Astrology Prediction: ನಿಜ ಸಾಬೀತಾದ ಜೋತಿಷಿಗಳ ಭವಿಷ್ಯವಾಣಿ

Astrology Prediction - ದೇಶದಲ್ಲಿ ಇತ್ತೀಚಿಗೆ ಬಂದ ಭೂಕಂಪ, ಚಂಡಮಾರುತ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಕುರಿತು ಮಾಡಲಾಗಿದ್ದ ಜೋತಿಷಿಗಳ ಭವಿಷ್ಯವಾಣಿ  ಸುದ್ದಿ ನಿಜ ಎಂದು ಸಾಬೀತಾಗಿದೆ. ಏಪ್ರಿಲ್ ತಿಂಗಳಿನಲ್ಲಿ ನಮ್ಮ ಸಹಯೋಗಿ ವೆಬ್ ಸೈಟ್ ಆಗಿರುವ Zee ನ್ಯೂಸ್ ಗುರು ಗ್ರಹದ ರಾಶಿ ಪರಿವರ್ತನೆಯ ಕುರಿತು ಈ ಸುದ್ದಿ ಬಿತ್ತರಿಸಿತ್ತು. 

Written by - Nitin Tabib | Last Updated : May 17, 2021, 04:02 PM IST
  • ನಿಜ ಸಾಬೀತಾದ ಜ್ಯೋತಿಷಿಗಳ ಭವಿಷ್ಯವಾಣಿ.
  • ಚಂಡಮಾರುತ, ವಿಪತ್ತು, ಹಿಂಸಾಚಾರದ ಕುರಿತು ಶಂಕೆ ವ್ಯಕ್ತಪಡಿಸಲಾಗಿತ್ತು.
  • ಬೃಹಸ್ಪತಿ ಗ್ರಹದ ರಾಶಿ ಪರಿವರ್ತನೆಯ ಬಳಿಕ ಈ ಘಟನೆಗಳು ನಡೆದಿವೆ.
Astrology Prediction: ನಿಜ ಸಾಬೀತಾದ ಜೋತಿಷಿಗಳ ಭವಿಷ್ಯವಾಣಿ  title=
Astrology Turn True (File Photo)

ನವದೆಹಲಿ: Astrology Prediction - ಮತ್ತೊಮ್ಮೆ ಜೋತಿಷಿಗಳು ಮಾಡಿದ್ದ ಭವಿಷ್ಯವಾಣಿ (Astrology Preciction) ನಿಜ ಎಂದು ಸಾಬೀತಾಗಿದೆ.  ಈ ಕುರಿತು ಝೀ ನ್ಯೂಸ್ ಕೆಲ ದಿನಗಳ ಹಿಂದೆಯೇ ಸುದ್ದಿಯೊಂದನ್ನು ಪ್ರಕಟಿಸಿತ್ತು. ಏಪ್ರಿಲ್ 4 ರಂದು ಜೀ ನ್ಯೂಸ್ ನಲ್ಲಿ ಪ್ರಕಟಗೊಂಡಿದ್ದ ಈ ವರದಿಯಲ್ಲಿ, ಏಪ್ರಿಲ್ 5 ರಂದು ಗುರುಗ್ರಹ ತನ್ನ ರಾಶಿ ಪರಿವರ್ತನೆ ಮಾಡಲಿದ್ದು, ಬೃಹಸ್ಪತಿಯ ಈ ರಾಶಿ ಪರಿವರ್ತನೆಯಿಂದ ದೇಶದಲ್ಲಿ ಚಂಡಮಾರುತ, ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳು ಉಂಟಾಗಲಿವೆ ಎಂದು ಭವಿಷ್ಯ ನುಡಿದಿತ್ತು. ಇದಲ್ಲದೆ ದೇಶದ ಕೆಲ ಭಾಗಗಳಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಲಿದೆ ಎಂಬ ಜೋತಿಷ್ಯ ಎಚ್ಚರಿಕೆ ನೀಡಿತ್ತು. ಏಪ್ರಿಲ್ 5 ರ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ, ತೌಕ್ತೆ ಚಂಡಮಾರುತ (Cyclone Tauktae)ದೇಶದ ಕೆಲ ಗಡಿಭಾಗಗಳಿಗೆ ಅಪ್ಪಳಿಸಿದೆ. ಇನ್ನೊಂದೆಡೆ ಪಶ್ಚಿಮ ಬಂಗಾಳದ ಚುನಾವಣೆಯ ವೇಳೆ ಮತ್ತು ಚುನಾವಣೆಯ ಬಳಿಕ ಹಿಂಸಾಚಾರಗಳು (Bengal Election Violence) ಭುಗಿಲೆದ್ದಿವೆ.

