ' ಕಂದಮ್ಮ!
ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ನೆರವು... ಸಹಾಯಹಸ್ತ ನೀಡಿದರೇ 'ನಿಂತು ಮಾತನಾಡಳಿದ್ದಾಳೆ' ಕಂದಮ್ಮ! title=
ಮಗು

ಚಾಮರಾಜನಗರ: ಆಟವಾಡಿ ಸ್ನೇಹಿತರು, ಪಾಲಕರ ಜೊತೆ ಅರಳು ಹುರಿದಂತೆ ಮಾತನಾಡಬೇಕಾದ ಬಾಲಕಿಗೆ ವಿಧಿಯಾಟದಿಂದ ಮಾತನಾಡುವ ಭಾಗ್ಯವಿಲ್ಲ. ನಿಲ್ಲುವ ಶಕ್ತಿಯನ್ನು ಸಹ ಕಳೆದುಕೊಂಡಿದ್ದಾಳೆ. ಮಗಳ ಈ ದುಸ್ಥಿತಿ ನೋಡಲಾಗದೆ ತಂದೆ-ತಾಯಿ ನಿತ್ಯ ಆಸ್ಪತ್ರೆಗೆ (hospital) ಅಲೆಯುತ್ತಿದ್ದಾರೆ.

ಇದನ್ನೂ ಓದಿ: Controversy: ಆಜಾನ್ ವಿವಾದ ಹಿನ್ನೆಲೆ: ಮಸೀದಿ-ಮಂದಿರಗಳಿಗೆ ಪೊಲೀಸರು ನೀಡಿದ ನೊಟೀಸ್‌ಗಳೆಷ್ಟು..?

ಗುಂಡ್ಲುಪೇಟೆ (Gundlupete) ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಬದುಕು ಹಸನಾಗಲು ಸಹಾಯ ಹಸ್ತಬೇಕಿದೆ. ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದು ಸೂಕ್ತ ವೈದ್ಯಕೀಯ ನೆರವು ಸಿಕ್ಕರೇ ಎಲ್ಕರಂತೇ ತನ್ನ ಮಗಳಾಗುವಳು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.

ಮಗು ಜನಿಸಿದ ವೇಳೆ ಮೆದುಳಿಗೆ (Brain) ಪೆಟ್ಟಾಗಿದ್ದು ಹುಟ್ಟಿದಾಗಲೂ ಅಳಲಿಲ್ಲವಂತೆ.  ಎರಡು ವರ್ಷದ ತನಕ ಕುಳಿತುಕೊಳ್ಳಲು ಶಕ್ತಿ ಇರಲಿಲ್ಲ.‌ ಸತತ ವೈದ್ಯಕೀಯ ಚಿಕಿತ್ಸೆ ಬಳಿಕ ಎರಡು ವರ್ಷಕ್ಕೆ ಮಗು ಕುಳಿತುಕೊಳ್ಳಲು ಆರಂಭಿಸಿದ್ದು, 5ನೇ ವರ್ಷಕ್ಕೆ ಈಗೀಗ ಮಾತು ಆಡಲು ಪ್ರಾರಂಭಿಸಿದ್ದಾಳೆ. 

ಇದನ್ನೂ ಓದಿ: BMTCಯಿಂದ ನೂತನ‌ ಆ್ಯಪ್ ಬಿಡುಗಡೆ, ಪ್ರಯಾಣಿಕರಿಗೆ ಮೊಬೈಲ್ ಪಾಸ್

ನಿರಂತರ ಚಿಕಿತ್ಸೆ ಕೊಡಿಸಿದರೇ ಎಲ್ಲರಂತೆ  ಸ್ನೇಹಾ ಕೂಡ ಆಗಲಿದ್ದಾಳೆ ಎಂದು ಆಯುಷ್ ವೈದ್ಯರು ಭರವಸೆ ಕೊಟ್ಟಿದ್ದಾರೆ‌. ಎಸ್‌ಬಿಐ (SBI) ಗ್ರಾಹಕರ ಸೇವಾ ಕೇಂದ್ರದಲ್ಲಿ ತಾನು ಕೆಲಸ ನಿರ್ವಹಿಸುತ್ತಿದ್ದು ಶಕ್ತಿ ಮೀರಿ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ದಾನಿಗಳು ನೆರವಿನ ಹಸ್ತ ಚಾಚಿದಾರೆ ತನ್ನ ಮಗಳು ಎಲ್ಲರಂತೆ ಆಗಲಿದ್ದಾಳೆ ಎಂದು ಮನವಿ ತಂದೆ ಸಿದ್ದಯ್ಯ ಮಾಡಿಕೊಂಡಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಈ ಬ್ಯಾಂಕ್‌ ಖಾತೆಗೆ ಹಣ ಹಾಕಬಹುದು. 

ಬ್ಯಾಂಕ್ ವಿವರ: 

Siddaiah

Sbi A/c 39202413308 

Ifsc- SBIN0040079

terakanambi branch

Phone-9743780749

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News