Gudi Padwa 2021: ಇಲ್ಲಿದೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ

Gudi Padwa 2021 - ಚೈತ್ರ ಮಾಸ ಆರಂಭಗೊಂಡಿದೆ. ಈ ತಿಂಗಳ ಶುಕ್ಲ ಪಕ್ಷದ ಪ್ರತಿಪದಾ ತಿಥಿಗೆ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಚೈತ್ರಮಾಸದಿಂದ ನೂತನ ವರ್ಷಾರಂಭವಾಗುತ್ತದೆ ಎನ್ನಲಾಗುತ್ತದೆ. 

Written by - Nitin Tabib | Last Updated : Apr 4, 2021, 03:59 PM IST

    ಚೈತ್ರ ಮಾಸ ಆರಂಭಗೊಂಡಿದೆ.

    ಈ ತಿಂಗಳ ಶುಕ್ಲ ಪಕ್ಷದ ಪ್ರತಿಪದಾ ತಿಥಿಗೆ ಯುಗಾದಿ ಹಬ್ಬ ಆಚರಿಸಲಾಗುತ್ತದೆ.

    ಹಿಂದೂ ಪಂಚಾಂಗದ ಪ್ರಕಾರ, ಚೈತ್ರಮಾಸದಿಂದ ನೂತನ ವರ್ಷಾರಂಭವಾಗುತ್ತದೆ ಎನ್ನಲಾಗುತ್ತದೆ

Gudi Padwa 2021: ಇಲ್ಲಿದೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ title=
Gudi Padwa 2021(File Photo)

Gudi Padwa 2021 - ಚೈತ್ರ ಮಾಸ ಆರಂಭಗೊಂಡಿದೆ. ಈ ತಿಂಗಳ ಶುಕ್ಲ ಪಕ್ಷದ ಪ್ರತಿಪದಾ ತಿಥಿಗೆ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಚೈತ್ರಮಾಸದಿಂದ ನೂತನ ವರ್ಷಾರಂಭವಾಗುತ್ತದೆ ಎನ್ನಲಾಗುತ್ತದೆ. ಮಹಾರಾಷ್ಟ್ರದಲ್ಲಿ ಹಿಂದೂ ನವವರ್ಷವನ್ನು 'ಗುಡಿ ಪಾಡ್ವಾ' (Gudi Padwa 2021) ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಬೆಳೆಯ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ  ಪ್ರತಿಪದಾ ತಿಥಿಯಂದು ಗುಡಿ ಪಾಡ್ವಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 13ರಂದು ಈ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಶ್ರೀವಿಷ್ಣು ಹಾಗೂ ಪರಬ್ರಹ್ಮನಿಗೆ ವಿಧಿ-ವಿಧಾನಗಳಿಂದ ಪೂಜೆಸಲ್ಲಿಸಲಾಗುತ್ತದೆ ಹಾಗೂ ಮನೆಯಲ್ಲಿ ತರಹೇವಾರಿ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ.

ಗುಡಿಪಾಡ್ವಾ ಮಹತ್ವ
ಪೌರಾಣಿಕ ಕಥೆಗಳ ಆಧಾರದ ಮೇಲೆ ಪ್ರತಿಪದಾ ತಿಥಿಯ ದಿನ ಪರಬ್ರಹ್ಮ ಈ ಸೃಷ್ಟಿಯನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿನ ಬ್ರಹ್ಮದೇವನ ಪೂಜೆಗೆ (Gudi Padwa Puja) ವಿಶೇಷ ಮಹತ್ವವಿದೆ. ಈ ದಿನ ಎಲ್ಲ ಕೆಟ್ಟ ಸಂಗತಿಗಳು ಅಂತ್ಯವಾಗುತ್ತವೆ ಹಾಗೂ ಜೀವನ ಸುಖ-ಸಮೃದ್ಧಿಯಿಂದ ಕೂಡಿರುತ್ತದೆ ಎನ್ನಲಾಗಿದೆ.

