Virat Kohli:“ನನ್ನನ್ನು ಮದುವೆಯಾಗು ಕೊಹ್ಲಿ…!!”: ವಿರಾಟ್’ಗೆ ಪ್ರಪೋಸ್ ಮಾಡಿದ ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ

Danielle Wyatt Love proposal to Virat Kohli: ಇಂಗ್ಲೆಂಡ್ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ಎಲ್ಲರಿಗೂ ಚಿರಪರಿಚಿತ ಹೆಸರು. ಇವರು ಒಂದೊಮ್ಮೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆಯನ್ನು ಮಾಡಿದ್ದರು.

1 /5

ಇಂಗ್ಲೆಂಡ್ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ಎಲ್ಲರಿಗೂ ಚಿರಪರಿಚಿತ ಹೆಸರು. ಇವರು ಒಂದೊಮ್ಮೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆಯನ್ನು ಮಾಡಿದ್ದರು.

2 /5

'ಕೊಹ್ಲಿ ನನ್ನನ್ನು ಮದುವೆಯಾಗು!!!” ಎಂದು ಟ್ವೀಟ್ ಮೂಲಕ ಪ್ರಪೋಸ್ ಮಾಡಿದ್ದರು. ಇದು 2014ರ ಏಪ್ರಿಲ್ ತಿಂಗಳಿನಲ್ಲಿ ಮಾಡಿದ ಟ್ವೀಟ್.

3 /5

ಆ ಬಳಿಕ 2017ರಲ್ಲಿ ಟಸ್ಕನಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದರು. "ಅಭಿನಂದನೆಗಳು @imVkohli & @AnushkaSharma" ಎಂದು ಟ್ವೀಟ್ ಮಾಡಿದ್ದಾರೆ. ಡೇನಿಯಲ್ ಅವರ ಟ್ವೀಟ್ ಅನ್ನು 1.2k ಬಾರಿ ರೀಟ್ವೀಟ್ ಮಾಡಲಾಗಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಲವು ತಮಾಷೆ ಕಮೆಂಟ್ ಗಳನ್ನು ಮಾಡತೊಡಗಿದ್ದಾರೆ.

4 /5

2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ವಿರಾಟ್ ಕೊಹ್ಲಿಯನ್ನು ಡೇನಿಯಲ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಫೋಟೋ ತೆಗೆಯಲಾಗಿದೆ.

5 /5

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಚಕ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡವನ್ನು 9 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ವ್ಯಾಟ್.