ಪುರುಷರ ಆರೋಗ್ಯ ಸಲಹೆ: ಇಂದಿನ ಕಾಲದಲ್ಲಿ ಫಿಟ್ ಆಗಿರಬೇಕೆಂಬುದು ಪ್ರತಿಯೊಬ್ಬರ ಬಯಕೆಯಾಗಿದೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ನಮ್ಮನ್ನು ನಾವು ಫಿಟ್ ಆಗಿರಿಸಿಕೊಳ್ಳುವುದು ಯಾವುದೇ ಸವಾಲಿಗಿಂತ ಕಡಿಮೆ ಇಲ್ಲ. ಅದರಲ್ಲೂ ಪುರುಷರಿಗೆ ತಮ್ಮನ್ನು ತಾವು ಫಿಟ್ ಅಂಡ್ ಯಂಗ್ ಆಗಿ ಇರಿಸುವುದು ಇನ್ನೂ ಕಷ್ಟದ ವಿಷಯವೇ ಸರಿ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ನಿತ್ಯ ಜೀವನದಲ್ಲಿ ಕೆಲವು ಸಣ್ಣ-ಪುಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸದಾ ಫಿಟ್ ಮತ್ತು ಯಂಗ್ ಆಗಿ ಇರಬಹುದು. ಅಂತಹ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಪುರುಷರು ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳಲು ಈ ಸಲಹೆಗಳನ್ನು ಅಳವಡಿಸಿಕೊಳ್ಳಿ:
ಉತ್ತಮ ದಿನಚರಿ:
ಪುರುಷರೇ ಆಗಲಿ ಅಥವಾ ಮಹಿಳೆಯರೇ ಆಗಲಿ ಒಳ್ಳೆಯ ಆರೋಗ್ಯಕರ ಜೀವನಕ್ಕಾಗಿ ಉತ್ತಮ ದಿನಚರಿ ಬಹಳ ಮುಖ್ಯ. ಅವುಗಳಲ್ಲಿ ಯೋಗ-ವ್ಯಾಯಾಮವೂ ಒಂದು. ವಾಸ್ತವವಾಗಿ, ನಿತ್ಯ ವ್ಯಾಯಾಮ ಮಾಡುವುದರಿಂದ ನಾವು ಹಲವು ರೋಗಗಳಿಂದ ದೂರ ಉಳಿಯಬಹುದು. ಅಷ್ಟೇ ಅಲ್ಲ ಪ್ರತಿದಿನ ವ್ಯಾಯಾಮ ಮಾಡುವುದರಿಂದ ಹೃದ್ರೋಗದ ಸಮಸ್ಯೆ ಇರುವುದಿಲ್ಲ. ಹಾಗಾಗಿ, ಪುರುಷರು ತಮ್ಮ ನಿತ್ಯದ ಜೀವನದಲ್ಲಿ ವ್ಯಾಯಾಮವನ್ನು ರೂಢಿಸಿಕೊಳ್ಳುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಒತ್ತಡವನ್ನು ಸಹ ನಿಯಂತ್ರಿಸಬಹುದು.
ಇದನ್ನೂ ಓದಿ- ಕಿತ್ತಳೆ ಸಿಪ್ಪೆಯ 5 ಅದ್ಭುತ ಪ್ರಯೋಜನಗಳು
ಉತ್ತಮ ಆಹಾರ ಅಭ್ಯಾಸ:
ಫಿಟ್‌ನೆಸ್‌ಗಾಗಿ ವ್ಯಾಯಾಮದ ಜೊತೆಗೆ ಡಯಟ್ ಸಹ ಬಹಳ ಮುಖ್ಯ. ಹಾಗಾಗಿ, ಆಹಾರ ಮತ್ತು ವ್ಯಾಯಾಮದ ನಡುವೆ ಉತ್ತಮ ಸಮತೋಲನವನ್ನು ಸಾಧಿಸುವುದು ಅವಶ್ಯಕ. ಆದ್ದರಿಂದ, ನೀವು ತೆಗೆದುಕೊಳ್ಳುವ ಆಹಾರವು ಸಂಪೂರ್ಣ ಪೌಷ್ಟಿಕಾಂಶ ಉಳ್ಳ ಆಹಾರವಾಗಿರಬೇಕು. ಇದರೊಂದಿಗೆ ಆಹಾರವು ನಿಮ್ಮ ದೇಹ ಮತ್ತು ಮನಸ್ಸಿಗೆ ಶಕ್ತಿಯನ್ನು ಒದಗಿಸಬೇಕು. ಆದ್ದರಿಂದ, ಪುರುಷರು ತಮ್ಮ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬು, ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಬದಲಾಗಿ, ಪುರುಷರು ತಮ್ಮ ಆಹಾರದಲ್ಲಿ ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪದಾರ್ಥಗಳನ್ನು ಸೇವಿಸುವುದು ಹೆಚ್ಚು ಸೂಕ್ತವಾಗಿರುತ್ತದೆ.
ಇದನ್ನೂ ಓದಿ- ಈ ನಾಲ್ಕು ಕಾರಣಗಳಿಂದ ಹೆಚ್ಚುತ್ತದೆ ಹೃದಯಾಘಾತದ ಅಪಾಯ .! ಇಂದೇ ಎಚ್ಚೆತ್ತುಕೊಳ್ಳಿ
ಉತ್ತಮ ಮನಸ್ಥಿತಿ ಕಾಪಾಡಿಕೊಳ್ಳಿ:
ನೀವು ಫಿಟ್ ಆಗಿರಲು ಬಯಸಿದರೆ ಮತ್ತು ನೀವು ದೀರ್ಘಕಾಲ ಯುವಕರಾಗಿರಲು ಬಯಸಿದರೆ, ಅದಕ್ಕಾಗಿ ಒತ್ತಡ ಮುಕ್ತ ಜೀವನ ಬಹಳ ಮುಖ್ಯ. ಏಕೆಂದರೆ ಫಿಟ್ ಆಗಿರಲು ಒತ್ತಡದಿಂದ ದೂರವಿರುವುದು ಬಹಳ ಮುಖ್ಯ. ಒತ್ತಡವನ್ನು ನಿವಾರಿಸಲು ಪುರುಷರು ಜಿಮ್‌ಗೆ ಹೋಗಿ ವರ್ಕೌಟ್ ಮಾಡಬಹುದು.ಇದರ ಜೊತೆಗೆ 30 ನಿಮಿಷಗಳ ಕಾಲ ವಾಕಿಂಗ್ ಮಾಡುವ ಮೂಲಕವೂ ಒತ್ತಡವನ್ನು ನಿವಾರಿಸಬಹುದು. ನಿತ್ಯ ಕೆಲವು ಸಮಯ ಯೋಗ ಮಾಡುವುದು ಸಹ ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಸಹಕಾರಿ ಆಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.