ನಿತ್ಯ ಹಾಲಿನೊಂದಿಗೆ ಖರ್ಜೂರ ಬೆರೆಸಿ ಕುಡಿದರೆ ಸಿಗುತ್ತೆ ಹಲವು ಅದ್ಭುತ ಪ್ರಯೋಜನಗಳು

Benefits of Drinking Milk With Dates: ಹಾಲು ಒಂದು ಪರಿಪೂರ್ಣ ಆಹಾರ. ಹಾಲಿನ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆ. ಅಂತೆಯೇ ಡ್ರೈ ಫ್ರೂಟ್ಸ್ ಗಳು ಕೂಡ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ. ಅದರಲ್ಲೂ ಖರ್ಜೂರ ಸೇವನೆಯಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ನಿಮಗೆ ತಿಳಿದಿರಬಹುದು. ಆದರೆ, ಹಾಲು ಮತ್ತು ಖರ್ಜೂರ ಎರಡನ್ನೂ ಒಟ್ಟಿಗೆ ಬೆರೆಸಿ ಕುಡಿಯುವುದರಿಂದ ನೀವು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jan 11, 2023, 01:50 PM IST
  • ಖರ್ಜೂರವನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಿದರೆ ದೇಹಕ್ಕೆ ಕಬ್ಬಿಣಾಂಶ ಸಿಗುವುದರ ಜೊತೆಗೆ ಹಿಮೋಗ್ಲೋಬಿನ್ ಕೂಡ ಹೆಚ್ಚಾಗುತ್ತದೆ.
  • ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ
  • ಇದು ಮೊಡವೆಗಳನ್ನು ಕಡಿಮೆ ಮಾಡುತ್ತದೆ
ನಿತ್ಯ ಹಾಲಿನೊಂದಿಗೆ ಖರ್ಜೂರ ಬೆರೆಸಿ ಕುಡಿದರೆ ಸಿಗುತ್ತೆ ಹಲವು ಅದ್ಭುತ ಪ್ರಯೋಜನಗಳು  title=
Healthy Drinks

Benefits of Drinking Milk With Dates: ನಿಮ್ಮೆಲ್ಲರಿಗೂ ತಿಳಿದಿರುವಂತೆ ಹಾಲು ಒಂದು ಸೂಪರ್ ಫುಡ್. ಇದರೊಂದಿಗೆ ಫೈಬರ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ಸಿ, ಇ, ಸತು, ರಂಜಕ, ಪೊಟ್ಯಾಸಿಯಮ್, ತಾಮ್ರ ಮತ್ತು ಕಬ್ಬಿಣದಂತಹ ಖನಿಜಗಳ ಆಗರವಾಗಿರುವ ಖರ್ಜೂರವನ್ನು ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಹಾಲಿನೊಂದಿಗೆ ಖರ್ಜೂರ ಬೆರೆಸಿ ಸೇವಿಸುವುದರಿಂದ ದೇಹಕ್ಕ್ಷೆ ಶಕ್ತಿ ದೊರೆಯುವುದು ಮಾತ್ರವಲ್ಲ, ನೀವು ಹಲವು ಕಾಯಿಲೆಗಳಿಂದಲೂ ದೂರ ಉಳಿಯಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. 

ಹೌದು, ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಒಂದು ಮೂರ್ನಾಲ್ಕು ಖರ್ಜೂರವನ್ನು ಹಾಲಿನೊಂದಿಗೆ ನೆನೆಸಿಟ್ಟು, ಮರುದಿನ ಮುಂಜಾನೆ ಎದ್ದ ಬಳಿಕ ಈ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. 

ನಿತ್ಯ ಹಾಲಿನೊಂದಿಗೆ ಖರ್ಜೂರ ಬೆರೆಸಿ ಕುಡಿದರೆ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು:
ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ:

ಖರ್ಜೂರದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಬಿ-6 ಕಂಡು ಬರುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಹಾಲಿನೊಂದಿಗೆ ಖರ್ಜೂರವನ್ನು ಬೆರೆಸಿ ಕುಡಿಯುವುದರಿಂದ ಮೆದುಳು ಚುರುಕಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Foods For Diabetic:  ಈ ಆಹಾರಗಳ ಸೇವನೆಯಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು 

ಉದರ ಸಮಸ್ಯೆಗಳಿಂದ ಮುಕ್ತಿ:
ಮಲಬದ್ದತೆ ಸಮಸ್ಯೆ ಇರುವವರಿಗೆ ಖರ್ಜೂರ ಮತ್ತು ಹಾಲು ಅತ್ಯುತ್ತಮ ಆಹಾರ ಎಂದು ಸಾಬೀತು ಪಡಿಸಲಿದು. ಖರ್ಜೂರವನ್ನು ಹಾಲಿನಲ್ಲಿ ನೆನೆಸಿ ಸವಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ.

ಚರ್ಮದ ಆರೋಗ್ಯ:
ಕೇವಲ ದುಬಾರಿ ಪ್ರಾಡಕ್ಟ್ ಗಳನ್ನು ಬಳಸುವುದು ಮಾತ್ರವಲ್ಲ ಹಾಲಿನೊಂದಿಗೆ ಖರ್ಜೂರವನ್ನು ಬೆರೆಸಿ ಕುಡಿಯುವುದರಿಂದಲೂ ಕೂಡ ಹೊಳೆಯುವ ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಬಹುದು. ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಚರ್ಮಕ್ಕೆ ತುಂಬಾ ಒಳ್ಳೆಯದು. 

ಬಲವಾದ ಮೂಳೆಗಳಿಗಾಗಿ:
ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಹಾಲಿಗೆ ಖರ್ಜೂರ ಸೇರಿಸುವುದರಿಂದ ಇದರ ಶಕ್ತಿ ದ್ವಿಗುಣಗೊಳ್ಳುತ್ತದೆ. ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದರಿಂದ ದೇಹವು ಕ್ಯಾಲ್ಸಿಯಂನೊಂದಿಗೆ ಸೆಲೆನಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರವನ್ನು ಪಡೆಯುತ್ತದೆ. ಇದು ಮೂಳೆಗಳನ್ನು ಬಲಗೊಳಿಸುತ್ತದೆ. 

ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಸೇವಿಸಿದರೆ ದೂರವಾಗುವುದು ಅಪಾಯಕಾರಿ ಕಾಯಿಲೆಗಳು

ತೂಕ ಹೆಚ್ಚಳಕ್ಕೆ:
ಕೆಲವರು ಅಗತ್ಯಕ್ಕಿಂತಲೂ ತುಂಬಾ ಕಡಿಮೆ ತೂಕ ಇರುತ್ತಾರೆ. ಅಂತಹವರಿಗೆ ಖರ್ಜೂರ ಬೆರೆಸಿದ ಹಾಲನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ.

ರಕ್ತಹೀನತೆಗೆ ಪರಿಹಾರ:
ಹಾಲಿನೊಂದಿಗೆ ಖರ್ಜೂರ ಬೆರೆಸಿ ಸವಿಯುವುದರಿಂದ ದೇಹದಲ್ಲಿನ ಕಬ್ಬಿಣದ ಕೊರತೆ ದೂರವಾಗುತ್ತದೆ ಮತ್ತು ಇದರೊಂದಿಗೆ ರಕ್ತಹೀನತೆ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News