W,1,W,W,W,W,W...6 ಬಾಲ್’ಗೆ 5 ವಿಕೆಟ್ ಕಳೆದುಕೊಂಡ ಆಸೀಸ್: ಎಂದಾದರೂ ಕಂಡಿದ್ದೀರಾ ಇಂಥಾ ಪಂದ್ಯ!

Australia Vs Tasmania: ಆಸ್ಟ್ರೇಲಿಯಾದ ಹೋಬರ್ಟ್‌’ನಲ್ಲಿ ನಡೆಯುತ್ತಿರುವ ಮಹಿಳೆಯರ ದೇಶೀಯ ಪಟ್ಟಿ-ಎ ಟೂರ್ನಿಯಲ್ಲಿ ರೋಚಕ ಫೈನಲ್ ಪಂದ್ಯವೊಂದು ಸಾಕ್ಷಿಯಾಯಿತು. ದಕ್ಷಿಣ ಆಸ್ಟ್ರೇಲಿಯ ತಂಡ ಕೊನೆಯ ಓವರ್‌ನಲ್ಲಿ 4 ರನ್ ಗಳಿಸಬೇಕಿತ್ತು. ಆದರೆ ಅವರು ತಮ್ಮ 5 ವಿಕೆಟ್‌ಗಳನ್ನು ಒಂದೊಂದಾಗಿ ಕಳೆದುಕೊಂಡರು.

Written by - Bhavishya Shetty | Last Updated : Feb 26, 2023, 06:28 PM IST
    • ದಕ್ಷಿಣ ಆಸ್ಟ್ರೇಲಿಯ ತಂಡ ಕೊನೆಯ ಓವರ್‌ನಲ್ಲಿ 4 ರನ್ ಗಳಿಸಬೇಕಿತ್ತು.
    • ಆದರೆ ಅವರು ತಮ್ಮ 5 ವಿಕೆಟ್‌ಗಳನ್ನು ಒಂದೊಂದಾಗಿ ಕಳೆದುಕೊಂಡರು.
    • ಈ ಪಂದ್ಯವನ್ನು ಟ್ಯಾಸ್ಮೆನಿಯಾದ ಮಹಿಳಾ ತಂಡ ಡಕ್‌ವರ್ತ್ ಲೂಯಿಸ್ ನಿಯಮದನ್ವಯ ಒಂದು ರನ್‌ನಿಂದ ಗೆದ್ದಿದೆ.
W,1,W,W,W,W,W...6 ಬಾಲ್’ಗೆ 5 ವಿಕೆಟ್ ಕಳೆದುಕೊಂಡ ಆಸೀಸ್: ಎಂದಾದರೂ ಕಂಡಿದ್ದೀರಾ ಇಂಥಾ ಪಂದ್ಯ! title=
Australia Vs Tasmania

Australia Vs Tasmania: ಕ್ರಿಕೆಟ್ ಪಂದ್ಯಗಳು ಕೆಲವೊಮ್ಮೆ ಉಸಿರುಗಟ್ಟಿಸುತ್ತವೆ. ಇದು ಹೆಚ್ಚಾಗಿ ಟಿ20 ಮಾದರಿಯಲ್ಲಿ ಕಂಡುಬರುತ್ತದೆ. ಆದರೆ ಏಕದಿನದಲ್ಲಿ ಯಾರಾದರೂ ಕೊನೆಯ ಓವರ್‌ನಲ್ಲಿ 4 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂದರೆ ನಂಬಲು ಸಾಧ್ಯವೇ? ಇದು ಕ್ರಿಕೆಟ್ ಲೋಕ. ಇಲ್ಲಿ ಎಲ್ಲವೂ ಸಾಧ್ಯ! ಹೀಗೆಂದು ಹೇಳಲು ದೊಡ್ಡ ಸಾಕ್ಷಿಯೊಂದು ಲಭಿಸಿದೆ.  

ಇದನ್ನೂ ಓದಿ: IND vs AUS: ಟೆಸ್ಟ್’ನಲ್ಲಿ ನಿರಂತರ ಸೋಲು: ಈ ಆಟಗಾರನ ವಿರುದ್ಧವೇ ತಿರುಗಿಬಿದ್ದ ಆಸೀಸ್ ಅನುಭವಿ

ಆಸ್ಟ್ರೇಲಿಯಾದ ಹೋಬರ್ಟ್‌’ನಲ್ಲಿ ನಡೆಯುತ್ತಿರುವ ಮಹಿಳೆಯರ ದೇಶೀಯ ಪಟ್ಟಿ-ಎ ಟೂರ್ನಿಯಲ್ಲಿ ರೋಚಕ ಫೈನಲ್ ಪಂದ್ಯವೊಂದು ಸಾಕ್ಷಿಯಾಯಿತು. ದಕ್ಷಿಣ ಆಸ್ಟ್ರೇಲಿಯ ತಂಡ ಕೊನೆಯ ಓವರ್‌ನಲ್ಲಿ 4 ರನ್ ಗಳಿಸಬೇಕಿತ್ತು. ಆದರೆ ಅವರು ತಮ್ಮ 5 ವಿಕೆಟ್‌ಗಳನ್ನು ಒಂದೊಂದಾಗಿ ಕಳೆದುಕೊಂಡರು. ಈ 50 ಓವರ್‌ಗಳ ಪಂದ್ಯವನ್ನು ಟ್ಯಾಸ್ಮೆನಿಯಾದ ಮಹಿಳಾ ತಂಡ ಡಕ್‌ವರ್ತ್ ಲೂಯಿಸ್ ನಿಯಮದನ್ವಯ ಒಂದು ರನ್‌ನಿಂದ ಗೆದ್ದಿದೆ. ಇದು ಟ್ಯಾಸ್ಮೆನಿಯಾಗೆ ಸತತ ಎರಡನೇ ಪ್ರಶಸ್ತಿಯಾಗಿದೆ. ಎರಡು ಬಾರಿಯೂ ಈ ತಂಡವು ದಕ್ಷಿಣ ಆಸ್ಟ್ರೇಲಿಯಾವನ್ನು ಫೈನಲ್‌ನಲ್ಲಿ ಸೋಲಿಸಿದೆ.

