ಸೌತೆಕಾಯಿಯನ್ನು ಹೀಗೆ ತಿಂದರೆ ಅಂದುಕೊಂಡದ್ದಕ್ಕಿಂತ ಶೀಘ್ರ ಸಣ್ಣ ಗಾಗಬಹುದು

ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಅಂತಹ ಒಂದು ಸರಳ ಮಾರ್ಗವನ್ನು  ಇಲ್ಲಿ ಕಾಣಬಹುದು.   

Written by - Ranjitha R K | Last Updated : Sep 29, 2023, 04:17 PM IST
  • ನಮ್ಮ ದೇಹಕ್ಕೆ ಎಲ್ಲಾ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಬೇಕಾಗುತ್ತವೆ.
  • ಇದರೊಂದಿಗೆ ಕಡಿಮೆ ಕ್ಯಾಲೋರಿ ಸೇವನೆ ಕೂಡಾ ದೇಹಕ್ಕೆ ಅವಶ್ಯಕ
  • ನೈಸರ್ಗಿಕ ವಿಧಾನಗಳ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.
ಸೌತೆಕಾಯಿಯನ್ನು ಹೀಗೆ ತಿಂದರೆ ಅಂದುಕೊಂಡದ್ದಕ್ಕಿಂತ ಶೀಘ್ರ ಸಣ್ಣ ಗಾಗಬಹುದು  title=

ಬೆಂಗಳೂರು : ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಇತರ ಜೀವನಶೈಲಿ ಅಸ್ವಸ್ಥತೆಗಳನ್ನು ತಪ್ಪಿಸಲು ಆರೋಗ್ಯಕರ ಆಹಾರ ಪದ್ದತಿಯನ್ನು ಅನುಸರಿಸುವುದು ಬಹಳ ಮುಖ್ಯ. ನಮ್ಮ ದೇಹಕ್ಕೆ ಎಲ್ಲಾ ಪೋಷಕಾಂಶಗಳು  ಸರಿಯಾದ ಪ್ರಮಾಣದಲ್ಲಿ ಬೇಕಾಗುತ್ತವೆ. ಇದರೊಂದಿಗೆ ಕಡಿಮೆ ಕ್ಯಾಲೋರಿ ಸೇವನೆ ಕೂಡಾ ದೇಹಕ್ಕೆ ಅವಶ್ಯಕವಾಗಿದೆ. ದಿನವಿಡೀ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಿದರೆ,ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿ ದೇಹ ಸೇರುತ್ತದೆ. ನಾವುಎಷ್ಟು ಕ್ಯಾಲೋರಿಯನ್ನು ಸೇವಿಸುತ್ತೆವೆಯೋ ಅಷ್ಟೇ ಕ್ಯಲೋರಿಯನ್ನು ಬರ್ನ್ ಮಾಡಬೇಕಾಗುತ್ತದೆ.  ಒಂದು ವೇಳೆ ಹೀಗಾಗದಿದ್ದಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತವೆ. ಇದರಿಂದಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. 

ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಅಂತಹ ಒಂದು ಸರಳ ಮಾರ್ಗವನ್ನು  ಇಲ್ಲಿ ಕಾಣಬಹುದು. 

ಇದನ್ನೂ ಓದಿ : ಸ್ಟೀಲ್ ಪಾತ್ರೆಯಲ್ಲಿ ಈ ಆಹಾರವನ್ನು ಎಂದಿಗೂ ಬೇಯಿಸಬಾರದು ! ಒಮ್ಮೆ ಚೆಕ್ ಮಾಡಿಕೊಳ್ಳಿ

ಸೌತೆಕಾಯಿಯ ಪ್ರಯೋಜನಗಳು : 
ಸೌತೆಕಾಯಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಸೌತೆಕಾಯಿಯು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಅಂಶಗಳನ್ನು ಒಳಗೊಂಡಿದೆ. ಆದರೆ ಸೌತೆಕಾಯಿ ತಿನ್ನುವುದರಿಂದ ಅನೇಕ ಅನಾನುಕೂಲತೆಗಳು ಕೂಡಾ ಇವೆ. ಹಾಗಾಗಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದೆ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಸೌತೆಕಾಯಿಯಲ್ಲಿ ಖನಿಜಗಳು, ಜೀವಸತ್ವಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಇದನ್ನು ಸ್ಯಾಂಡ್‌ವಿಚ್, ಸಲಾಡ್,  ಮೊಸರು ಬಜ್ಜಿ ಹೀಗೆ ಹಲವು ವಿಧಾನಗಳಲ್ಲಿ ಬಳಸಲಾಗುತ್ತದೆ. 

