Holi 2021: ಬಣ್ಣದೋಕುಳಿಯ ವೇಳೆ ಈ ರೀತಿ ನಿಮ್ಮ ಫೋನ್ ಅನ್ನು ಬಣ್ಣ ಹಾಗೂ ನೀರಿನಿಂದ ರಕ್ಷಿಸಿ

Holi 2021: ಹೋಳಿ ಹಬ್ಬದ ರಂಗಿನಾಟದ ವೇಳೆ ನಾವು ಎಷ್ಟೊಂದು ಮಗ್ನರಾಗಿರುತ್ತೆವೆಂದರೆ ನಮಗೆ ನಮ್ಮ ಫೋನ್ ನ ಪರಿವೆ ಇರುವುದಿಲ್ಲ.  ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ಟ್ರಿಕ್ಸ್ ಗಳನ್ನು ಬಳಸಿ ನೀವೂ ಕೂಡ ಬೆಫಿಕ್ರಿಯಾಗಿ ಬಣ್ಣದೋಕುಳಿ ಆಡಬಹುದು.

Written by - Nitin Tabib | Last Updated : Mar 26, 2021, 12:24 PM IST
  • ಹೋಳಿ ಹಬ್ಬ ಎಂದರೆ ಮೋಜು ಮಸ್ತಿಯ ಹಬ್ಬ.
  • ಈ ದಿನ ರಂಗಿನೋಕುಳಿ ಆಡುವಲ್ಲಿ ಎಲ್ಲರು ತಲ್ಲೀನರಾಗಿರುತ್ತಾರೆ.
  • ಈ ದಿನ ಸ್ಮಾರ್ಟ್ ಫೋನ್ ರಕ್ಷಿಸುವುದು ಹೇಗೆ?
Holi 2021: ಬಣ್ಣದೋಕುಳಿಯ ವೇಳೆ ಈ ರೀತಿ ನಿಮ್ಮ ಫೋನ್ ಅನ್ನು ಬಣ್ಣ ಹಾಗೂ ನೀರಿನಿಂದ ರಕ್ಷಿಸಿ title=
Holi 2021 (Representational Image)

ನವದೆಹಲಿ: Holi 2021 - ಹೋಳಿ ಹಬ್ಬದ ಆಗಮನಕ್ಕೆ ದಿನಗಣನೆ ಆರಂಭಗೊಂಡಿದೆ. ಈ ಹಬ್ಬದ ಶುಭದಿನದಂದು ರಂಗಿನಾಟವಾಡಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ರಂಗಿನಾಟದ ವೇಳೆ ನಮ್ಮ ಸ್ಮಾರ್ಟ್ ಫೋನ್ ಹಾಳಾದರೆ, ಬಣ್ಣಗಳ ಈ ಹಬ್ಬ ನಿರಸವೆನಿಸಲು ಆರಂಭಿಸುತ್ತದೆ. ಈ ಹಬ್ಬದ ದಿನದಂದು ನಿಮ್ಮ ಫೋನ್ ಅನ್ನು ಬಣ್ಣಗಳು ಹಾಗೂ ನೀರಿನಿಂದ ರಕ್ಷಿಸಲು ನಾವು ನಿಮಗೆ ಕೆಲ ಟ್ರಿಕ್ಸ್ ಗಳನ್ನು (Smartphone Tips) ಹೇಳಿ ಕೊಡಲಿದ್ದೇವೆ. ಈ ಟ್ರಿಕ್ಸ್ ಗಳನ್ನು ಬಳಸಿ ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸುರಕ್ಷಿತವಾಗಿರಿಸಿ.

ಈ ರೀತಿ ನಿಮ್ಮ ಫೋನ್ ಅನ್ನು ರಕ್ಷಿಸಿ (Tips To Save Phone From Colours)
ಎಲ್ಲಕ್ಕಿಂತ ಮೊದಲ ಸಲಹೆ ಎಂದರೆ, ಬಣ್ಣದಾಟವಾಡಲು ಹೋಗುವಾಗ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಮನೆಯಲ್ಲಿಯೇ ಇರಿಸಲು ಪ್ರಯತ್ನಿಸಿ. ಇದು ಎಲ್ಲಕ್ಕಿಂತ ಉತ್ತಮ ಆಪ್ಶನ್ ಆಗಿದೆ. ಇದಲ್ಲದೆ ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ರಂಗಿನಾಟದಿಂದ ರಕ್ಷಿಸಲು ಎಲ್ಲಕ್ಕಿಂತ ಮೊದಲು ನೀವು ನಿಮ್ಮ ಫೋನ್ ನ ಸ್ಪೀಕರ್, ಚಾರ್ಜಿಂಗ್ ಪೋರ್ಟ್ ಹಾಗೂ ಇಯರ್ ಫೋನ್ ಜಾಕ್ ಗಳನ್ನು ಟೇಪ್ ನಿಂದ ಸರಿಯಾಗಿ ಕವರ್ ಮಾಡಿ. ಇದರಿಂದ ಬಣ್ಣ ಅಥವಾ ನೀರು ನಿಮ್ಮ ಫೋನ್ ಒಳಗೆ ಸೇರುವುದಿಲ್ಲ. ಇದೇ ರೀತಿ ನೀವು ನಿಮ್ಮಕ್ಯಾಮೆರಾ ಹಾಗೂ ಇತರೆ ಗ್ಯಾಜೆಟ್ ಗಳನ್ನು ರಕ್ಷಿಸಬಹುದು.