ಅಸ್ಸಾಂನಲ್ಲಿ ಒಂದರ ಮೇಲೊಂದರಂತೆ 7 ಭೂಕಂಪಗಳು (North-East Earthquake) ಸಂಭವಿಸಿವೆ
ಝೀ ನ್ಯೂಸ್ ಉತ್ಥಾನ ಜೋತಿಷ್ಯ ಸಂಸ್ಥಾನದ ನಿರ್ದೇಶಕ ಜೋತಿರ್ವಿದ್ ಪಂ. ದಿವಾಕರ್ ತ್ರಿಪಾಠಿ ಲೆಕ್ಕಾಧಾರದ ಆಧಾರದ ಮೇಲೆ ದೇಶದಲ್ಲಿ ಸಂಭವಿಸಲಿರುವ ಏರಿಳಿತಗಳು, ನೈಸರ್ಗಿಕ ವಿಪತ್ತುಗಳ ಭವಿಷ್ಯವಾಣಿ ಸುದ್ದಿಯನ್ನು ಪ್ರಕಟಿಸಿತ್ತು ಮತ್ತು ಅದು ನಿಜ ಎಂದು ಸಾಬೀತಾಗಿದೆ. ಕಳೆದ ಮೂರು ದಿನಗಳ ಕುರಿತು ಮಾತನಾಡುವುದಾದರೆ, ಮಣಿಪುರದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಇತರೆ ತೀವ್ರತೆ 4.3 ರಷ್ಟಿತ್ತು ಎಂದು ಅಳೆಯಲಾಗಿದೆ  ಇದಕ್ಕೂ ಮೊದಲು ಏಪ್ರಿಲ್ 28 ರಂದು ಅಸ್ಸಾಂ ಸೇರಿದಂತೆ ಪೂರೋತ್ತರದ ರಾಜ್ಯಗಳ ಹಲವು ಭಾಗಗಳಲ್ಲಿ ಭೂಕಂಪದ ತೀವ್ರ ಅಲೆಗಳು ನಿರ್ಮಾಣಗೊಂಡಿವೆ. ಆ ಭಾಗದಲ್ಲಿ ಒಂದರ ಮೇಲೊಂದರಂತೆ ಒಟ್ಟು 7 ಭೂಕಂಪಗಳು ಸಂಭವಿಸಿವೆ. ಇದೆ ರೀತಿ ತೌಕ್ತೆ ಚಂಡಮಾರುತ ಕೂಡ ದೇಶದ ಹಲವು ರಾಜ್ಯಗಳಿಗೆ ಹಾನಿ ತಲುಪಿಸಿದೆ. ನಿನ್ನೆ ಗೊವಾ ರಾಜ್ಯದಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಗೆ ಹಲವು ಮರಗಳು ಧರೆಗುರುಳಿವೆ. ಇದರಿಂದ ಅಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ರಕ್ತಸಿಕ್ತಗೊಂಡ ಪ. ಬಂಗಾಳ
ಹಿಂಸೆ ಅಥವಾ ಅಶಾಂತಿಯ ಕುರಿತು ಹೇಳುವುದಾದರೆ, ಈ ಭವಿಷ್ಯವಾಣಿ ನಿಜ ಸಾಬೀತಾಗಿದೆ. ಪಶ್ಚಿಮ ಬಂಗಾಳದ ಚುನಾವಣೆಯ ಅವಧಿಯಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಹಾಗೆ ನೋಡಿದಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಿಂಸಾಚಾರ ಈ ರಾಜ್ಯದ ಇತಿಹಾಸ. ಆದರೆ, ಈ ಬಾರಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕವೂ ಕೂಡ ಡಜನ್ ಗೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಈ ಘಟನೆಗಳ ಹಿಂದೆ ಈ ಕಾರಣ ಅಡಗಿದೆ
ಜೋತಿಷ್ಯ ಶಾಸ್ತ್ರದ ದೃಷ್ಟಿಕೋನದಿಂದ ಹೇಳುವುದಾದರೆ, ಗುರು ಗೋಚರ ಅಂದರೆ ಗುರುವಿನ ರಾಶಿ ಬದಲಾವಣೆಯನ್ನು ಒಂದು ದೊಡ್ಡ ಪರಿವರ್ತನೆ ಎಂದು ಭಾವಿಸಲಾಗುತ್ತದೆ. ಏಕೆಂದರೆ, ಶನಿ, ರಾಹು ಹಾಗೂ ಕೇತುವಿನ ಬಳಿಕ ಬೃಹಸ್ಪತಿ ಒಂದೇ ರಾಶಿಯಲ್ಲಿ ಅತಿ ಹೆಚ್ಚು ದಿನ ಇರುವ ಗ್ರಹವಾಗಿದೆ. ಸೌರ ಮಂಡಲದ ಅತ್ಯಂತ ದೊಡ್ಡ ಗ್ರಹ ಬೃಹಸ್ಪತಿ ಏಪ್ರಿಲ್ 5 ರಂದು ಬೆಳಗ್ಗೆ 5 ಗಂಟೆಗೆ ಅಂದರೆ ಸೂರ್ಯೋದಯಕ್ಕೂ ಮುನ್ನವೇ ತನ್ನ ರಾಶಿಯನ್ನು ಪರಿವರ್ತಿಸಿತ್ತು. ಬೃಹಸ್ಪತಿ ಶನಿದೇವನ ಮೊದಲ ರಾಶಿ ಎನ್ನಲಾಗುವ ಮಕರ ರಾಶಿಯಿಂದ ಹೊರಬಂದು ಶನಿದೇವನ ಎರಡನೇ ರಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಿದ್ದ. 

