KKR ಆಟಗಾರನ ವಿರುದ್ಧ ಬಿಸಿಸಿಐ ಕಠಿಣ ಕ್ರಮ: ಒಂದೇ ಒಂದು ರೂ,ಸಂಭಾವನೆ ನೀಡದೆ ನಿಷೇಧ! ಮಾಡಿದ ತಪ್ಪೇನು?

Harshit Rana: ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಮ್ಯಾಚ್ ರೆಫರಿ ಮುಂದೆ ಹಾಜರಾದ ಅವರು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಇದೀಗ ಶಿಕ್ಷೆ ವಿಧಿಸಲಾಗಿದೆ.

Written by - Bhavishya Shetty | Last Updated : Apr 30, 2024, 07:24 PM IST
    • ಹರ್ಷಿತ್ ರಾಣಾ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರು
    • ಹರ್ಷಿತ್ ರಾಣಾ ತಮ್ಮ ಪಂದ್ಯದ ಶುಲ್ಕವನ್ನೂ ಕಳೆದುಕೊಂಡಿದ್ದಾರೆ
    • ರಾಣಾ ಅವರ ಶೇಕಡಾ 100 ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದೆ
KKR ಆಟಗಾರನ ವಿರುದ್ಧ ಬಿಸಿಸಿಐ ಕಠಿಣ ಕ್ರಮ: ಒಂದೇ ಒಂದು ರೂ,ಸಂಭಾವನೆ ನೀಡದೆ ನಿಷೇಧ! ಮಾಡಿದ ತಪ್ಪೇನು? title=
Harshit rana

Harshit Rana: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌’ನ ಅತ್ಯುತ್ತಮ ಪ್ರದರ್ಶನ ಮುಂದುವರೆದಿದೆ. ಆದರೆ ಬಿಸಿಸಿಐ ಈ ತಂಡದ ಆಟಗಾರರೊಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದು, ಒಂದು ಪಂದ್ಯದಿಂದ ಅಮಾನತುಗೊಳಿಸಿದೆ. ಅಷ್ಟಕ್ಕೂ ಆ ಆಟಗಾರ ಬೇರಾರು ಅಲ್ಲ, ಹರ್ಷಿತ್ ರಾಣಾ.

ಇದನ್ನೂ ಓದಿ: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎಷ್ಟು ಕೋಟಿ ಒಡೆಯ ಗೊತ್ತಾ? ವಿರಾಟ್ ಆದಾಯಕ್ಕಿಂತ ಹೆಚ್ಚೇ ಇದೆ ಹಿಟ್ ಮ್ಯಾನ್ INCOME!

ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಮ್ಯಾಚ್ ರೆಫರಿ ಮುಂದೆ ಹಾಜರಾದ ಅವರು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಇದೀಗ ಶಿಕ್ಷೆ ವಿಧಿಸಲಾಗಿದೆ.

ಒಂದು ಪಂದ್ಯದಿಂದ ಅಮಾನತುಗೊಂಡಿದ್ದಲ್ಲದೆ, ಹರ್ಷಿತ್ ರಾಣಾ ತಮ್ಮ ಪಂದ್ಯದ ಶುಲ್ಕವನ್ನೂ ಕಳೆದುಕೊಂಡಿದ್ದಾರೆ. ಹರ್ಷಿತ್ ರಾಣಾ ಅವರ ಶೇಕಡಾ 100 ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದೆ.

ಹರ್ಷಿತ್ ರಾಣಾ ಎರಡನೇ ಬಾರಿಗೆ ಶಿಕ್ಷೆಗೆ ಗುರಿಯಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಕ್ರಮಣಕಾರಿ ಸಂಭ್ರಮಾಚರಣೆಗಾಗಿ ಅವರ ಪಂದ್ಯ ಶುಲ್ಕದ 60 ಪ್ರತಿಶತವನ್ನು ಕಡಿತಗೊಳಿಸಲಾಗಿತ್ತು. ಆದರೆ ತಪ್ಪನ್ನು ಪುನರಾವರ್ತಿಸಿದ ಕಾರಣ ಈ ಕಠಿಣ ಶಿಕ್ಷೆಯನ್ನು ನೀಡಲಾಗಿದೆ.

ಇದನ್ನೂ ಓದಿ: CSK ಬ್ಯಾಟರ್ ಶಿವಂ ದುಬೆ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿ.. ಅಪರೂಪದ ಅಂದಕ್ಕೆ ಮಣಿದು ಆಕೆಯನ್ನೇ 2 ಬಾರಿ ಮದುವೆಯಾದ ದುಬೆ

ಹರ್ಷಿತ್ ರಾಣಾ ಈ ಸೀಸನ್’ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News