IND vs AUS: ಟೆಸ್ಟ್’ನಲ್ಲಿ ನಿರಂತರ ಸೋಲು: ಈ ಆಟಗಾರನ ವಿರುದ್ಧವೇ ತಿರುಗಿಬಿದ್ದ ಆಸೀಸ್ ಅನುಭವಿ

Greg Chappell on Australia Team: ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಗ್ರೆಗ್ ಚಾಪೆಲ್, ಮೈಕ್ ಟೈಸನ್ ಅವರನ್ನು ಉಲ್ಲೇಖಿಸಿ, ಭಾರತದ ವಿರುದ್ಧದ ಮೊದಲ 2 ಟೆಸ್ಟ್‌ಗಳಲ್ಲಿ ತಮ್ಮ ತಂಡದ ನೀರಸ ಪ್ರದರ್ಶನವನ್ನು ಬಲವಾಗಿ ಟೀಕಿಸಿದರು. ನಾಲ್ಕು ಟೆಸ್ಟ್ ಪಂದ್ಯಗಳ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಆಸ್ಟ್ರೇಲಿಯಾ ಈಗಾಗಲೇ ಬಹುತೇಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ.

Written by - Bhavishya Shetty | Last Updated : Feb 25, 2023, 07:34 PM IST
    • ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ
    • ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೇವಲ 3 ದಿನಗಳಲ್ಲಿ ಸೋಲನ್ನು ಎದುರಿಸಬೇಕಾಯಿತು
    • ಇದೀಗ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ತಮ್ಮ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
IND vs AUS: ಟೆಸ್ಟ್’ನಲ್ಲಿ ನಿರಂತರ ಸೋಲು: ಈ ಆಟಗಾರನ ವಿರುದ್ಧವೇ ತಿರುಗಿಬಿದ್ದ ಆಸೀಸ್ ಅನುಭವಿ title=
Greg Chappell

Greg Chappell on Australia Team : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಇಂದೋರ್‌ನಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನ ತೀರಾ ಕಳಪೆಯಾಗಿದ್ದು, ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೇವಲ 3 ದಿನಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದೀಗ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ತಮ್ಮ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: IND vs AUS: ಮೂರನೇ ಟೆಸ್ಟ್’ಗೆ ಸೂರ್ಯಕುಮಾರ್ ಯಾದವ್ ಎಂಟ್ರಿ ಪಕ್ಕಾ! ಸಾಕ್ಷಿ ಬೇಕೇ? ಈ ಫೋಟೋ ನೋಡಿ

ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಗ್ರೆಗ್ ಚಾಪೆಲ್, ಮೈಕ್ ಟೈಸನ್ ಅವರನ್ನು ಉಲ್ಲೇಖಿಸಿ, ಭಾರತದ ವಿರುದ್ಧದ ಮೊದಲ 2 ಟೆಸ್ಟ್‌ಗಳಲ್ಲಿ ತಮ್ಮ ತಂಡದ ನೀರಸ ಪ್ರದರ್ಶನವನ್ನು ಬಲವಾಗಿ ಟೀಕಿಸಿದರು. ನಾಲ್ಕು ಟೆಸ್ಟ್ ಪಂದ್ಯಗಳ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಆಸ್ಟ್ರೇಲಿಯಾ ಈಗಾಗಲೇ ಬಹುತೇಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ. ಎರಡೂ ಟೆಸ್ಟ್ ಪಂದ್ಯಗಳು ಮೂರು ದಿನಗಳಲ್ಲಿ ಕೊನೆಗೊಂಡಿದೆ. ಈ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡವನ್ನು ಮಾಜಿ ಕ್ರಿಕೆಟಿಗ ತೀವ್ರವಾಗಿ ಟೀಕಿಸಿದ್ದಾರೆ.

“ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಿದ ನಂತರ ನನಗನಿಸಿತು, ಮೊದಲ ಎಸೆತವನ್ನು ಬೌಲ್ ಮಾಡುವ ಮುಂಚೆಯೇ ಆಸ್ಟ್ರೇಲಿಯನ್ ತಂಡವು ತನ್ನ ಮುಖಕ್ಕೆ ಪಂಚ್ ಮಾಡಿಕೊಂಡಿದೆ” ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದ ಸಿದ್ಧತೆಗಳು ಮತ್ತು ಯೋಜನೆಗಳನ್ನು ಚಾಪೆಲ್ ಪ್ರಶ್ನಿಸಿದ್ದಾರೆ. "ತಂತ್ರವನ್ನು ಯೋಜಿಸುವುದು ಒಂದು ವಿಷಯ. ಆದರೆ ತಪ್ಪುಗಳ ಆಧಾರದ ಮೇಲೆ ಅದನ್ನು ನಿರ್ಮಿಸುವುದು ನಿರರ್ಥಕತೆಯ ಕಸರತ್ತು" ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Team India: ಟೆಸ್ಟ್ ಜೊತೆ ಏಕದಿನ ಪಂದ್ಯಕ್ಕೂ ಈ ಆಟಗಾರನೇ ಟೀಂ ಇಂಡಿಯಾದ ಉಪನಾಯಕ!

“ಈ ಸರಣಿಯನ್ನು ಗೆಲ್ಲಲು ಆಸ್ಟ್ರೇಲಿಯಾ ತನ್ನ ಬಲಿಷ್ಠ ತಂಡಗಳೊಂದಿಗೆ ಆಡುವ ಅಗತ್ಯವಿದೆ. ಸ್ಪಿನ್ನರ್ ನಮ್ಮ ಶಕ್ತಿಯಲ್ಲ. ಇದಕ್ಕಾಗಿ ತಂಡದಲ್ಲಿ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದು ಭಾರತದಲ್ಲಿ ಯಶಸ್ಸು ಗಳಿಸುವ ಮಾರ್ಗವಲ್ಲ. ನಾವು ನಮ್ಮ ಅತ್ಯುತ್ತಮ ಬೌಲರ್‌ಗಳನ್ನು ಆರಿಸಿ ಅವರನ್ನು ನಂಬಬೇಕು” ಎಂದು ಚಾಪೆಲ್ ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News