ವಿರಾಟ್‌ ಕೊಹ್ಲಿ ಹೆಸರಿಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆ ! ಕ್ಯಾಲೆಂಡರ್‌ ವರ್ಷದಲ್ಲಿ 7 ಬಾರಿ 2000 ರನ್‌ ಬಾರಿಸಿದ ಏಕೈಕ ವ್ಯಕ್ತಿ.

Virat kohli :ದಕ್ಷಿಣ ಆಫ್ರಿಕಾ ವಿರುಧ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲಾಗಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುಧ್ದ 32 ರನ್‌ ಗಳಿಂದ ಭರ್ಜರಿ ಜಯಗಳಿಸದೆ. ಅಷ್ಟೇ ಅಲ್ಲದೆ ವಿರಾಟ್‌ ಕೊಹ್ಲಿ ಮೂರನೆ ದಿನದ ಪಂದ್ಯದಲ್ಲಿ 76 ರನ್‌ ಗಳಿಸಿ ಏಕಾಂಗಿ ಹೊರಾಟ ನಡೆಸಿದರು. ಈ ಪಂದ್ಯದಲ್ಲಿ ಈ ವರ್ಷದ ಎರೆಡು ಸಾವಿರ ರನ್‌ಗಳನ್ನು ಪೂರೈಸಿದರು ಮತ್ತು ಇದು 7ನೇ ಬಾರಿ ಕ್ಯಾಲೆಂಡರ್‌ ವರ್ಷದಲ್ಲಿ 2000 ರನ್‌ ಗಳಿಸಿದ ಏಕೈಕ ದಾಖಲೆಯಾಗಿದೆ. 

Written by - Zee Kannada News Desk | Last Updated : Dec 29, 2023, 04:31 PM IST
  • ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಜಯ ದೊರಕಿದೆ
  • 2023 ರ ಕ್ಯಾಲೆಂಡರ್‌ ವರ್ಷದಲ್ಲಿ 2048 ದಾಖಲಿಸಿದ ವಿರಾಟ್‌ ಕೊಹ್ಲಿ
  • ವಿರಾಟ್‌ ಕೊಹ್ಲಿ 7 ಬಾರಿ ಕ್ಯಾಲೆಂಡರ್‌ ವರ್ಷಗಳಲ್ಲಿ 2000 ರನ್ ಗಳಿಸಿದ ಏಕೈಕ ವ್ಯಕ್ತಿ
ವಿರಾಟ್‌ ಕೊಹ್ಲಿ ಹೆಸರಿಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆ ! ಕ್ಯಾಲೆಂಡರ್‌ ವರ್ಷದಲ್ಲಿ 7 ಬಾರಿ 2000 ರನ್‌ ಬಾರಿಸಿದ ಏಕೈಕ ವ್ಯಕ್ತಿ. title=

Virat kohli achievement: ಭಾರತ ಮತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಅಂತ್ಯವಾಗಿದ್ದು, ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುಧ್ದ ಭರ್ಜರಿ ಜಯ ದಾಖಲಿಸಿದೆ. ಪಂದ್ಯ ಅರಂಭವಾದ ಮೂರನೇ ದಿನದಂದೆ ದಕ್ಷಿಣ ಆಫ್ರಿಕಾ ತಂಡವು 32 ರನ್‌ ಗಳಿಂದ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಸಾವಿರ ದಾಖಲೆಗಳ ಸರಧಾರ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಸಿ ಕೊಂಡಿದ್ಧಾರೆ. ಈ ಮೂಲಕ ಬಹಳ ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಶ್ರೀಲಂಕಾದ ದಿಗ್ಗಜ ಆಟಗಾರನ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ದಕ್ಷಿಣ ಆಫ್ರಿಕಾ ಬೌಲಿಂಗ್‌ ವಿರುಧ್ದ ಭಾರತದ ಬ್ಯಾಟ್ಸ್‌ಮನ್ಸ್‌ ರನ್‌ಗಳಿಸಲು ತಡಕಾಡಿದರು. ಎಂಟು ಜನ ಆಟಗಾರರು 2 ಅಂಕಿಯ ರನ್‌ ದಾಟಲು ಒದ್ದಾಡಿದರೆ, ವಿರಾಟ್‌ ಕೊಹ್ಲಿ ಒಬ್ಬರೆ ಏಕಾಗಿ ಹೋರಾಟ  ಮುಂದಾಗಿದ್ದರು. ತಂಡದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್‌ ಒಬ್ಬರೆ 76 ರನ್‌ಗಳಿಸಿ ಭಾರತ ತಂಡದ ಪರ ನಿಜವಾದ ಹೋರಾಟಕ್ಕೆ ನಡೆಸಿದರು. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ  ಅರ್ಧಶತಕ ಗಳಿಸಿಕೊಳ್ಳುವುದರ ಮೂಲಕ 2023ರ ಕ್ಯಾಲೆಂಡರ್‌ ವರ್ಷದಲ್ಲಿ 2000 ರನ್‌ಗಳನ್ನು ಕಲೆಹಾಕಿ ಹೊಸದೊಂದು ದಾಖಲೆಯನ್ನು ಮಾಡಿದರು.

