ನೀವೂ ಸಹ ರಾತ್ರಿ ಸ್ವೆಟರ್ ಧರಿಸಿ ಮಲಗುತ್ತೀರಾ? ಇಂದೇ ಈ ಅಭ್ಯಾಸವನ್ನು ಬಿಡಿ

Side Effects Of Wearing Sweater At Night: ಚಳಿಗಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಚ್ಚಗಿರುವುದು ಒಳ್ಳೆಯದು. ಅದಕ್ಕಾಗಿ, ಸಾಮಾನ್ಯ ಉಡುಪಿನ ಜೊತೆಗೆ ಸ್ವೆಟರ್ ಧರಿಸಲಾಗುತ್ತದೆ. ಆದರೆ, ಮಲಗುವಾಗ ಸ್ವೆಟರ್ ಧರಿಸುವ ಅಭ್ಯಾಸ ನಿಮಗೂ ಇದ್ದರೆ ಇಂದಿನಿಂದಲೇ ನಿಮ್ಮ ಅಭ್ಯಾಸವನ್ನು ಬಿಟ್ಟು ಬಿಡಿ. ಇಲ್ಲದಿದ್ದರೆ, ನಿಮ್ಮ ಈ ಅಭ್ಯಾಸವು ನಿಮ್ಮನ್ನು ಕೆಲವು ರೋಗಗಳಿಗೆ ಬಲಿಯಾಗುವಂತೆ ಮಾಡಬಹುದು.

Written by - Yashaswini V | Last Updated : Jan 11, 2023, 08:52 AM IST
  • ಕೊರೆಯುವ ಚಳಿಯನ್ನು ತಪ್ಪಿಸಲು ಹೆಚ್ಚಿನ ಜನರು ರಾತ್ರಿ ಸ್ವೆಟರ್ ಅಥವಾ ಜರ್ಸಿ ಧರಿಸಿ ಮಲಗುತ್ತಾರೆ.
  • ಈ ಉಪಾಯದಿಂದ ತೀವ್ರ ಚಳಿಯಿಂದ ಕೊಂಚ ಉಪಶಮನ ದೊರೆಯುವುದರಲ್ಲಿ ಅನುಮಾನವಿಲ್ಲ.
  • ಆದರೆ, ಹೀಗೆ ಮಾಡುವುದರಿಂದ ತೀವ್ರ ಅಸ್ವಸ್ಥರಾಗಿ ಹಲವು ಸಮಸ್ಯೆಗಳಿಗೆ ಬಲಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ?
ನೀವೂ ಸಹ ರಾತ್ರಿ ಸ್ವೆಟರ್ ಧರಿಸಿ ಮಲಗುತ್ತೀರಾ? ಇಂದೇ ಈ ಅಭ್ಯಾಸವನ್ನು ಬಿಡಿ  title=
Winter Tips

Side Effects Of Wearing Sweater At Night: ಪ್ರಸ್ತುತ ಭಾರತದ ಬಹುತೇಕ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿದೆ. ಕೊರೆಯುವ ಚಳಿಯಿಂದಾಗಿ ರಕ್ಷಣೆ ಪಡೆಯಲು ಸ್ವೆಟರ್, ಜೆರ್ಸಿ ಸಹಾಯಕವಾಗುತ್ತದೆ. ಆದರೆ, ಹಗಲಿನ ವೇಳೆಯಲ್ಲಿ ನೀವು ಈ  ಸ್ವೆಟರ್, ಜೆರ್ಸಿ ಧರಿಸಿ ಚಳಿಯಿಂದ ಕೊಂಚ ಉಪಶಮನ ಪಡೆಯಬಹುದು. ಆದರೆ, ಚಳಿ ಹೆಚ್ಚಾಗಿದೆ ಎಂದು ರಾತ್ರಿ ಮಲಗುವ ವೇಳೆ ಸ್ವೆಟರ್ ಧರಿಸುವ ಅಭ್ಯಾಸ ನಿಮಗೂ ಇದ್ದರೆ ಇಂದಿನಿಂದಲೇ ನಿಮ್ಮ ಅಭ್ಯಾಸವನ್ನು ತ್ಯಜಿಸಿ. ಏಕೆಂದರೆ ಇದು ನಿಮ್ಮನ್ನು ಹಲವು ಕಾಯಿಲೆಗಳಿಗೆ ಬಲಿಯಾಗುವಂತೆ ಮಾಡಬಹುದು ಎನ್ನುತ್ತಾರೆ ವೈದ್ಯರು. 

