T20 World Cup: ವನಿತಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ: 6 ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಆಸೀಸ್ ಮಹಿಳಾ ಪಡೆ

Women's World Cup 2023: ಆಸ್ಟ್ರೇಲಿಯಾ ಆರನೇ ಬಾರಿಗೆ ಟಿ-20 ಮಹಿಳಾ ವಿಶ್ವ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಹಿಂದೆ 2010, 2012, 2014, 2018 ಮತ್ತು 2020ರಲ್ಲೂ ಟಿ20 ವಿಶ್ವಕಪ್‌ ಗೆದ್ದಿದ್ದರು. 157 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.

Written by - Bhavishya Shetty | Last Updated : Feb 26, 2023, 10:47 PM IST
    • ICC T20 ಮಹಿಳಾ ವಿಶ್ವಕಪ್ ಅನ್ನು ಆರನೇ ಬಾರಿಗೆ ಗೆದ್ದುಕೊಂಡಿತು.
    • ಫೈನಲ್ ದಕ್ಷಿಣ ಆಫ್ರಿಕಾದ ಮಹಿಳಾ ತಂಡವನ್ನು 19 ರನ್‌ಗಳಿಂದ ಸೋಲಿಸಿದ್ದಾರೆ.
    • ಆಸ್ಟ್ರೇಲಿಯಾ ಆರನೇ ಬಾರಿಗೆ ಟಿ-20 ಮಹಿಳಾ ವಿಶ್ವ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಯಿತು
T20 World Cup: ವನಿತಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ: 6 ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಆಸೀಸ್ ಮಹಿಳಾ ಪಡೆ title=
Women's World Cup 2023

Women's World Cup 2023: ಆಸ್ಟ್ರೇಲಿಯಾ ಮಹಿಳಾ ಪಡೆ ಭಾನುವಾರ ಇತಿಹಾಸವನ್ನು ಸೃಷ್ಟಿಸಿದೆ. ICC T20 ಮಹಿಳಾ ವಿಶ್ವಕಪ್ ಅನ್ನು ಆರನೇ ಬಾರಿಗೆ ಗೆದ್ದುಕೊಂಡಿತು. ಕೇಪ್ ಟೌನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ದಕ್ಷಿಣ ಆಫ್ರಿಕಾದ ಮಹಿಳಾ ತಂಡವನ್ನು 19 ರನ್‌ಗಳಿಂದ ಸೋಲಿಸಿದ್ದಾರೆ. ಆರಂಭಿಕ ಬೆತ್ ಮೂನಿ (ಅಜೇಯ 74) ಅವರ ಅದ್ಭುತ ಇನ್ನಿಂಗ್ಸ್‌ನಿಂದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 156 ರನ್ ಗಳಿಸಿತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ: Sarah Taylor: ಮಗುವಿನ ನಿರೀಕ್ಷೆಯಲ್ಲಿದ್ದಾರೆ ವಿರಾಟ್’ಗೆ ಪ್ರಪೋಸ್ ಮಾಡಿದ್ದ ಲೆಸ್ಬಿಯನ್ ಕ್ರಿಕೆಟ್ ಆಟಗಾರ್ತಿ!

ಆರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್:

ಆಸ್ಟ್ರೇಲಿಯಾ ಆರನೇ ಬಾರಿಗೆ ಟಿ-20 ಮಹಿಳಾ ವಿಶ್ವ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಹಿಂದೆ 2010, 2012, 2014, 2018 ಮತ್ತು 2020ರಲ್ಲೂ ಟಿ20 ವಿಶ್ವಕಪ್‌ ಗೆದ್ದಿದ್ದರು.

157 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 48 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. ಆದರೆ ಮೇಗನ್ ಶಟ್ ಇನಿಂಗ್ಸ್ ನ 17ನೇ ಓವರ್ ನ ಮೂರನೇ ಎಸೆತದಲ್ಲಿ ಲಾರಾ ಅವರನ್ನು ಔಟ್ ಮಾಡಿದರು. ಈ ಸಂದರ್ಭದಲ್ಲಿ ಡಿಆರ್‌ಎಸ್ ತೆಗೆದುಕೊಂಡರೂ ಯಶಸ್ವಿಯಾಗಲಿಲ್ಲ. ಲಾರಾ ನಾಲ್ಕನೇ ವಿಕೆಟ್‌ಗೆ ಕ್ಲೋಯ್ ಟ್ರಯಾನ್ (25) ಅವರೊಂದಿಗೆ 55 ರನ್ ಸೇರಿಸಿದರು. ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಜೆಸ್ ಜೊನಾಸೆನ್ ಬೌಲಿಂಗ್‌ನಲ್ಲಿ ಟ್ರಯಾನ್ ಬೌಲ್ಡ್ ಆದರು. ಆಸ್ಟ್ರೇಲಿಯಾ ಪರ ಮೇಗನ್ ಶಟ್, ಆಶ್ಲೇ ಗಾರ್ಡ್ನರ್, ಡಾರ್ಸಿ ಬ್ರೌನ್ ಮತ್ತು ಜೆಸ್ ಜೊನಾಸನ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು, ಆರಂಭಿಕ ಆಟಗಾರ್ತಿ ಬೆತ್ ಮೂನಿ ಅತ್ಯುತ್ತಮ ರೀತಿಯಲ್ಲಿ ಆಡುವಾಗ ಅರ್ಧಶತಕ ಗಳಿಸಿದರು, ಇದರಿಂದಾಗಿ ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲಿ 6 ವಿಕೆಟ್‌ಗೆ 156 ರನ್ ಗಳಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೂನಿ 53 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 74 ರನ್ ಗಳಿಸಿದರು. ಅವರು ಅಲಿಸ್ಸಾ ಹೀಲಿ (18) ಅವರೊಂದಿಗೆ 36 ರನ್‌ಗಳ ಆರಂಭಿಕ ಜೊತೆಯಾಟವನ್ನು ಆಡಿದ್ದಾರೆ. ಇದಲ್ಲದೇ ಆಶ್ಲೇ ಗಾರ್ಡ್ನರ್ (29) ಅವರೊಂದಿಗೆ ಎರಡನೇ ವಿಕೆಟ್‌ಗೆ 46 ರನ್ ಸೇರಿಸಿದ್ದಾರೆ.

ಇದನ್ನೂ ಓದಿ: Virat Kohli:“ನನ್ನನ್ನು ಮದುವೆಯಾಗು ಕೊಹ್ಲಿ…!!”: ವಿರಾಟ್’ಗೆ ಪ್ರಪೋಸ್ ಮಾಡಿದ ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ

ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಂತರ ಅಲಿಸ್ಸಾ ಮತ್ತು ಮೂನಿ ಜೋಡಿ ತಂಡವನ್ನು ಎಚ್ಚರಿಕೆಯಿಂದ ಆರಂಭಿಸಿತು. ಮೂನಿ ನಿಧಾನವಾಗಿ ಆಟ ಪ್ರಾರಂಭಿಸಿದರು ಆದರೆ ಅಲಿಸ್ಸಾ ಲಯದಲ್ಲಿದ್ದಂತೆ ತೋರುತ್ತಿದ್ದರು. ನೊನ್ಕುಲುಲೆಕೊ ಮಲಬಾ ಅವರ ಎರಡನೇ ಎಸೆತದಲ್ಲಿ ಬೌಂಡರಿಯೊಂದಿಗೆ ಖಾತೆಯನ್ನು ತೆರೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News