ಇದನ್ನು ಓದಿ-IND vs SA: ರೋಹಿತ್ ಶರ್ಮಾ ನಿರೀಕ್ಷೆ ಹುಸಿಯಾಗಿಸಿದ ಆಟಗಾರ ! ಟೀಂ ಇಂಡಿಯಾ ಸೋಲಿನಲ್ಲಿ ಇವರದ್ದೇ ಮುಖ್ಯ ಪಾತ್ರ !

ಅಂತರಾಷ್ಟ್ರೀಯ ಕ್ರಿಕೇಟ್‌ನಲ್ಲಿ ಈ ದಾಖಲೆಯನ್ನು ವಿರಾಟ್‌ ಕೊಹ್ಲಿ 7 ಬಾರಿ ಮಾಡಿದ ಸಾಧನೆಯನ್ನು ಮಾಡಿದ್ಧಾರೆ. ಈ ಹಿಂದೆ ಈ ದಾಖಲೆ ಕುಮಾರ್‌ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಾಕರ ಅವರ ಹೆಸರಿನಲ್ಲಿತ್ತು. ಅವರು ಅಂತರಾಷ್ಟ್ರೀಯ ಕ್ರಿಕೇಟ್‌ನಲ್ಲಿ 6 ಬಾರಿ ಕ್ಯಾಲೆಂಡರ ವರ್ಷದಲ್ಲಿ ಎರೆಡು ಸಾವಿರ ರನ್‌ಗಳಿಸಿದ ದಾಖಲೆ ಮಾಡಿದ್ದರು. ಇದೀಗ ಕೊಹ್ಲಿ 7 ಬಾರಿ ಆ ದಾಖಲೆಯನ್ನು ಮಾಡಿ ದಿಗ್ಗಜ ಆಟಗಾರ ಸಂಗಾಕರ ಅವರನ್ನು ಬದಿಗಟ್ಟಿದ್ದಾರೆ.

ವಿರಾಟ್‌ ಕೊಹ್ಲಿಯವರು ಈ ಹಿಂದೆ 2012ರಲ್ಲಿ 2186 ರನ್‌ಗಳನ್ನು, 2014 ರಲ್ಲಿ2286 ರನ್, 2016 ರಲ್ಲಿ2595 ರನ್, 2017 ರಲ್ಲಿ2818 ರನ್, 2018 ರಲ್ಲಿ 2735 ರನ್ ಮತ್ತು 2019 ರಲ್ಲಿ 2455 ರನ್‌ಗಳಿಸಿದ್ದರು ಹಾಗೂ ಪ್ರಸ್ತುತ ವರ್ಷ 2023ರಲ್ಲಿ 36 ಇನ್ನಿಂಗ್ಸ್‌ಗಳಿಂದ 2048 ರನ್‌ಗಳಿಸಿದ್ದು 7ನೇ ಬಾರಿ ತಮ್ಮ 2000 ರನ್‌ ಪೂರೈಸಿದ ಏಕೈಕ ವ್ಯಕ್ತಿಯಾಗಿದ್ದಾರೆ.

ಇದನ್ನು ಓದಿ-ವಿರಾಟ್‌ ಕೊಹ್ಲಿ ಹೊಸ ಟ್ರಿಕ್ಸ್‌ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ! ಇದೇನಿದು ಬೇಲ್ಸ್‌ ಟ್ರಿಕ್ ?

ಕ್ಯಾಲೆಂಡರ್‌ ವರ್ಷದಲ್ಲಿ ಅತೀ ಹೆಚ್ಚು ಬಾರಿ 2000 ಸಾವಿರ ದಾಖಲೆ ಮಾಡಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ಧಾರೆ. ವಿರಾಟ್‌ ಕೊಹ್ಲಿ 7 ಬಾರಿ, ಕುಮಾರ ಸಂಗಾಕರ 6 ಬಾರಿ, ಸಚಿನ್‌ ತೆಂಡುಲ್ಕರ್‌ 5 ಬಾರಿ, ಮಹೆಲಾ ಜಯವರ್ಧೆನ 5 ಬಾರಿ, ಜಾಕ್‌ ಕಾಲಿಸ್‌ 4 ಬಾರಿ, ರಿಕ್ಕಿ ಪಾಂಟಿಂಗ್‌ 4 ಬಾರಿ, ಸೌರವ್‌ ಗಂಗೂಲಿ 4 ಬಾರಿ, ಮ್ಯಾಥೀವ್‌ ಹೇಡನ್‌ 4 ಬಾರಿ, ರಾಹುಲ್‌ ದ್ರಾವಿಡ್‌ 3 ಬಾರಿ ಹಾಗೂ ಮೊಹಮ್ಮದ್‌ ಯೂಸುಫ್‌ 3 ಬಾರಿ ಈ ದಾಖಲೆ ಮಾಡಿದ್ಧಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News