ದೇವಿ ಲಕ್ಷ್ಮಿ ಮನೆ ತೊರೆಯುತ್ತಿದ್ದಾಳೆ ಎನ್ನುತ್ತವೆ ಈ ಸಂಕೇತಗಳು, ಎಚ್ಚರ ವಹಿಸಿ

Goddess Lakshmi - ಹಲವು ಬಾರಿ ಭವಿಷ್ಯದಲ್ಲಾಗುವ ಕೆಲ ಘಟನೆಗಳು ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಹಾನಿಯ ಸಂಕೇತಗಳು ನಮಗೆ ಮೊದಲೇ ಸಿಗುತ್ತವೆ. ಒಂದು ವೇಳೆ ನೀವೂ ಕೂಡ ಈ ಸಂಕೇತಗಳನ್ನು ಮೊದಲೇ ಗಮನಿಸಿದರೆ, ಭವಿಷ್ಯದಲ್ಲಾಗುವ ಹಾನಿಯಿಂದ ಪಾರಾಗಬಹುದು.

Written by - Nitin Tabib | Last Updated : Feb 3, 2021, 02:55 PM IST
  • ಧನದ ದೇವತೆ ಲಕ್ಷ್ಮಿ ಮನೆ ತೊರೆಯುವ ಮುನ್ನ ಸಂಕೇತ ನೀಡುತ್ತಾಳೆ
  • ಆರ್ಥಿಕ ಹಾನಿಯಿಂದ ಪಾರಾಗಲು ಈ ಸಂಕೇತಗಳನ್ನು ನಿರ್ಲಕ್ಷಿಸಬೇಡಿ.
  • ಒಂದು ವೇಳೆ ಈ ಸಂಕೇತಗಳನ್ನು ನಿರ್ಲಕ್ಷಿಸಿದರೆ ಧನ ಹಾನಿ ಎದುರಾಗುತ್ತದೆ.
ದೇವಿ ಲಕ್ಷ್ಮಿ ಮನೆ ತೊರೆಯುತ್ತಿದ್ದಾಳೆ ಎನ್ನುತ್ತವೆ ಈ ಸಂಕೇತಗಳು, ಎಚ್ಚರ ವಹಿಸಿ title=
Goddess Lakshmi(File Photo)

ನವದೆಹಲಿ:Goddess Lakshmi - ಮುಂಬರುವ ದಿನಗಳಲ್ಲಿ ನಮ್ಮ ಜೊತೆಗೆ ಏನಾಗಲಿದೆ ಎಂಬುದು ಆ ದೇವರಿಗೇ ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ಆದರೆ ಕೆಲ ಸಂಕೇತಗಳು ನಮ್ಮ ಮುಂದಿನ ಜೀವನದಲ್ಲಿ ನಡೆಯುವ ಘಟನೆಗಳತ್ತ ಮುನ್ಸೂಚನೆ ನೀಡುತ್ತವೆ. ಹಣಕಾಸಿನ ವಿಷಯದಲ್ಲಿಯೂ ಕೂಡ ಹೀಗೆಯೇ ನಡೆಯುತ್ತದೆ. ಯಾವುದೇ ವ್ಯಕ್ತಿ ಎಷ್ಟೇ ಹಣ ಉಳಿತಾಯ ಮಾಡಿದರೂ ಕೂಡ ಒಂದಿಲ್ಲ ಒಂದು ದಿನ ಅವರಿಗೆ ಹಣಕಾಸಿನ ಮುಗ್ಗಟ್ಟು (Money Loss) ಜೀವನದಲ್ಲಿ ಎದುರಾಗುತ್ತದೆ. ಆದರೆ ಇದು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಹಿಂದೂ ಧರ್ಮ ಶಾಸ್ತ್ರಗಳು ಹಾಗೂ ಪುರಾಣಗಳ ಪ್ರಕಾರ ದೇವಿ ಲಕ್ಷ್ಮಿ (Goddess Lakshmi) ನಿಮ್ಮ ಮನೆಯಿಂದ ಹೊರಡುವ ಮುನ್ನ ಕೆಲ ಸಂಕೇತಗಳನ್ನು ನೀಡುತ್ತಾಳೆ. ಒಂದು ವೇಳೆ ಈ ಸಂಕೇತಗಳು ನಿಮಗೆ ತಿಳಿಯದೆ ಹೋದಲ್ಲಿ ನಿಮಗೆ ಭವಿಷ್ಯದಲ್ಲಿ ಹಾನಿ ಎದುರಾಗುವ ಸಾಧ್ಯತೆ ಇದೆ.

ಆರ್ಥಿಕ ಹಾನಿಗಳ ಸಂಕೇತಗಳು
1. ಮನಿ ಪ್ಲಾಂಟ್ (Money Plant) ಒಣಗುವಿಕೆ-
ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯ ಬಾಲ್ಕನಿಯಲ್ಲಿ ಮನಿ ಪ್ಲಾಂಟ್ ಬೆಳೆಸಿದ್ದು, ತುಂಬಾ ಜಾಗ್ರತೆ ವಹಿಸಿದ ಬಳಿಕವೂ ಕೂಡ ಆ ಸಸ್ಯದ ಎಳೆಗಳು ಅಥವಾ ಇಡೀ ಸಸ್ಯ ಒಣಗುತ್ತಿದ್ದರೆ, ದೇವಿ ಲಕ್ಷ್ಮಿ ನಿಮ್ಮಿಂದ ಅಸಮಾಧಾನಗೊಂಡಿದ್ದಾಳೆ ಹಾಗೂ ಭವಿಷ್ಯದಲ್ಲಿ ನಿಮಗೆ ಹಣಕಾಸಿನ ಮುಗ್ಗಟ್ಟು (Financial Problem) ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಯಲ್ಲಿ ಲಕ್ಷ್ಮಿ ಪೂಜೆ ನೆರವೆರಿಸುವುದರ ಜೊತೆಗೆ ನೀವು ನಿಮ್ಮ ಖರ್ಚು-ವೆಚ್ಚಗಳ ಬಗ್ಗೆ ಜಾಗ್ರತ ಗಾಗಿರುವುದು ಒಳ್ಳೆಯದು.

