ವಿರಾಟ್ ಕೊಹ್ಲಿ 110 ಶತಕ ಸಿಡಿಸುತ್ತಾರೆ: ಶೋಯೆಬ್ ಅಖ್ತರ್ ಭವಿಷ್ಯ

ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕೊಹ್ಲಿ ಅದ್ಭುತ ಫಾರ್ಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ಕೊಹ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಶತಕಗಳ ಶತಕದ ವಿಶ್ವ ದಾಖಲೆ ಮುರಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Mar 16, 2023, 08:47 PM IST
  • ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಮರಳಿ ಫಾರ್ಮ್‍ಗೆ ಬಂದ ವಿರಾಟ್ ಕೊಹ್ಲಿ
  • ವಿರಾಟ್ ಕೊಹ್ಲಿ ಮುಂದೊಂದು ದಿನ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲಿದ್ದಾರೆ
  • ವಿರಾಟ್ ಕೊಹ್ಲಿ 100 ಅಲ್ಲ, 110 ಶತಕಗಳನ್ನು ಸಿಡಿಸಲಿದ್ದಾರೆಂದು ಭವಿಷ್ಯ ನುಡಿದ ಶೋಯೆಬ್ ಅಖ್ತರ್
ವಿರಾಟ್ ಕೊಹ್ಲಿ 110 ಶತಕ ಸಿಡಿಸುತ್ತಾರೆ: ಶೋಯೆಬ್ ಅಖ್ತರ್ ಭವಿಷ್ಯ title=
'ಕೊಹ್ಲಿ110 ಶತಕಗಳನ್ನು ಸಿಡಿಸಲಿದ್ದಾರೆ'

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು. ಈ ಮೂಲಕ ಬಹುದಿನಗಳ ಬಳಿಕ ಕೊಹ್ಲಿ ಟೆಸ್ಟ್ ಮಾದರಿಯಲ್ಲಿಯೂ ಫಾರ್ಮ್‌ಗೆ ಮರಳಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಆಸೀಸ್ ಬೌಲರ್‍ಗಳ ಚೆಂಡಾಡಿದ ಕೊಹ್ಲಿ ಭರ್ಜರಿ 186 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಹೀಗಾಗಿ ಇದೀಗ ಕೊಹ್ಲಿ 100 ಶತಕ ಗಳಿಸುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಬರೋಬ್ಬರಿ 1205 ದಿನಗಳ ಕಾಯುವಿಕೆಯ ನಂತರ ಕೊಹ್ಲಿ ಟೆಸ್ಟ್ ಶತಕ  ದಾಖಲಿಸಿದರು. ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್‌ನ 4ನೇ ದಿನದಂದು ಕೊಹ್ಲಿ ಈ ಸಾಧನೆ ಮಾಡಿದರು. ಇದು ಕೊಹ್ಲಿಯವರ 28ನೇ ಟೆಸ್ಟ್ ಶತಕವಾಗಿದ್ದು, ಅವರ ಕೊನೆಯ ಶತಕ ಮತ್ತು ಈ ಶತಕದ ನಡುವೆ 41 ಇನ್ನಿಂಗ್ಸ್‌ಗಳ ಅಂತರವಿತ್ತು. ಕೊನೆಯದಾಗಿ ಕೊಹ್ಲಿ 3 ವರ್ಷಗಳ ಹಿಂದೆ ಬಾಂಗ್ಲಾದೇಶದ ವಿರುದ್ಧ 2019ರ ನವೆಂಬರ್‍ನಲ್ಲಿ ಶತಕ ಭಾರಿಸಿದ್ದರು.

ಇದನ್ನೂ ಓದಿ: RCB: ಮೈದಾನದಲ್ಲಿಯೇ ಕಣ್ಣೀರು ಹಾಕಿದ RCBಯ ಸ್ಟಾರ್ ಆಟಗಾರ್ತಿ! ಕಾರಣವೇನು ಗೊತ್ತಾ?

ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕೊಹ್ಲಿಯವರ ಅದ್ಭುತ ಫಾರ್ಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ಕೊಹ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಶತಕಗಳ ಶತಕದ ವಿಶ್ವ ದಾಖಲೆ ಮುರಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊಹ್ಲಿ 100 ಶತಕವಲ್ಲ, 110 ಶತಕ ಸಿಡಿಸಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಕಳೆದ ಕೆಲವು ಪಂದ್ಯಗಳ ಪದರ್ಶನ ಗಮನಿಸಿದರೆ ಕೊಹ್ಲಿಯವರಲ್ಲಿ ಮೊದಲಿನ ಆಕ್ರಮಣಶೀಲತೆ ಕಂಡು ಬರುತ್ತಿದೆ. ಹೀಗೆ ಹೋದರೆ ಮುಂದೊಂದು ದಿನ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು 110 ಶತಕಗಳನ್ನು ಗಳಿಸಲಿದ್ದಾರೆಂದು ಅಖ್ತರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತೆ ತಮ್ಮ ಫಾರ್ಮ್‌ಗೆ ಮರಳಿದ್ದಾರೆ. ಮಾನಸಿಕವಾಗಿ ನಿರಾಳರಾಗಿರುವ ಕೊಹ್ಲಿಗೆ ಇದೀಗ ಯಾವುದೂ ಅಸಾಧ್ಯವಲ್ಲ. ಹೀಗಾಗಿ ಅವರು ಸಾಕಷ್ಟು ಏಕಾಗ್ರತೆಯಿಂದ ಆಡಬಹುದು. ಕೊಹ್ಲಿ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಸಚಿನ್ ಹೆಸರಿನಲ್ಲಿರುವ 100 ಶತಕಗಳ ದಾಖಲೆ ಮುರಿದು, 110 ಶತಕಗಳನ್ನು ಸಿಡಿಸಲಿದ್ದಾರೆ’ ಅಂತಾ ಅಖ್ತರ್ ಹೇಳಿದ್ದಾರೆ.

ಇದನ್ನೂ ಓದಿ: ಸ್ಮೃತಿ ಬಿಟ್ಟು ಸಾನಿಯಾರನ್ನು ಹಿಡ್ಕೊಂಡು ಟ್ರೋಲ್: ‘RCB ಮೆಂಟರ್ ಎಲ್ಲಿದ್ದೀಯಮ್ಮಾ?’ ಅಂತಿದ್ದಾರೆ ಫ್ಯಾನ್ಸ್!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News