ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ , ನಾಲ್ಕು ತಿಂಗಳು ಗುರು ನೀಡಲಿದ್ದಾನೆ ಯಶಸ್ಸು

Guru Vakri 2022 effect on Zodiac Signs: ಗುರುಗ್ರಹದ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಚಕ್ರಗಳ ಮೇಲೆಯೂ ಪರಿಣಾಮ ಬೀರುತ್ತದೆ.  ಅದರಲ್ಲೂ ಮೂರು ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. 

Written by - Ranjitha R K | Last Updated : Jul 28, 2022, 09:22 AM IST
  • 29ನೇ ಜುಲೈ 2022ರಂದು, ಗುರುವಿನ ಹಿಮ್ಮುಖ ಚಲನೆ ಆರಂಭ
  • ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿರುವ ಗುರು
  • 12 ರಾಶಿಚಕ್ರಗಳ ಮೇಲೆಯೂ ಭಾರೀ ಪರಿಣಾಮ ಬೀರುತ್ತದೆ.
 ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ , ನಾಲ್ಕು ತಿಂಗಳು ಗುರು ನೀಡಲಿದ್ದಾನೆ ಯಶಸ್ಸು    title=
guru vakri effect (file photo)

ಬೆಂಗಳೂರು : Guru Vakri 2022 effect on Zodiac Signs: ಜ್ಯೋತಿಷ್ಯದಲ್ಲಿ, ಗುರು ಗ್ರಹವನ್ನು ಶಿಕ್ಷಣ, ಜ್ಞಾನ, ಸಂಪತ್ತು, ದಾನದ ಅಂಶವೆಂದು ವಿವರಿಸಲಾಗಿದೆ. ಗುರುವು ರಾಶಿಯನ್ನು ಬದಲಾಯಿಸಿದಾಗ ಒಂದು ರಾಶಿಯಿಂದ ಬೇರೆ ರಾಶಿಗೆ ಪರಿವರ್ತನೆಯಾದಾಗ, ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ನಾಳೆ, ಅಂದರೆ 29ನೇ ಜುಲೈ 2022ರಂದು, ಗುರು ಗ್ರಹವು  ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದೆ. ಮೀನ ರಾಶಿಯಲ್ಲಿ, ಗುರುಗ್ರಹದ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಚಕ್ರಗಳ ಮೇಲೆಯೂ ಪರಿಣಾಮ ಬೀರುತ್ತದೆ.  ಅದರಲ್ಲೂ ಮೂರು ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಮುಂದಿನ 4 ತಿಂಗಳವರೆಗೆ  ಈ ರಾಶಿಯವರಿಗೆ ಸಾಕಷ್ಟು ಪ್ರಗತಿ, ಹಣ ಮತ್ತು ಸಂತೋಷ ಕರುಣಿಸಲಿದ್ದಾನೆ ಬೃಹಸ್ಪತಿ. ಹಾಗಾದರೆ ಮುಂದಿನ 4 ತಿಂಗಳ ಕಾಲ ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ  ನೋಡೋಣ. 

ವೃಷಭ ರಾಶಿ : ಗುರುಗ್ರಹದ ಹಿಮ್ಮುಖ ಚಲನೆಯು ವೃಷಭ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಇವರ ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಉದ್ಯೋಗಾಕಾಂಕ್ಷಿಗಳು ಉದ್ಯೋಗ ಸಿಗಲಿದೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. ಕಾರ್ಯಶೈಲಿಯಲ್ಲಿನ ಸುಧಾರಣೆಯು ಸಾಕಷ್ಟು ಪ್ರಶಂಸೆ ಮತ್ತು ಗೌರವವನ್ನು ತರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. 

ಇದನ್ನೂ ಓದಿ : Feng Shui Shastra: ವ್ಯಾಪಾರ ವೃದ್ಧಿಗಾಗಿ ಮನೆಗೆ ಈ ಮೀನಿನ ವಿಗ್ರಹ ತನ್ನಿ

ಮಿಥುನ ರಾಶಿ : ಹಿಮ್ಮುಖ ಗುರು ಮಿಥುನ ರಾಶಿಯವರಿಗೆ ಅನೇಕ ಲಾಭಗಳನ್ನು ನೀಡುತ್ತಾನೆ. ಉದ್ಯೋಗದಲ್ಲಿ ಬದಲಾವಣೆ, ಬಡ್ತಿಯ ಸಾಧ್ಯತೆಗಳಿವೆ. ಸ್ಥಾನ ಮಾನ ಹೆಚ್ಚಾಗಬಹುದು. ಮಾರ್ಕೆಟಿಂಗ್ ಅಥವಾ ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಜನರು ಪ್ರಯೋಜನ ಪಡೆಯಲಿದ್ದಾರೆ.  

ಕರ್ಕ ರಾಶಿ :  ಕರ್ಕ ರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆಯು ಅದೃಷ್ಟವನ್ನು ನೀಡುತ್ತದೆ. ಅವರು ಪ್ರತಿ ಕೆಲಸದಲ್ಲಿ ಅದೃಷ್ಟವನ್ನು ಪಡೆಯಲು ಪ್ರಾರಂಭಿಸುತ್ತಾರೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ. ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳಿವೆ, ಮಾತ್ರವಲ್ಲ ಈ ಪ್ರಯಾಣವು ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ.  

ಇದನ್ನೂ ಓದಿ : ಈ ರಾಶಿಯ ಸಂಗಾತಿ ಸಿಕ್ಕರೆ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ

 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News