Virat Kohli: ಈ ವಿಷಯದಲ್ಲಿ ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾರನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ

Virat Kohli: ತಮ್ಮ ಮಾಂತ್ರಿಕ ಆಟದಿಂದಾಗಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿ ಮಾಡಿರುವ ಕ್ರಿಕೆಟ್ ಜಗತ್ತಿನ ಕಿಂಗ್ ವಿರಾಟ್ ಕೊಹ್ಲಿ ಏಷ್ಯಾದ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 

Written by - Yashaswini V | Last Updated : Jan 2, 2024, 08:25 AM IST
  • ಭಾರತದ ಮಾಜಿ ನಾಯಕನನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪ್ರಾಬಲ್ಯದಿಂದಾಗಿ ಹೆಚ್ಚಾಗಿ 'ಕಿಂಗ್' ಎಂದು ಶ್ಲಾಘಿಸಲಾಗುತ್ತದೆ.
  • ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ದಾಖಲೆಗಳ ಮಹಾಪೂರವೇ ಇದೆ.
  • ವಿರಾಟ್ ಕೊಹ್ಲಿ ಕಳೆದ ವರ್ಷ ಬಿಟಿಎಸ್‌ನ ಜಂಗ್‌ಕುಕ್ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಕೂಡ ಹಿಂದಿಕ್ಕಿದ್ದಾರೆ.
Virat Kohli: ಈ ವಿಷಯದಲ್ಲಿ ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾರನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ  title=

Most Popular Asian Personality: ಟೀಂ ಇಂಡಿಯಾದ ಅದ್ಭುತ ಆಟಗಾರ ವಿರಾಟ್ ಕೊಹ್ಲಿ ಅವರ ವರ್ಚಸ್ಸು ಮತ್ತು ಜನಪ್ರಿಯತೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಬ್ಯಾಟಿಂಗ್ ಮಾಂತ್ರಿಕ 2023ರಲ್ಲಿಯೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, 2023ರಲ್ಲಿ  ಈ ವಿಚಾರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನೂ ಹಿಂದಿಕ್ಕಿದ್ದಾರೆ ವಿರಾಟ್ ಕೊಹ್ಲಿ. 

ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ 2023ರಲ್ಲಿ ವಿಕಿಪೀದ್ಯಾದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಏಷ್ಯಾದ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ- ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ… ರೋಹಿತ್ ಶರ್ಮಾ ಪಾರುಪತ್ಯ ಅಂತ್ಯ!?

ವಾಸ್ತವವಾಗಿ, ವಿರಾಟ್ ಕೊಹ್ಲಿ 2023 ರಲ್ಲಿ ಏಷ್ಯನ್ನರಲ್ಲಿ ಹೆಚ್ಚು ವೀಕ್ಷಿಸಿದ ವಿಕಿಪೀಡಿಯಾ ಪುಟಗಳ ಪಟ್ಟಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರನ್ನು ಹಿಂದಿಕ್ಕಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ,  2023ರಲ್ಲಿ ವಿರಾಟ್ ಕೊಹ್ಲಿ ಅವರ ವಿಕಿಪೀಡಿಯಾ ಪುಟಕ್ಕೆ 10.7 ಮಿಲಿಯನ್ ಜನರು ಭೇಟಿ ನೀಡಿದ್ದಾರೆ.

ಎರಡನೇ ಸ್ಥಾನದಲ್ಲಿ ಜಂಗ್‌ಕುಕ್ : 
ವಿಶ್ವ ಪ್ರಸಿದ್ಧ ಬಾಯ್ ಬ್ಯಾಂಡ್ನ ಸದಸ್ಯರಾಗಿ ಪ್ರಾಮುಖ್ಯತೆ ಪಡೆದಿರುವ ಗಾಯಕ ಜಂಗ್‌ಕುಕ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 

ಇದನ್ನೂ ಓದಿ- 2023 ರ ಕ್ಯಾಲೆಂಡರ್‌ ವರ್ಷದಲ್ಲಿ "ಶುಭ್ಮನ್‌ ಗಿಲ್‌", "ವಿರಾಟ್‌ ಕೊಹ್ಲಿ"ಯೇ ಅತ್ಯಧಿಕ ರನ್‌ ಗೆಟ್ಟರ್ಸ್! ಭಾರತದ ಇಬ್ಬರು ಆಟಗಾರರಿಗೆ ಅಗ್ರಗಣ್ಯ ಸ್ಥಾನ

ಮೂರನೇ ಸ್ಥಾನದಲ್ಲಿ ಶಾರುಖ್ ಖಾನ್: 
2023ರಲ್ಲಿ ಪಠಾಣ್, ಜವಾನ್ ಮತ್ತು ಡುಂಕಿ ಎಂಬ ಮೂರು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಶಾರುಖ್ ಖಾನ್ ಅವರ ವಿಕಿಪೀಡಿಯಾ ಪುಟಕ್ಕೆ 7.7 ಮಿಲಿಯನ್ ಜನರು ಭೇಟಿ ನೀಡಿದ್ದಾರೆ. 

ನಾಲ್ಕನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ: 
ದೇಸಿ ಗರ್ಲ್ ಎಂತಲೇ ಖ್ಯಾತಿ ಪಡೆದಿರುವ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲಿಯೂ ತಮ್ಮ ಛಾಪು ಮೂಡಿಸಿರುವ ಜಾಗತಿಕ ಸೂಪರ್‌ಸ್ಟಾರ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ವಿಕಿಪೀಡಿಯಾ ಪುಟಕ್ಕೆ 2023ರಲ್ಲಿ 6.5 ಮಿಲಿಯನ್ ಜನರು ಭೇಟಿ ನೀಡಿದ್ದು,  ಏಷ್ಯಾದ ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News