Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ

ಅನೇಕ ಬಾರಿ ಎಷ್ಟೇ ಪ್ರಯತ್ನ ಮಾಡಿದರೂ ಸಹ ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ವ್ಯಕ್ತಿ ದಿನದಿಂದ ದಿನಕ್ಕೆ ಸಾಲದಲ್ಲಿ ಮುಳುಗುತ್ತಾನೆ. ಇದನ್ನು ತಪ್ಪಿಸಲು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ತಿಳಿಸಲಾಗಿದೆ.

Written by - Puttaraj K Alur | Last Updated : Jul 28, 2022, 04:30 PM IST
  • ಪ್ರತಿದಿನ ಸಂಜೆ ಮನೆ ಹೊಸ್ತಿಲ ಮೇಲೆ ದೀಪ ಹಚ್ಚುವುದರಿಂದ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ
  • ಋಣಭಾರದಿಂದ ಮುಕ್ತಿಗೆ ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ
  • ಆರ್ಥಿಕ ಸಮಸ್ಯೆ ಹೆಚ್ಚಾಗುತ್ತಿದ್ದರೆ ಪ್ರತಿ ಮಂಗಳವಾರ ಶಿವಲಿಂಗಕ್ಕೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಿ
Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ title=
ಆರ್ಥಿಕ ಮತ್ತು ಸಾಲದ ಸಮಸ್ಯೆಗೆ ಪರಿಹಾರ

ನವದೆಹಲಿ: ಆರ್ಥಿಕ ಮುಗ್ಗಟ್ಟು ಸಾಲ ತೆಗೆದುಕೊಳ್ಳುವಂತೆ ಮಾಡುತ್ತದೆ.  ಅದೇ ರೀತಿ ವಿಪರೀತವಾಗಿ ಹೆಚ್ಚುತ್ತಿರುವ ವೆಚ್ಚಗಳು ಸಹ ವ್ಯಕ್ತಿಯನ್ನು ನಿದ್ರಾಹೀನರನ್ನಾಗಿ ಮಾಡುತ್ತದೆ. ಈ ಕಾರಣದಿಂದ ವ್ಯಕ್ತಿಯು ತುಂಬಾ ಒತ್ತಡಕ್ಕೆ ಸಿಲುಕುತ್ತಾನೆ. ಇದರಿಂದ ಆತನ ಸಂತೋಷವೇ ಹಾಳಾಗಿಹೋಗುತ್ತದೆ. ಇಂತಹ ವಿಷಮ ಪರಿಸ್ಥಿತಿಯನ್ನು ನಿವಾರಿಸಲು ಜ್ಯೋತಿಷ್ಯದಲ್ಲಿ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ತಿಳಿಸಲಾಗಿದೆ. ಇದು ದುಂದುಗಾರಿಕೆಯನ್ನು ತಪ್ಪಿಸಲು ಮತ್ತು ಸಾಲದಿಂದ ಚೇತರಿಸಿಕೊಳ್ಳಲು ಬಹಳ ಸಹಾಯಕವಾಗಿದೆ.  

ಇದನ್ನೂ ಓದಿ: ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ , ನಾಲ್ಕು ತಿಂಗಳು ಗುರು ನೀಡಲಿದ್ದಾನೆ ಯಶಸ್ಸು 

ಸಾಲದ ಸಮಸ್ಯೆಗೆ ಪರಿಹಾರ  

  1. ಎಷ್ಟೇ ಪ್ರಯತ್ನ ಪಟ್ಟರೂ ಹಣದ ನಷ್ಟ ನಿಲ್ಲುತ್ತಿಲ್ಲ ಎಂದಾದರೆ ಪ್ರತಿದಿನ ಸಂಜೆ ಮನೆಯ ಹೊಸ್ತಿಲ ಮೇಲೆ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ಕೆಲವೇ ಸಮಯದಲ್ಲಿ ದುಂದುವೆಚ್ಚಗಳು ಕಡಿಮೆಯಾಗುವುದು ಮತ್ತು ಸಾಲದ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಸಿಗಲಿದೆ.
  2. ಋಣಭಾರದಿಂದ ಮುಕ್ತಿ ಹೊಂದಲು ಪ್ರತಿ ಮಂಗಳವಾರ ಅಥವಾ ಶನಿವಾರದಂದು ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ಎಣ್ಣೆಯನ್ನು ಅರ್ಪಿಸಿ. ಇದರ ನಂತರ ಹನುಮಾನ್ ಚಾಲೀಸಾ ಪಠಿಸಿ. ಹೀಗೆ ಮಾಡುವುದರಿಂದ ಸಾಲದ ಸಮಸ್ಯೆಗಳು ದೂರವಾಗುವುದು.
  3. ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ ಪ್ರತಿ ಮಂಗಳವಾರ ಶಿವಲಿಂಗಕ್ಕೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಿ. ಇದರ ನಂತರ ಶಿವಲಿಂಗಕ್ಕೆ ಮಸೂರವನ್ನು ಅರ್ಪಿಸಿ. ಹಾಗೆಯೇ ಶಿವನ ಮುಂದೆ ಕುಳಿತು ‘ಓಂ ಋಣ್ಮುಕ್ತೇಶ್ವರ ಮಹಾದೇವಾಯ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
  4. ಋಣಭಾರದಿಂದ ಮುಕ್ತಿ ಹೊಂದಲು ಪ್ರತಿ ತಿಂಗಳು ಶುಕ್ಲ ಪಕ್ಷದ ಬುಧವಾರದಂದು ‘ರಣಹರ್ತ ಗಣೇಶ ಸ್ತೂತ್ರ’ ಪಠಿಸಿ. ಅಲ್ಲದೆ ತುಪ್ಪ ಮತ್ತು ಸಕ್ಕರೆಯೊಂದಿಗೆ ಬೇಯಿಸಿದ ಮೂಂಗ್ ಅನ್ನು ಹಸುವಿಗೆ ತಿನ್ನಿಸಿ. ಇದರಿಂದ ನಿಮಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಇದನ್ನೂ ಓದಿ: Raksha Bandhan: ಪ್ರೀತಿಯ ಅಣ್ಣನಿಗೆ ರಾಖಿ ಕೊಳ್ಳುವಾಗ ಈ ವಿಷಯ ಗಮನದಲ್ಲಿರಲಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News