ಮೊದಲ 4 ಎಸೆತಗಳಲ್ಲಿ 3 ವಿಕೆಟ್:

ದಕ್ಷಿಣ ಆಸ್ಟ್ರೇಲಿಯದ ಇನಿಂಗ್ಸ್‌ನ 47ನೇ ಓವರ್‌’ನಲ್ಲಿ ಬೌಲ್ ಮಾಡಲು ವೇಗಿ ಸಾರಾ ಕೇಟೆ ಬಂದರು. ಮೊದಲ ಎಸೆತದಲ್ಲಿ ಆನಿ ಓ'ನೀಲ್ ಕ್ಲೀನ್ ಬೌಲ್ಡ್ ಆದರು. ಎರಡನೇ ಎಸೆತದಲ್ಲಿ ಸಿಂಗಲ್‌ ಗಳಿಸಿದರು. ಮೂರನೇ ಎಸೆತದಲ್ಲಿ ಜಿಮ್ಮಿ ಬರ್ಸಿ ಸ್ಟಂಪ್ ಔಟ್ ಆದರು. ನಾಲ್ಕನೇ ಎಸೆತದಲ್ಲಿ ಅಮಂಡಾ ರನೌಟ್ ಆದರು. ಈ ಮೂಲಕ ಮೊದಲ 4 ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿ 3 ವಿಕೆಟ್ ಪತನಗೊಳಿಸಿದರು. ಈಗ 2 ಎಸೆತಗಳಲ್ಲಿ 3 ರನ್ ಗಳಿಸಬೇಕಿತ್ತು. ಈ ಓವರ್‌ನ 5ನೇ ಎಸೆತದಲ್ಲಿ ಸಾರಾ ಎಲ್ಬಿಡಬ್ಲ್ಯು ಮೂಲಕ ಎಲಾ ವಿಲ್ಸನ್ ಅವರನ್ನು ಔಟ್ ಮಾಡಿ ದಕ್ಷಿಣ ಆಸ್ಟ್ರೇಲಿಯಾಕ್ಕೆ 9ನೇ ಹೊಡೆತ ನೀಡಿದರು. ದಕ್ಷಿಣ ಆಸ್ಟ್ರೇಲಿಯಕ್ಕೆ ಪ್ರಶಸ್ತಿ ಗೆಲ್ಲಲು ಕೊನೆಯ ಎಸೆತದಲ್ಲಿ 3 ರನ್‌ಗಳ ಅಗತ್ಯವಿತ್ತು. ಆದರೆ ಅಲಿಸು ಮುಸ್ವಾಂಗಾ ಕೇವಲ ಒಂದು ರನ್ ಗಳಿಸಿ ರನೌಟ್ ಆದರು. ಇಡೀ ತಂಡವು 47 ಓವರ್‌ಗಳಲ್ಲಿ 241 ರನ್‌ಗಳಿಗೆ ಕುಸಿಯಿತು.

ಇದನ್ನೂ ಓದಿ: Team India: ಟೆಸ್ಟ್ ಜೊತೆ ಏಕದಿನ ಪಂದ್ಯಕ್ಕೂ ಈ ಆಟಗಾರನೇ ಟೀಂ ಇಂಡಿಯಾದ ಉಪನಾಯಕ!

ಪಂದ್ಯದಲ್ಲಿ ಟಾಸ್ಮೇನಿಯಾ ಮೊದಲು ಆಡುವಾಗ 264 ರನ್ ಗಳಿಸಿತು. ನಾಯಕ ಎಲ್ಲಿಸ್ ವಿಲ್ಲಾನಿ 110 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ನವೋಮಿ ಸ್ಟೆಲೆನ್‌ಬರ್ಗ್ ಕೂಡ 75 ರನ್‌ಗಳ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮಳೆಯಿಂದಾಗಿ ದಕ್ಷಿಣ ಆಸ್ಟ್ರೇಲಿಯ 47 ಓವರ್‌ಗಳಲ್ಲಿ 243 ರನ್‌ ಕಲೆ ಹಾಕಲಷ್ಟೇ ಶಕ್ತವಾಯಿತು. 30 ರನ್ ನೀಡಿ 4 ವಿಕೆಟ್ ಕಬಳಿಸಿದ ಸಾರಾ ಕೊಯ್ಟೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News