Aaron Finch Retirement: ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟಿಗ: ಈ ತಂಡದ ವಿರುದ್ಧ ಆಡಲಿದ್ದಾರೆ ಕೊನೆಯ ಪಂದ್ಯ!

ಆರನ್ ಫಿಂಚ್ ತಮ್ಮ ಹೇಳಿಕೆಯಲ್ಲಿ, 'ಇದುವರೆಗಿನ ಪ್ರಯಾಣ ಅದ್ಭುತವಾಗಿದೆ. ಕೆಲವು ಅತ್ಯುತ್ತಮ ODI ತಂಡಗಳ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ. ನಾನು ಯಾರೊಂದಿಗೆ ಕ್ರಿಕೆಟ್ ಆಡಿದ್ದೇನೆಯೋ ಅವರೆಲ್ಲರಿಂದ ನಾನು ಆಶೀರ್ವಾದ ಪಡೆದಿದ್ದೇನೆ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Sep 10, 2022, 09:13 AM IST
    • ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಹಾಗೂ ನಾಯಕ ಆ್ಯರೋನ್ ಫಿಂಚ್ ನಿವೃತ್ತಿ ಘೋಷಣೆ
    • ನ್ಯೂಜಿಲೆಂಡ್ ವಿರುದ್ಧ ತಮ್ಮ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ
    • ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ
Aaron Finch Retirement: ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟಿಗ: ಈ ತಂಡದ ವಿರುದ್ಧ ಆಡಲಿದ್ದಾರೆ ಕೊನೆಯ ಪಂದ್ಯ! title=
Aaron Finch

ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಹಾಗೂ ನಾಯಕ ಆ್ಯರೋನ್ ಫಿಂಚ್ ನಿವೃತ್ತಿ ಘೋಷಿಸಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧ ತಮ್ಮ 146 ನೇ ಮತ್ತು ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಆದರೆ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ನಾಯಕತ್ವ ತೊರೆಯುತ್ತಿದ್ದಂತೆಯೇ ಅಭಿಮಾನಿಗಳು ತೀವ್ರ ನೋವು ಅನುಭವಿಸಿದ್ದಾರೆ. 

ಇದನ್ನೂ ಓದಿ: Team India : ವಿಶ್ವಕಪ್‌ನಿಂದ ಹೊರಗುಳಿಯಲು ಬೇಕಂತಲೇ ಗಾಯಗೊಂಡ ಈ ಆಲ್‌ರೌಂಡರ್!

ಆರನ್ ಫಿಂಚ್ ತಮ್ಮ ಹೇಳಿಕೆಯಲ್ಲಿ, 'ಇದುವರೆಗಿನ ಪ್ರಯಾಣ ಅದ್ಭುತವಾಗಿದೆ. ಕೆಲವು ಅತ್ಯುತ್ತಮ ODI ತಂಡಗಳ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ. ನಾನು ಯಾರೊಂದಿಗೆ ಕ್ರಿಕೆಟ್ ಆಡಿದ್ದೇನೆಯೋ ಅವರೆಲ್ಲರಿಂದ ನಾನು ಆಶೀರ್ವಾದ ಪಡೆದಿದ್ದೇನೆ” ಎಂದು ಹೇಳಿದ್ದಾರೆ.

'ಈಗ ಮುಂದಿನ ನಾಯಕನಿಗೆ ವಿಶ್ವಕಪ್ ತಂಡವನ್ನು ಸಿದ್ಧಪಡಿಸಲು ಮತ್ತು ಗೆಲ್ಲಲು ಅವಕಾಶವನ್ನು ನೀಡುವ ಸಮಯ ಬಂದಿದೆ. ಈ ಹಂತವನ್ನು ತಲುಪಲು ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದಗಳು” ಎಂದು ನುಡಿದಿದ್ದಾರೆ. ಕಳೆದ ವರ್ಷ ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದಿತ್ತು.

ಆರನ್ ಫಿಂಚ್ ಅತ್ಯಂತ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ. ಅವರು ಕೆಲವು ಸಮಯದಿಂದ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಸಾಧಿಸಿಲ್ಲ. ಅವರು ತಮ್ಮ ಕೊನೆಯ ಏಳು ಇನ್ನಿಂಗ್ಸ್‌ಗಳಲ್ಲಿ 26 ರನ್ ಮಾತ್ರ ಗಳಿಸಿದ್ದಾರೆ. ಹೆಸರಿಗೆ ತಕ್ಕಂತೆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಫಿಂಚ್ 2023 ರ ODI ವರ್ಲ್ಡ್ ಕಪ್ ಅನ್ನು ಭಾರತದಲ್ಲಿ ನಡೆಸುವುದಾಗಿ ಹೇಳಿದ್ದರು. ಆದರೆ ಕಳಪೆ ಫಾರ್ಮ್‌ನಿಂದಾಗಿ ನಿವೃತ್ತಿ ಹೊಂದಬೇಕಾಯಿತು. 

ಇದನ್ನೂ ಓದಿ: Virender Sehwag : ತೆಂಡೂಲ್ಕರ್ ಶತಕಗಳ ದಾಖಲೆ ಮುರಿತಾರೆ ಕೊಹ್ಲಿ : ಭವಿಷ್ಯ ನುಡಿದ ಸೆಹ್ವಾಗ್  

ಆರನ್ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಪರ 145 ODIಗಳಲ್ಲಿ 5401 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ನಾಲ್ಕನೇ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರಾಗಿದ್ದಾರೆ. ರಿಕಿ ಪಾಂಟಿಂಗ್ ಅವರಿಗಿಂತ 29 ಹೆಚ್ಚುವರಿ ಶತಕಗಳನ್ನು ಹೊಂದಿದ್ದಾರೆ. ಡೇವಿಡ್ ವಾರ್ನರ್ ಮತ್ತು ಮಾರ್ಕ್ ವಾ 17-17 ಶತಕಗಳನ್ನು ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News