ಗುಡಿ ಪಾಡ್ವಾ ಶುಭ ಮುಹೂರ್ತಗಳು Gudi Padwa Muhurat
ಗುಡಿ ಪಾಡ್ವಾ ತಿಥಿ - ಏಪ್ರಿಲ್ 13, 2021.
ಪ್ರತಿಪದಾ ತಿಥಿ ಆರಂಭ - ಏಪ್ರಿಲ್ 12, 2021 ರಂದು ಸೋಮವಾರ ಬೆಳಗ್ಗೆ 8 ಗಂಟೆಗೆ.
ಪ್ರತಿಪದಾ ತಿಥಿಯ ಅಂತ್ಯ - ಏಪ್ರಿಲ್ 13, 2021 ರಂದು ಮಂಗಳವಾರ ಬೆಳಗ್ಗೆ 10.16ರವರೆಗೆ.

ಇದನ್ನೂ ಓದಿ-Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?

ಗುಡಿ ಪಾಡ್ವಾ ಪೂಜಾ ವಿಧಿ
1. ಗುಡಿ ಪಾಡ್ವಾ ದಿನ ಎಲ್ಲಕ್ಕಿಂತ ಮೊದಲು ಸೋರ್ಯೋದಯವಾಗುವ ಮುನ್ನ ಸ್ನಾನ ಮಾಡಲಾಗುತ್ತದೆ.
2. ಬಳಿಕ ಮುಖ್ಯದ್ವಾರವನ್ನು ಮಾವಿನ ಎಳೆಗಳ ತೋರಣದಿಂದ ಸಿಂಗರಿಸಲಾಗುತ್ತದೆ.
3. ಬಳಿಕ ಮನೆಯ ಒಂದು ಭಾಗದಲ್ಲಿ ಗುಡಿಯನ್ನು ನಿಲ್ಲಿಸಲಾಗುತ್ತದೆ. ಅದನ್ನು ಮಾವಿನ ಎಳೆಗಳು, ಹೂವು ಹಾಗೂ ಬಟ್ಟೆ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ. 
4. ಇದಾದ ಬಳಿಕ ಬ್ರಹ್ಮದೇವನಿಗೆ ಪೂಜೆ (Puja) ಸಲ್ಲಿಸಿ, ಗುಡಿಗೂ ಕೂಡ ಆರತಿ ಬೆಳಗಲಾಗುತ್ತದೆ. 
5. ಗುಡಿ ನಿಲ್ಲಿಸುವ ಕೆಲಸ ಪೂರ್ಣಗೊಂಡ ಬಳಿಕ ಶ್ರೀವಿಷ್ಣುವನ್ನು ವಿಧಿ-ವಿಧಾನದಿಂದ ಪೂಜೆ ಸಲ್ಲಿಸಲಾಗುತ್ತದೆ 

ಇದನ್ನೂ ಓದಿ-Beard Can Also Change Luck: ಗಡ್ಡದಲ್ಲಿಯೂ ಕೂಡ ನಿಮ್ಮ ಅದೃಷ್ಟ ಅಡಗಿದೆ ಗೊತ್ತಾ?

ಗುಡಿ ಪಾಡ್ವಾ ಹೇಗೆ ಆಚರಿಸಲಾಗುತ್ತದೆ? How Gudi Padwa Celebrated
ಮಹಾರಾಷ್ಟ್ರದಲ್ಲಿ ಗುಡಿಪಾಡ್ವಾ ದಿನದಂದು ಹೊಸ ಹೊಸ ಬಟ್ಟೆಗಳನ್ನು ಧರಿಸಲಾಗುತ್ತದೆ. ಈ ದಿನದಂದು ಮನೆಯಲ್ಲಿ ಭೋಜನಕ್ಕೆ ಹೂರಣದ ಹೋಳಿಗೆ ಹಾಗೂ ಶ್ರಿಖಂಡ ತಯಾರಿಸಲಾಗುತ್ತದೆ. ಇದಲ್ಲದೆ ಸಕ್ಕರೆ ಬಾತ್ ತಯಾರಿಸಲಾಗುತ್ತದೆ. ಸೂರ್ಯೋದಯದ ಆರಂಭದಲ್ಲಿ ಶ್ರೀ ವಿಷ್ಣು ಹಾಗೂ ಬ್ರಹ್ಮದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ-Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News