Goddess Lakshmi Photo : ಧನ ಪ್ರಾಪ್ತಿ, ಸುಖ ಸಮೃದ್ಧಿಗಾಗಿ ಮನೆಯಲ್ಲಿ ಲಕ್ಷ್ಮೀ ದೇವಿಯ ಯಾವ ಫೋಟೋ ಇಡಬೇಕು ತಿಳಿದಿದೆಯಾ?

ಲಕ್ಷ್ಮೀಯನ್ನು  ಪೂಜಿಸುವ ವೇಳೆ ಯಾವ ಫೋಟೋ ಇಡಬೇಕು ಎನ್ನುವುದಕ್ಕೂ ನಿಯಮ ಇದೆ. ಹಾಗಿದ್ದರೆ ಮನೆಗೆ ಲಕ್ಷ್ಮೀ ಫೋಟೋ  ತರುವಾಗ ಯಾವ ವಿಚಾರಗಳನ್ನು ತಿಳಿದಿರಬೇಕು ನೋಡೋಣ .  

Written by - Ranjitha R K | Last Updated : Apr 5, 2021, 10:32 AM IST
  • ಸಂತೋಷ, ಶಾಂತಿ ಮತ್ತು ಸಮೃದ್ಧಿ ಬೇಕಾದರೆ ಲಕ್ಷ್ಮೀಯ ಯಾವ ಫೋಟೋ ಮನೆಯಲ್ಲಿ ಇಡಬೇಕು
  • ಲಕ್ಷ್ಮೀಯ ಚಿತ್ರದಲ್ಲಿ ಆನೆ, ವಿಷ್ಣು ದೇವರು ಮತ್ತು ಕುಬೇರ ಇದ್ದರೆ ಒಳ್ಳೆಯದು
  • ಗೂಬೆಯ ಚಿತ್ರವಿರುವ ಲಕ್ಷ್ಮೀ ಯ ಫೋಟೋ ಎಂದಿಗೂ ಇಡಬೇಡಿ
Goddess Lakshmi Photo : ಧನ ಪ್ರಾಪ್ತಿ, ಸುಖ ಸಮೃದ್ಧಿಗಾಗಿ ಮನೆಯಲ್ಲಿ ಲಕ್ಷ್ಮೀ ದೇವಿಯ ಯಾವ ಫೋಟೋ ಇಡಬೇಕು ತಿಳಿದಿದೆಯಾ?  title=
ಲಕ್ಷ್ಮೀಯ ಚಿತ್ರದಲ್ಲಿ ಆನೆ, ವಿಷ್ಣು ದೇವರು ಮತ್ತು ಕುಬೇರ ಇದ್ದರೆ ಒಳ್ಳೆಯದು (file photo)

ನವದೆಹಲಿ : ಲಕ್ಷ್ಮೀ (Godess Lakshmi) ಅಂದರೆ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯ ಅಧಿ ದೇವತೆ.  ಲಕ್ಷ್ಮೀ ಕಟಾಕ್ಷ ನಮ್ಮ ಮೇಲಿರಲಿ ಎಂದು ಪ್ರತಿಯೊಬ್ಬರೂ ಬಯಸುತ್ತಾರೆ.  ಲಕ್ಷ್ಮೀಯ ಅನುಗ್ರಹ ಪಡೆಯಬೇಕಾದರೆ ಪೂರ್ಣ ವಿಧಿ ವಿಧಾನಗಳೊಂದಿಗೆ ಪೂಜಿಸಬೇಕು. ಲಕ್ಷ್ಮೀ ಪೂಜೆಯಲ್ಲಿ (Lakshmi Pooja) ಲೋಪ ದೋಷಗಳು ಕಂಡು ಬಂದರೆ, ಅವಳು ಮನೆ ತೊರೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವ ಮಾತಿದೆ.  ಅದೇ ಶೃದ್ಧಾ ಭಕ್ತಿಯಿಂದ ನಿಯಮ ಪ್ರಕಾರ ಅವಳನ್ನು ಪೂಜಿಸಿದರೆ, ಲಕ್ಷ್ಮೀ ಕೃಪೆಗೆ ಪಾತ್ರರಾಗುವುದನ್ನು ಕೂಡಾ ಯಾರೂ ತಡೆಯಲು ಸಾಧ್ಯವಿಲ್ಲವಂತೆ.  ಲಕ್ಷ್ಮೀ ಪೂಜೆಗೆ ಆಚಾರ ವಿಚಾರಗಳಿವೆಯೋ ಹಾಗೆಯೇ ಅವಳ ಪೂಜೆ ವೇಳೆ ಯಾವ ರೀತಿಯ ಫೋಟೋ (Godess Lakshmi Photo) ಇಡಬೇಕು ಎನ್ನುವುದಕ್ಕೂ ನಿಯಮವಿದೆ. 