2. ನಲ್ಲಿಯಿಂದ ನೀರು ಸೋರುವಿಕೆ- ಒಂದು ವೇಳೆ ನಿಮ್ಮ ಮನೆಯ ಬಾತ್ ರೂಮ್ ಅಥವಾ ಕಿಚನ್ ನಲ್ಲಿ ಅಳವಡಿಸಲಾಗಿರುವ ನಲ್ಲಿಯಿಂದ ಅಥವಾ ನೀರಿನ ಟಾಕಿಯಿಂದ ನೀರು ಸೋರುತ್ತಿದ್ದರೆ ಇದು ದೇವಿ ಲಕ್ಷ್ಮಿ ಅಸಮಾಧಾನಗೊಂಡಿರುವ ಸಂಕೇತ. ಶಾಸ್ತ್ರಗಳ ಪ್ರಕಾರ ಮನೆಯ ನಲ್ಲಿಯಿಂದ ನೀರು ಸೋರುವಿಕೆ ಹಣದ ವೆಚ್ಚ ಹೆಚ್ಚಾಗುವುದನ್ನು ಸೂಚಿಸುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದನ್ನು ಹೇಳುತ್ತದೆ. ಹೀಗಾಗಿ ನಲ್ಲಿ ಅಥವಾ ಟಾಕಿ ಲೀಕೆಜ್ ಸಮಸ್ಯೆಯನ್ನು ಪರಿಹರಿಸಿ ದೇವಿ ಲಕುಮಿಯನ್ನು ಪ್ರಸನ್ನಗೊಳಿಸಿ. 

3. ಕಳ್ಳತನವಾಗುವ ಕನಸು ಬೀಳುವುದು- ಸ್ವಪ್ನ ಶಾಸ್ತ್ರ ಅಥವಾ ಸ್ವಪ್ನ ಜ್ಯೋತಿಷ್ಯದ ಪ್ರಕಾರ ಒಂದು ವೇಳೆ ನಿಮ್ಮ ಕನಸಿನಲ್ಲಿ ಹರಿದ ಜೇಬು ಅಥವಾ ಕಳ್ಳತನ ಕಂಡರೆ ಅಥವಾ ಕಳ್ಳರು ಹಾಗೂ ಖದೀಮರನ್ನು ಕಂಡರೆ ಕೂಡಲೇ ಎಚ್ಚತ್ತುಕೊಳ್ಳಿ. ಏಕೆಂದರೆ ಈ ಎಲ್ಲ ಕನಸುಗಳು ಭವಿಷ್ಯದಲ್ಲಾಗುವ ದೊಡ್ಡ ಆರ್ಥಿಕ ಹಾನಿಯನ್ನು ಸೂಚಿಸುತ್ತವೆ (Signs).

ಇದನ್ನು ಓದಿ- Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ

4. ಹಣ ಕೈಜಾರಿ ನೆಲದ ಮೇಲೆ ಬೀಳುವುದು- ಒಂದು ವೇಳೆ ನಿಮ್ಮ ಕೈಯಿಂದ ಹಣ ಜಾರಿ ನೆಲದ ಮೇಲೆ ಬಿದ್ದರೆ ಅಥವಾ ಪರ್ಸ್ ಅಥವಾ ಜೇಬಿನಿಂದ ಹಣಜಾರಿ ಕೆಳಗೆ ಬಿದ್ದರೆ , ಅವುಗಳನ್ನು ತಕ್ಷಣ ಮೇಲೆತ್ತಿ ಹಣೆಗೆ ಒತ್ತಿಕೊಂಡು ನಮಸ್ಕರಿಸಿ ಧನಲಕ್ಷ್ಮಿಯ ಕ್ಷಮೆಯಾಚಿಸಿ. ಹೀಗ ಮಾಡದೆ ಹೋದರೆ ನಿಮಗೆ ಭವಿಷ್ಯದಲ್ಲಿ ಧನಹಾನಿ ಸಂಭವಿಸುವ ಸಾದ್ಯತೆ ಇದೆ.

ಇದನ್ನು ಓದಿ- Vastu Tips:ಈ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ

5. ಮನೆಯ ಮಾಳಿಗೆಯ ಮೇಲೆ ಕಾಗೆ ಕುಳಿತುಕೊಳ್ಳುವುದು- ಮನೆಯ ಮಾಳಿಗೆಯ ಮೇಲೆ ದಕ್ಷಿಣ ದಿಕ್ಕಿಗೆ ಕಾಗೆ ಕುಳಿತು ಕೂಗಿದರೆ ಅದು ಭವಿಷ್ಯದಲ್ಲಿ ಧನಹಾನಿ ಸೂಚಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಖರ್ಚು-ವೆಚ್ಚದ ಕುರಿತು ಗಮನ ಹರಿಸಿ.

ಇದನ್ನು ಓದಿ- ಧನ ದೇವತೆ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಈ ಹತ್ತು ಉಪಾಯಗಳನ್ನು ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News