Sarah Taylor: ಇಂಗ್ಲೆಂಡಿನ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಸಾರಾ ಟೇಲರ್ ಬಗ್ಗೆ ನಮಗೆಲ್ಲಾ ತಿಳಿದಿದೆ. ಇವರು ಡಯಾನಾ ಎಂಬವರ ಜೊತೆ ಸಂಬಂಧದಲ್ಲಿದ್ದಾರೆ.ಆದರೆ ಇವರಿಬ್ಬರು ಇನ್ನೂ ಮದುವೆಯಾಗಿಲ್ಲ. ಸದ್ಯ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಇತ್ತೀಚೆಗೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಸಾರಾ ಟೇಲರ್ 2019 ಸೆಪ್ಟೆಂಬರ್ ತಿಂಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದರು, ಇನ್ನು ಸಾರಾ ಪ್ರತೀ ಹೆಜ್ಜೆಯಲ್ಲೂ ಡಯಾನಾ ಬೆಂಬಲವಾಗಿ ನಿಂತಿದ್ದಾರೆ.
ಸಾರಾ ಮತ್ತು ಡಯಾನಾ IVF (ಇನ್ ವಿಟ್ರೊ ಫರ್ಟಿಲೈಸೇಶನ್) ಪ್ರಕ್ರಿಯೆಯ ಮೂಲಕ ತಮ್ಮ ಕಂದಮ್ಮನ್ನು ಸ್ವಾಗತಿಸುತ್ತಿದ್ದಾರೆ.
ತಾನು ಲೆಸ್ಬಿಯನ್ ಎಂದು ಘೋಷಿಸಿದ ಮಾಜಿ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಸಾರಾ, ತಾನು ಪ್ರೀತಿಸುತ್ತಿರುವ ಸಂಗತಿಯನ್ನು ಹೇಳುವ ಮೂಲಕ ಸಲಿಂಗ ಸಂಬಂಧಗಳು ಅಥವಾ ಮದುವೆಗಳ ಬಗ್ಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು.
“ನಾವೆಲ್ಲರೂ ವಿಭಿನ್ನ ನಂಬಿಕೆಗಳೊಂದಿಗೆ ವಿಭಿನ್ನವಾಗಿ ಬೆಳೆದಿದ್ದೇವೆ, ನಾನು ಇತರರ ಬಗ್ಗೆ ಜಡ್ಜ್ ಮಾಡುವುದಿಲ್ಲ. ಆದರೆ ನಾನು ದ್ವೇಷ, ಅಪಹಾಸ್ಯ ಮತ್ತು ನಿಂದನೆಯ ಬಗ್ಗೆ ತೀರ್ಪು ನೀಡುತ್ತೇನೆ. ನೀವು ಇಲ್ಲಿಗೆ ಸೇರಿದವರಲ್ಲ” ಎಂದು ಹೇಳಿದ್ದಾರೆ. ಈ ಟ್ವೀಟ್ ಮಾಡಲು ಕಾರಣ, ಸಾರಾ ಲೆಸ್ಬಿಯನ್ ಎಂದೊಡನೆ ಅನೇಕ ಜನರು ಕೆಟ್ಟದಾಗಿ ಕಮೆಂಟ್ ಮಾಡಲು ಮುಂದಾದರು. ಇದರಿಂದ ಬೇಸರಗೊಂಡ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.
ಇನ್ನು ಟೇಲರ್ ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಆದರೆ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ ಅವರಂತೆಯೇ, ಟೇಲರ್ ಮತ್ತು ಅವರ ತಂಡದ ಸಹ ಆಟಗಾರರು ಕೊಹ್ಲಿಯ ಬಗ್ಗೆ ಹುಚ್ಚು ಅಭಿಮಾನವನ್ನು ಹೊಂದಿದ್ದರು.
ಇಂಗ್ಲಿಷ್ ಮಹಿಳಾ ಕ್ರಿಕೆಟಿಗರಾದ ಟೇಲರ್, ಕೇಟ್ ಕ್ರಾಸ್ ಮತ್ತು ಡೇನಿಯಲ್ ವ್ಯಾಟ್ ಅವರೊಂದಿಗೆ ಕೊಹ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಬಹುಶಃ 2014 ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕ್ಲಿಕ್ ಮಾಡಲಾದ ಫೋಟೋ ಎಂದು ಹೇಳಲಾಗುತ್ತಿದೆ.