ಇದನ್ನೂ ಓದಿ-Holi 2021 Skin Care Tips: ಈ ರೀತಿ ಬಣ್ಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿ

ಬ್ಲೂ ಟೂಥ್ ಹಾಗೂ ಇಯರ್ ಪ್ಯಾಡ್ಸ್ ಗಳನ್ನು ಬಳಸಿ (How To Save Phone During Holi)
ಒಂದು ವೇಳೆ ನೀವು ಬಣ್ಣವಾಡಲು (Holi 2021) ಮನೆಯಿಂದ ಹೊರಗೆ ಹೋಗುತ್ತಿದ್ದರೆ ಮತ್ತು ಫೋನ್ ನಿಮ್ಮೊಂದಿಗೆ ಕೊಂಡೊಯ್ಯುವ ಅನಿವಾರ್ಯತೆ ನಿಮಗಿದ್ದರೆ, ನೀವು ನಿಮ್ಮ ಫೋನ್ ಅನ್ನು ಇಯರ್ ಪ್ಯಾಡ್ಸ್ ಅಥವಾ ಬ್ಲೂಟೂಥ್ ಇಯರ್ ಫೋನ್ ಗೆ ಕನೆಕ್ಟ್ ಮಾಡಿ. ಬಣ್ಣವಾಡುವಾಗ ನೀವು ನಿಮ್ಮ ಫೋನ್ ಅನ್ನು ಹತ್ತಿರದಲ್ಲಿರುವ ಯಾವುದಾದರೊಂದು ಸುರಕ್ಷಿತ ಸ್ಥಾನದಲ್ಲಿರಿಸಿ. ಈ ವೇಳೆ ಬ್ಲೂಟೂಥ್ ಇಯರ್ ಫೋನ್ ನ ಬಳಕೆ ಮಾಡಿ. ಇದರಿಂದಲೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ಸುರಕ್ಸಿತವಾಗಿರುತ್ತದೆ. ಇದಲ್ಲದೆ ನೀವು ನಿಮ್ಮ ಸ್ಮಾರ್ಟ್ ಫೋನ್ ಗೆ ಲಿಕ್ವಿಡ್ ಪ್ರೊಟೆಕ್ಷನ್ ಕವರ್ ಅಳವಡಿಸಿ ಕೂಡ ಬಳಕೆ ಮಾಡಬಹುದು. ಒಂದು ವೇಳೆ ನಿಮ್ಮ ಬಳಿ ಸಮಯವಿದ್ದರೆ, ಬಣ್ಣದಾಟಕ್ಕು ಮೊದಲು ನೀವು ನಿಮ್ಮ ಫೋನ್ ಅನ್ನು ಲ್ಯಾಮಿನೇಟ್ ಮಾಡಬಹುದು.

ಇದನ್ನೂ ಓದಿ- Holi precautions: ಗರ್ಭಿಣಿ ಮಹಿಳೆಯರೇ ಹೋಳಿ ಆಡುವಾಗ ಇರಲಿ ಎಚ್ಚರ

ಫೋನ್ ಒಳಗೆ ನೀರು ಸೇರಿದ್ದರೆ ಈ ಟ್ರಿಕ್ ಅನುಸರಿಸಿ (Smartphone Protection Tricks)
ಬಣ್ಣದಾಟವಾಡುವಾಗ ಒಂದು ವೇಳೆ ನಿಮ್ಮ ಫೋನ್ ನನೆದುಹೋಗಿದ್ದರೆ, ನಿಮ್ಮ ಫೋನ್ ಹಾಳಾಗುವುದರಿಂದ ತಡೆಯುವ ಉಪಾಯ ನಾವು ನಿಮಗೆ ಹೇಳಲಿದ್ದೇವೆ. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ನೀವು ನಿಮ್ಮ ಫೋನ್ ಅನ್ನದು ಒಣ ಅಕ್ಕಿಯಲ್ಲಿಡಿ. ಅಕ್ಕಿ ನಿಮ್ಮ ಫೋನ್ ಗೆ ಸೇರಿರುವ ನೀರನ್ನು ಹೀರಿಕೊಳ್ಳುತ್ತದೆ. ಇದಲ್ಲನೆ ನೀವು ನಿಮ್ಮ ಹೆಯರ್ ಡ್ರೈಯರ್ ಬಳಕೆ ಕೂಡ ಮಾಡಬಹುದು. ಫೋನ್ ಒಂದು ವೇಳೆ ನೆನೆದು ಹೋಗಿದ್ದರೆ ಅದನ್ನು ಕೂಡಲೇ ಸ್ವಿಚ್ ಆನ್ ಮಾಡಬೇಕು. ಸಂಪೂರ್ಣ ಒಣಗಿಸಿದ ಬಳಿಕ ಮಾತ್ರವೇ ಅದನ್ನು ಸ್ವಿಚ್ ಆನ್ ಮಾಡಿ.

ಇದನ್ನೂ ಓದಿ-Holi 2021: ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ Lucky Colourನಿಂದ ಹೋಳಿ ಹಬ್ಬ ಆಚರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News