ಇದನ್ನೂ ಓದಿ- Astrology On Corona End In India: ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಜೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

ವಿಭಿನ್ನ ಕ್ಷೇತ್ರಗಳ ಮೇಲೆ ಗುರುವಿನ ಪ್ರಭಾವ
ಗುರುವಿನ ಈ ರಾಶಿ ಪರಿವರ್ತನೆ (Jupiter Transit 2021) ಎಲ್ಲ ಜನರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದಲ್ಲ ಒಂದು ಪ್ರಭಾವ ಬೀರುತ್ತದೆ. ಇದೆ ರೀತಿ ದೇಶದಲ್ಲಿಯೂ ಕೂಡ ಇದು ವಿವಿಧ ಪರಿವರ್ತನೆಗೆ ಕಾರಣವಾಗುತ್ತದೆ. ಸ್ವತಂತ್ರ ಭಾರತದ ಕುಂಡಲಿ ಕರ್ಕ ರಾಶಿ ಹಾಗೂ ವುರ್ಷಭ ಲಗ್ನದ ಕುಂಡಲಿಯಾಗಿದೆ. ಹೀಗಾಗಿ ದೇವಗುರು ಎಂದೇ ಕರೆಯಲಾಗುವ ಬೃಹಸ್ಪತಿ ಆರನೇ ಭಾವ ಹಾಗೂ ಭಾಗ್ಯ ಭಾವದ ಅಧಿಪತಿಯಾಗಿ ಆರನೇ ಭಾವದಲ್ಲಿ ವಿರಾಜಮಾನರಾಗಿರಲಿದ್ದಾರೆ. ಈ ಅವಧಿಯಲ್ಲಿ ದೇಶದ ಒಳಗೆ ಕೆಲ ಭಾಗಗಳಲ್ಲಿ ಅಶಾಂತಿ ತಲೆದೂರಲಿದೆ. ಇನ್ನೊಂದೆಡೆ ರಾಹುವಿನ ವಕ್ರ ದೃಷ್ಟಿ ಶನಿಯ ಮೇಲೆ ಬೀಳುವುದರಿಂದ ನೈಸರ್ಗಿಕ ವಿಪತ್ತುಗಳು, ನೆರೆಹಾವಳಿ, ಭೂಕಂಪ, ಅಗ್ನಿ ಅವಘಡ, ಭೂ ಕುಸಿತ, ಚಂಡಮಾರುತದಂತಹ ಸಾಧ್ಯತೆಗಳನ್ನು ವರ್ತಿಸಲಾಗಿತ್ತು.

ಇದನ್ನೂ ಓದಿ- Sun Transit 2021: ಅಕ್ಷಯ ತೃತಿಯಾ ದಿನ ಸೂರ್ಯನ ರಾಶಿ ಪರಿವರ್ತನೆಯಿಂದ ಮೂರು ಗ್ರಹಗಳ ಯೋಗ, ಯಾರಿಗೆ ಲಾಭ? ಯಾರಿಗೆ ನಷ್ಟ?

ಈ ಮೊದಲು ಕೂಡ ನಿಜ ಎಂದು ಸಾಬೀತಾಗಿದೆ ಭವಿಷ್ಯವಾಣಿ
ಉತ್ಥಾನ್ ಜ್ಯೋತಿಷ್ಯ ಸಂಸ್ಥಾನದ ನಿರ್ದೇಶಕ ಜೋತಿರ್ವಿದ್ ಪಂ. ದಿವಾಕರ್ ತ್ರಿಪಾಠಿ ಅವರ ಜ್ಯೋತಿಷ್ಯ ಲೆಕ್ಕಾಚಾರ ಈ ಮೊದಲು ಕೂಡ ನಿಜ ಎಂದು ಸಾಬೀತಾಗಿವೆ. ಉದಾಹರಣೆಗೆ, ಕೇದಾರ್ ನಾಥ್ ಅವಘಡ, ನೇಪಾಳದಲ್ಲಿ ಭೂಕಂಪ, ರಾಮ ಮಂದಿರದ ಕುರಿತು ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದ ಭವಿಷ್ಯವಾಣಿ ಇದರಲ್ಲಿ ಶಾಮೀಲಾಗಿವೆ.

ಇದನ್ನೂ ಓದಿ - strology On Friendship: ಈ 4 ರಾಶಿಯ ಜನರಿಗೆ ಗೆಳೆತನ ನಿಭಾಯಿಸುವುದು ಗೊತ್ತೇ ಇಲ್ಲ ಎನ್ನುತ್ತೆ ಜೋತಿಷ್ಯ ಶಾಸ್ತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News