ತೂಕ ಇಳಿಸಿಕೊಳ್ಳಲು ಸೌತೆಕಾಯಿ : 
ಸೌತೆಕಾಯಿ ತೂಕ ಇಳಿಸುವಲ್ಲಿ ಮತ್ತು ದೇಹವನ್ನು ಹೈಡ್ರೀಕರಿಸುವಲ್ಲಿ ಬಹಳ ಸಹಾಯಕವಾಗಿದೆ. ಸೌತೆಕಾಯಿಯಲ್ಲಿ ಕ್ಯಾಲೋರಿ ಬಹಳ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದಲ್ಲದೆ, ಇದು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅನ್ನು ಹೊಂದಿದ್ದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ : ಕೂದಲು ದಟ್ಟವಾಗಿ ಬೆಳೆಯಲು ಈ ಆಹಾರಗಳನ್ನು ತಪ್ಪದೇ ಸೇವಿಸಿ...ಬದಲಾವಣೆ ನೋಡಿ!!

ಸೌತೆಕಾಯಿ ತಿನ್ನುವುದರಿಂದ ಏನು ಪ್ರಯೋಜನ? : 
ಮೂಳೆಗಳು :

ಸೌತೆಕಾಯಿಯ ಸಿಪ್ಪೆ ಸಿಲಿಕಾದಲ್ಲಿ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಇದಲ್ಲದೆ, ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 

ರೋಗನಿರೋಧಕ ಶಕ್ತಿ ಹೆಚ್ಚಿಸಲು : 
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೌತೆಕಾಯಿಯನ್ನು ತಿನ್ನಬಹುದು. ಸೌತೆಕಾಯಿಯು ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ದೇಹದಿಂದ  ಫ್ರೀ ರಾಡಿಕಲ್ ಗಳನ್ನು  ತೆಗೆದುಹಾಕುತ್ತದೆ. ಈ ಕಾರಣದಿಂದಾಗಿ, ರೋಗನಿರೋಧಕ ಶಕ್ತಿ  ಹೆಚ್ಚುತ್ತದೆ.

ಮಲಬದ್ಧತೆ ನಿವಾರಣೆ : 
ನಿರ್ಜಲೀಕರಣ ಮತ್ತು ನೀರಿನ ಕೊರತೆಯಿಂದಾಗಿ ಅನೇಕರು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸೌತೆಕಾಯಿಯಲ್ಲಿ ನೀರಿನಂಶ ಅಧಿಕವಾಗಿದ್ದು, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. 

ಇದನ್ನೂ ಓದಿ : ರಾತ್ರಿ ಮಲಗುವಾಗ ಈ ಕೆಲಸಗಳನ್ನು ಮಾಡಿ ಸಾಕು, ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ!

ಬೊಜ್ಜು : 
ತೂಕ ನಷ್ಟಕ್ಕೆ ಸೌತೆಕಾಯಿ ತುಂಬಾ ಉಪಯುಕ್ತವಾಗಿದೆ. ಸೌತೆಕಾಯಿಯಲ್ಲಿ ಶೇಕಡಾ 96 ರಷ್ಟು ನೀರು ಇರುತ್ತದೆ. ಇದು ಚಯಾಪಚಯವನ್ನು ಬಲಪಡಿಸುತ್ತದೆ. ಇದನ್ನು ತಿನ್ನುವುದರಿಂದ  ದೆಪದೆ ಪದೇ ಹಸಿವಾಗುವುದಿಲ್ಲ. ಇದು ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಡೆಯುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಸೌತೆಕಾಯಿಯನ್ನು ಆಹಾರದಲ್ಲಿ ಸೇರಿಸುವುದು ಹೇಗೆ:
ತೂಕವನ್ನು ಕಳೆದುಕೊಳ್ಳಲು ಸೌತೆಕಾಯಿಯನ್ನು ಹಲವಾರು ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಉದಾಹರಣೆಗೆ, ಸ್ಯಾಂಡ್‌ವಿಚ್‌ ಮಾಡಬಹುದು. ನಿಮಗಿಷ್ಟವಾದ ಸೂಪ್ ಗೆ ಹಾಕಬಹುದು. ಸೌತೆಕಾಯಿ ಜ್ಯೂಸ್ ಅಥವಾ ಸಲಾಡ್ ತಿನ್ನುವುದರಿಂದಲೂ ತೂಕವನ್ನು ಕಳೆದುಕೊಳ್ಳಬಹುದು. 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News