9 ವಿಕೇಟ್‌ಗಳಿಗೆ ಡಿಕ್ಲೇರ್‌ ನೀಡಿದ ದಕ್ಷಿಣ ಆಫ್ರಿಕಾ! ಭಾರತಕ್ಕೆ 163 ರನ್‌ ಗಳ ಹಿನ್ನಡೆ

SA vs INd test 3rd day : ದಕ್ಷಿಣ ಆಪ್ರಿಕಾ ತಂಡವು ಬ್ಯಾಟಿಂಗ್‌ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್‌ ಮುಗಿಸಿದ್ದು 408 ರನ್‌ ಕಲೆ ಹಾಕಿದೆ. 163 ರನ್‌ಗಲಿಂದ ಭಾರತವು   ಈ ಪಂದ್ದಯದಲ್ಕ್ಷಿಲಿ ಹಿನ್ಣನಡೆ ಸಾಧಿಸಿದೆ. ಆಫ್ರಿಕಾ ಪರ ಡೀನ್‌ ಎಲ್ಗರ್‌ 185 ರನ್‌ಗಳಿಸಿದರೆ, ಜಾನ್ಸನ್‌ ಅವರು ಅಜೇಯ 84 ಗಲಿಸದರು. ಭಾರತವು ಬ್ಯಾಟಿಂಗ್‌ನಲ್ಲಿ ತನ್ನ ಎರಡೆನೇ ಇನ್ನಿಂಗ್ಸ್‌ ಆರಂಭಿಸಿದೆ.  

Written by - Zee Kannada News Desk | Last Updated : Dec 28, 2023, 08:02 PM IST
  • ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 408 ಗಳಿಸಿದೆ
  • ದಕ್ಷಿಣ ಆಫ್ರಿಕಾ ಪರ ಡೀನ್‌ ಎಲ್ಗರ್‌ 185 ರನ್‌ ಗಳಿಸಿದರು
  • ಭಾರತದ ಪರ ಜಸ್ಪ್ರಿತ್‌ ಬುಮ್ರಾ 4 ವಿಕೇಟ್‌ ಪಡೆದು ಮಿಂಚಿದರು
9 ವಿಕೇಟ್‌ಗಳಿಗೆ ಡಿಕ್ಲೇರ್‌ ನೀಡಿದ ದಕ್ಷಿಣ ಆಫ್ರಿಕಾ! ಭಾರತಕ್ಕೆ 163 ರನ್‌ ಗಳ ಹಿನ್ನಡೆ title=

INd vs SA 1st test: ಮೂರೆನೇ ದಿನದಂದು ಬ್ಯಾಟಿಂಗ್‌ ಆರಂಭಿಸಿದ  ದಕ್ಷಿಣ ಆಫ್ರಿಕಾ ತಂಡವು ಭಾರತದ ಬೌಲರ್ಸ್‌ಗಳಿಗೆ ಬೆವರಿಳಿಸಿದೆ. ಭಾರತವನ್ನು ಬೌಲಿಂಗ್‌ನಲ್ಲಿ ಬೆಂಡೆತ್ತಿದ್ದ ದಕ್ಷಿಣ ಆಫ್ರಿಕಾ ತಂಡವು ತನ್ನ ಬ್ಯಾಟಿಂಗ್‌ ವಿಭಾಗದಲ್ಲು ಉತ್ತಮ ಪ್ರದರ್ಶನ ನೀಡಿದೆ. ಡೀನ್‌ ಎಲ್ಗರ್‌ ಹಾಗೂ ಮಾರ್ಕೋ ಜಾನ್ಸನ್‌ ಇಬ್ಬರು ಸೇರಿ ತಂಡವನ್ನು ಬೃಹತ್‌ ರನ್ನಿನ ಗಡಿಯತ್ತ ಕೊಂಡೋಯ್ದರು.

ದಕ್ಷಿಣ ಆಫ್ರಿಕಾವು ತನ್ನ ಮೊದಲನೇ 108.4 ಒವರ್‌ಗಳನ್ನು ಆಡಿ 408 ರನ್‌ಗಳನ್ನು ಇನ್ನಿಂಗ್ಸ್‌ ಕಲೆಹಾಕಿದೆ. ದಕ್ಷಿಣ ಆಫ್ರಿಕಾ ತನ್ನ 9ನೇ ವಿಕೇಟ್‌ ಕಳೆದುಕೊಳ್ಳುತ್ತಿದ್ದಂತೆಯೇ 408 ರನ್‌ ಗಲಿಸಿದ್ದು ಡಕ್ಲೇರ್‌ ಭಾರತಕ್ಕೆ ಬ್ಯಾಟಿಂಗ್‌ ಡಿಕ್ಲೇರ್‌ ನೀಡಿದೆ. ದಕ್ಷಿಣ ಆಫ್ರಿಕಾ ಒಂದು ವಿಕೆಟ್‌ ಬಾಕಿ ಇರುವಾಗಲೆ ಇನ್ನಿಂಗಸ್‌ ಮುಗಿಸಿದೆ.  ನಾಯಕ ಟೆಂಬಾ ಬವುಮಾ ಅವರ ಅನುಪಸ್ಥಿತಿಯು ದಕ್ಷಿಣ ಆಫ್ರಿಕಾ ಡಿಕ್ಲೇರ್‌ ನೀಡಲು ಕಾರಣವಾಯಿತು. 