ಮನೆಯಲ್ಲಿ ಲಕ್ಷ್ಮೀಯ ಯಾವ ರೀತಿಯ ಫೋಟೋವನ್ನು ಇಡಬೇಕು : 
ಮೊದಲೇ ಹೇಳಿದ ಹಾಗೆ ಲಕ್ಷ್ಮೀಯನ್ನು (Godess Lakshmi) ಪೂಜಿಸುವ ವೇಳೆ ಯಾವ ಫೋಟೋ ಇಡಬೇಕು ಎನ್ನುವುದಕ್ಕೂ ನಿಯಮ ಇದೆ. ಹಾಗಿದ್ದರೆ ಮನೆಗೆ ಲಕ್ಷ್ಮೀ ಫೋಟೋ (Godess Lakshmi Photo) ತರುವಾಗ ಯಾವ ವಿಚಾರಗಳನ್ನು ತಿಳಿದಿರಬೇಕು ನೋಡೋಣ .

ಇದನ್ನೂ ಓದಿ : Gudi Padwa 2021: ಇಲ್ಲಿದೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ

1. ಲಕ್ಷ್ಮೀ ದೇವರ ಫೋಟೋದಲ್ಲಿ ಆನೆಗಳ (Elephant) ಚಿತ್ರವಿದ್ದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಮಹಾಲಕ್ಷ್ಮಿಯ ಎರಡೂ ಬದಿಗಳಲ್ಲಿರುವ ಆನೆಗಳು ಹರಿಯುವ ನೀರಿನಲ್ಲಿ ನಿಂತಿದ್ದು, ನಾಣ್ಯಗಳನ್ನು ಉದುರಿಸುತ್ತಿರುವ ಫೋಟೋ ವನ್ನು ಪೂಜೆಗೆ ಇಟ್ಟರೆ ಶುಭವಂತೆ. ಈ ಫೋಟೋ ಮನೆಯಲ್ಲಿದ್ದರೆ ಆ ಮನೆಯಲ್ಲಿ ಎಂದಿಗೂ ಹಣದ (Money) ಕೊರತೆ ಎದುರಾಗುವುದಿಲ್ಲ ಎನ್ನುತ್ತಾರೆ ಬಲ್ಲವರು.  ಅಲ್ಲದೆ, ಆನೆ ತನ್ನ ಸೊಂಡಿಲಿನಲ್ಲಿ ಕಲಶ ಹಿಡಿದಿರುವುದು ಕಂಡು ಬಂದರೆ ಆ ಫೋಟೋ ಕೂಡಾ ಶುಭ ಎನ್ನಲಾಗಿದೆ. 

2. ಲಕ್ಷ್ಮೀ ದೇವಿಯ ಚಿತ್ರವನ್ನು ಖರೀದಿಸುವಾಗ, ಲಕ್ಷ್ಮೀ  ಕಮಲದ ಹೂವಿನ (Lotus flower) ಮೇಲೆ ಕುಳಿತಿರುವ ಫೋಟೋವನ್ನೇ ಖರೀದಿಸಬೇಕಂತೆ.  ಅಂತಹ ಫೋಟೋವನ್ನು ಪೂಜಿಸಿದರೆ, ಮನೆಯಲ್ಲಿ ಹಣ ಮತ್ತು ಸಂಪತ್ತಿನ ಕೊರತೆಯಾಗುವುದಿಲ್ಲವಂತೆ. 