ರಾತ್ರಿ ವೇಳೆ ಮಲಗುವಾಗ ಏಕೆ ಸ್ವೆಟರ್ ಧರಿಸಬಾರದು?
ವೈದ್ಯರ ಪ್ರಕಾರ, ರಾತ್ರಿ ಮಲಗುವಾಗ ಸ್ವೆಟರ್ ಧರಿಸುವ ಬದಲು ದಪ್ಪ ಹೊದಿಕೆಯೊಂದಿಗೆ ಮಲಗುವುದು ಉತ್ತಮ.  ಹಾಗಿದ್ದರೆ, ರಾತ್ರಿ ಹೊತ್ತು ಸ್ವೆಟರ್ ಧರಿಸಿ ಏಕೆ ಮಲಗಬಾರದು, ಇದರಿಂದಾಗುವ ಅನಾನುಕೂಲಗಳೇನು ಎಂದು ತಿಳಿಯೋಣ...

ಇದನ್ನೂ ಓದಿ- Tea And Coffee Cravings : ಚಳಿಗಾಲದ ಶೀತದ ಸಮಸ್ಯೆಗೆ ಪದೇ ಪದೇ ಕಾಫಿ - ಟೀ ಕುಡಿಯುತ್ತೀರಾ? ಹಾಗಿದ್ರೆ, ಎಚ್ಚರ!

ಬಿಪಿ ಹೆಚ್ಚಾಗುವ ಸಾಧ್ಯತೆ:
ವೈದ್ಯರ ಪ್ರಕಾರ, ರಾತ್ರಿ ಮಲಗುವ ಸಮಯದಲ್ಲಿ ಸ್ವೆಟರ್ ಧರಿಸಿ ಮಲಗುವುದರಿಂದ ದೇಹದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ನಿದ್ರಾವಸ್ಥೆಯಲ್ಲಿದ್ದಾಗ ಈ ಬಗ್ಗೆ ನಮಗೆ ಅರಿವಾಗದೇ ಇರಬಹುದು. ಆದರೆ, ದೀರ್ಘಕಾಲ ಇದೇ ಸ್ಥಿತಿಯಲ್ಲಿದ್ದಾಗ ಉಸಿರಾಟದ ತೊಂದರೆ, ಅತಿಯಾಗಿ ಬೆವರುವಿಕೆಯಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.

ಚರ್ಮದ ಸಮಸ್ಯೆಗಳು:
ರಾತ್ರಿ ಮಲಗುವಾಗ ಸ್ವೆಟರ್ ಅಥವಾ ಇನ್ನಾವುದೇ ತುಂಬಾ ಬೆಚ್ಚಗಿನ ಉಡುಪನ್ನು ಧರಿಸಿ ಮಲಗುವುದರಿಂದ ಸರಿಯಾಗಿ ಗಾಳಿಯಾಡದೆ ತುರಿಕೆ ಸೇರಿದಂತೆ ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

ಇದನ್ನೂ ಓದಿ- ಹೃದಯಾಘಾತ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ದೂರ ಸರಿಸುತ್ತದೆ ಈ ಒಂದು ಧಾನ್ಯ

ದೇಹದ ಉಷ್ಣತೆ ಹೆಚ್ಚಾಗುತ್ತದೆ:
ಯಾವುದೇ ವ್ಯಕ್ತಿ ಆರೋಗ್ಯವಾಗಿರಲು ನಿಯಮಿತ ಪ್ರಮಾಣದ ಗಾಳಿ ಅಗತ್ಯವಿರುತ್ತದೆ. ರಾತ್ರಿ ಮಲಗುವಾಗ ಸ್ವೆಟರ್ ಧರಿಸುವುದರಿಂದ ಅಥವಾ ತುಂಬಾ ಬೆಚ್ಚಗಿನ ಬಟ್ಟೆಯನ್ನು ಧರಿಸುವುದರಿಂದ ಗಾಳಿಯ ಪ್ರಸರಣ ಕಡಿಮೆ ಆಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ತುಂಬಾ ಸಮಯದವರೆಗೆ ಇದೇ ಸ್ಥಿತಿಯಲ್ಲಿ ಮುಂದುವರೆದರೆ ಹೃದಯದ ಆರೋಗ್ಯಕ್ಕೂ ಇದು ಹಾನಿಕಾರಕವಾಗಿದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

  

Trending News