ಇದನ್ನು ಓದಿ-ಭಾರತಕ್ಕೆ ಕಂಟಕವಾದ ಡೀನ್‌ ಎಲ್ಗರ್‌ ವಿಕೇಟ್‌ ಪಡೆದ ದಿ ಲಾರ್ಡ್‌ ಶಾರ್ದುಲ್‌ ಠಾಕೂರು!

ದಕ್ಷಿಣ ಆಫ್ರಿಕಾ ಪರ ಆರಂಭಿಕನಾಗಿ ಕಣಕಿಳಿದಿದ್ದ ಡೀನ್‌ ಎಲ್ಗರ್‌ ಶತಕ ಸಿಡಿಸಿ ಸಂಭ್ರಮಿಸಿದರು. 287 ಬಾಲ್‌ಗಳಲ್ಲಿ 28 ಬೌಂಡರಿಗಳ ಸಹಾಯದೊಂದಿಗೆ 185 ರನ್‌ಗಳಿಸಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೋಯ್ದರು. ಇನ್ನೊಂದು ಕಡೆ ದ. ಆಫ್ರಿಕಾದ ಆಲ್‌ರೌಂಡರ್‌ ಮಾರ್ಕೊ ಜಾನ್ಸನ್‌ ಅವರು ಅಜೇಯ 84 ರನ್‌ ಗಳಿಸಿ ತಂಡದ ಮೊತ್ತವನ್ನ 400 ಗಡಿ ದಾಟಿಸಲು ನೆರವಾದರು. ಜಾನ್ಸನ್‌ ಅವರ ಬ್ಯಾಟ್‌ನಿಂದ 1 ಸಿಕ್ಸರ್‌ ಜೊತೆಗೆ 11 ಬೌಂಡರಿಗಳು ಅವರ ಸ್ಕೋರ್‌ ಪಟ್ಟಿಯಲ್ಲಿ ದಾಖಲಾಗಿದೆ. 

ಬಾರತದ ಪರ ಬೌಲಿಂಗ್‌  ವಿಭಾಗದಲ್ಲಿ ಬೂಮ್ರ ಅವರು ಒಂದು ಉತ್ತಮ ಸ್ಪೆಲ್‌ ಮಾಡಿದ್ಧಾರೆ. 26.4 ಒವರ್‌ಗಳನ್ನು ಮಾಡಿ . 69 ರನ್‌ ನೀಡುವ 4 ವಿಕೆಟ್‌ಗಳನ್ನು ಪಡೆದುಕೊಂಡರು. ಅಷ್ಟೇ ಮೊಹಮ್ಮದ್‌ ಸಿರಾಜ್‌ ದಕ್ಷಿಣ ಆಫ್ರಿಕಾದ ಪ್ರುಮಖ ವಿಕೇಟ್‌ಗಳಾದ ಐಡೆನ್‌ ಮಾರ್ಕ್ರಂ ಹಾಗೂ  ಡೇವಿಡ್‌ ಬೆಡಿಂಗ್‌ಹ್ಯಾಮ್‌ ಅವರ ವಿಕೇಟ್‌ ಪಡೆದರು. 

ಇದನ್ನು ಓದಿ-ವಿರಾಟ್‌ ಕೊಹ್ಲಿ ಹೊಸ ಟ್ರಿಕ್ಸ್‌ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ! ಇದೇನಿದು ಬೇಲ್ಸ್‌ ಟ್ರಿಕ್ ?

  ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಪಟ್ಟಿ : 

ಐಡೆನ್‌ ಮಾರ್ಕ್ರಂ‌ 5(7), ಡೀನ್‌ ಎಲ್ಗರ್‌ 185(287),ಟೋನಿ ದಿ ಜಾರ್ಜಿ 28(62),  ಕೀಗನ್‌ ಪೀಟರ್ಸೆನ್ 2(7), ಡೇವಿಡ್‌ ಬೆಡಿಂಗ್‌ಹ್ಯಾಮ್‌ 56(87), ಕೈಲ್‌ ವೆರನ್ನೆ 4(7), ಮಾರ್ಕೋ ಜಾನ್ಸನ್‌-87(147), ಜೆರಾಲ್ಡ್ ಕೋಟ್ಜಿ- 19(18), ಕಗಿಸೋ ರಬಾಡ- 1(9), ನಂದ್ರೆ ಬರ್ಜರ್- 0(20)

  ಭಾರತದ ಬೌಲಿಂಗ್‌ ಪಟ್ಟಿ :

ಜಸ್ಪ್ರಿತ್‌ ಬುಮ್ರಾ          - 4 ವಿಕೆಟ್
ಮೊಹಮ್ಮದ್‌ ಸಿರಾಜ್‌  - 2 ವಿಕೆಟ್
ಶಾರ್ದುಲ್‌ ಠಾಕುರ್‌     - 1 ವಿಕೆಟ್
ಪ್ರಸಿಧ್‌ ಕೃಷ್ಣ             - 1 ವಿಕೆಟ್

ರವಿಚಂದ್ರನ್‌ ಅಶ್ವಿನ್‌  - 1 ವಿಕೆಟ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News