ಇದನ್ನೂ ಓದಿ ಈ ಐದು ಸಂಕೇತಗಳು ಎದುರಾದರೆ ಧನ ಪ್ರಾಪ್ತಿಯಾಗುತ್ತದೆಯಂತೆ ..!

3. ಲಕ್ಷ್ಮೀಯೊಂದಿಗೆ ವಿಷ್ಣುವನ್ನು (Lord Vishnu) ಪೂಜಿಸುವುದು ಕೂಡಾ ಬಹಳ ಮುಖ್ಯ. ವಿಷ್ಣು ಇಲ್ಲದೆ ಲಕ್ಷ್ಮೀ  ಯಾವ ಮನೆಗೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ವಿಷ್ಣುವನ್ನು ಪೂಜಿಸುವ ಮೂಲಕ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳಬೇಕು. ಲಕ್ಷ್ಮೀ ಮತ್ತು ವಿಷ್ಣು ಜೊತೆಯಾಗಿರುವ ಫೋಟೋವನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆಯಂತೆ. 

4. ಇನ್ನು ನಾವು ಪೂಜೆಗೆ ಇಡುವ ದೇವರ  ಫೋಟೋದಲ್ಲಿ ಲಕ್ಷ್ಮೀ ಎರಡೂ ಕೈಗಳಿಂದ ಹಣದ ಮಳೆಯಾಗುತ್ತಿದ್ದರೆ,  ಸಂಪತ್ತಿನ ಸಂಪಾದನೆಗೆ ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ಲಕ್ಷ್ಮೀ ನಗುತ್ತಿದ್ದರೆ, ಅದನ್ನು ಮಂಗಳದಾಯಿ ಎಂದೂ ಪರಿಗಣಿಸಲಾಗುತ್ತದೆ. ಇಶ್ತಲ್ಲದೆ, ಲಕ್ಷ್ಮೀ ಫೋಟೋದಲ್ಲಿ ಧನ್ ಕುಬೇರ (Dhan Khubera) ಚಿತ್ರವೂ ಇದ್ದರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?

ಮನೆಯಲ್ಲಿ ಇಂಥಹ ಫೋಟೋಗಳನ್ನು ಇಟ್ಟು ಖಂಡಿತಾ ಪೂಜಿಸುವುದು ಬೇಡ : 
-  ಧರ್ಮಗ್ರಂಥಗಳಲ್ಲಿ, ಗೂಬೆ (Owl) ಲಕ್ಷ್ಮೀ ದೇವಿಯ ವಾಹನ ಎಂದು ಹೇಳಲಾಗುತ್ತದೆ. ಆದರೆ ಮನೆಯಲ್ಲಿ ಲಕ್ಷ್ಮೀ ಫೋಟೋದಲ್ಲಿ ಗೂಬೆಯಿದ್ದರೆ ಆ ಫೋಟೋ ಖಂಡಿತಾ ಮನೆಗೆ ತರಬೇಡಿ.  
- ಲಕ್ಷ್ಮೀ  ನಿಂತಿರುವ ಭಂಗಿಯ ಚಿತ್ರವನ್ನು ಸಹ ಮನೆಯಲ್ಲಿ ಇಡಬಾರದು. ಆಗಲೂ ಮನೆಯಲ್ಲಿ ಹಣ ನಿಲ್ಲುವುದಿಲ್ಲವಂತೆ . 
-  ಲಕ್ಷ್ಮೀಯ  ಪಾದಗಳು ಕಾಣುವ ಚಿತ್ರವನ್ನು ಕೂಡಾ ಖರೀದಿಸಬಾರದು. ಈ ಫೋಟೋಗೆ ಪೂಜೆ ಸಲ್ಲಿಸಿದರೂ ಲಕ್ಷ್ಮಿ ಮನೆಯಲ್ಲಿ ಹೆಚ್ಚು ಕಾಲ ವಾಸಿಸುವುದಿಲ್ಲ ಎನ್ನಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News