“5 ತಿಂಗಳಿಂದ ಸಂಬಳ ಇಲ್ಲ, ಮೆಸೇಜ್ ಕಳಿಸಿದ್ರೆ ರಿಪ್ಲೈ ಇಲ್ಲ, ತಂಡದಿಂದ ಮತ್ತಿನ್ನೇನು ನಿರೀಕ್ಷಿಸಬಹುದು”: ಪಾಕ್ ಆಟಗಾರನ ಹೇಳಿಕೆ ವೈರಲ್

Rashid Latif, Cricket News in Kannada: ಶುಕ್ರವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಪಾಕಿಸ್ತಾನ ವಿಶ್ವಕಪ್‌’ನಿಂದ ಹೊರಗುಳಿಯುವ ಹಂತದಲ್ಲಿದೆ. ದಕ್ಷಿಣ ಆಫ್ರಿಕಾ  ವಿರುದ್ಧ ಕೇವಲ ಒಂದು ವಿಕೆಟ್‌ ಅಂತರದಲ್ಲಿ ಪಾಕ್ ಸೋಲು ಕಂಡಿತ್ತು. ಇದು ತಂಡದ ಸತತ ನಾಲ್ಕನೇ ಸೋಲಾಗಿದೆ.

Written by - Bhavishya Shetty | Last Updated : Oct 29, 2023, 02:18 PM IST
    • ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಪಾಕಿಸ್ತಾನ ವಿಶ್ವಕಪ್‌’ನಿಂದ ಹೊರಗುಳಿಯುವ ಹಂತದಲ್ಲಿದೆ
    • “ಬಾಬರ್ ಅವರ ಫೋನ್ ಕರೆಗಳು ಮತ್ತು ಮೆಸೇಜ್’ಗಳಿಗೆ ರಿಪ್ಲೈ ಮಾಡುತ್ತಿಲ್ಲ”
    • ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಹೇಳಿಕೆ
“5 ತಿಂಗಳಿಂದ ಸಂಬಳ ಇಲ್ಲ, ಮೆಸೇಜ್ ಕಳಿಸಿದ್ರೆ ರಿಪ್ಲೈ ಇಲ್ಲ, ತಂಡದಿಂದ ಮತ್ತಿನ್ನೇನು ನಿರೀಕ್ಷಿಸಬಹುದು”: ಪಾಕ್ ಆಟಗಾರನ ಹೇಳಿಕೆ ವೈರಲ್ title=
Pakistan

World Cup 2023: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಝಕಾ ಅಶ್ರಫ್, ಬಾಬರ್ ಅವರ ಫೋನ್ ಕರೆಗಳು ಮತ್ತು ಮೆಸೇಜ್’ಗಳಿಗೆ ರಿಪ್ಲೈ ಮಾಡುತ್ತಿಲ್ಲ. ಬಹುಶಃ ಅವರ ನಾಯಕತ್ವದ ಕೊನೆಗಳು ಬಂದಿವೆ ಅನಿಸುತ್ತೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಶನಿವಾರ ಹೇಳಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಸೇಡು ತೀರಿಸಲು ಅಜೇಯ ಭಾರತ ಸಿದ್ಧ! ಲಕ್ನೋ ಪಿಚ್ ಯಾರಿಗೆ ಪ್ಲಸ್? ಯಾರಿಗೆ ಮೈನಸ್?

ಶುಕ್ರವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಪಾಕಿಸ್ತಾನ ವಿಶ್ವಕಪ್‌’ನಿಂದ ಹೊರಗುಳಿಯುವ ಹಂತದಲ್ಲಿದೆ. ದಕ್ಷಿಣ ಆಫ್ರಿಕಾ  ವಿರುದ್ಧ ಕೇವಲ ಒಂದು ವಿಕೆಟ್‌ ಅಂತರದಲ್ಲಿ ಪಾಕ್ ಸೋಲು ಕಂಡಿತ್ತು. ಇದು ತಂಡದ ಸತತ ನಾಲ್ಕನೇ ಸೋಲಾಗಿದೆ.

ಇನ್ನು ಪಿಟಿವಿ ಸ್ಪೋರ್ಟ್ಸ್ ಚಾನೆಲ್‌’ನಲ್ಲಿ ಮಾತನಾಡಿದ ರಶೀದ್ ಲತೀಫ್, “ಬಾಬರ್ ಭಾರತದಿಂದ ಕರೆ ಮಾಡಿದ್ದರೂ, ಸಂದೇಶ ಕಳುಹಿಸಿದ್ದರೂ, ಅವರಿಂದ (ಝಾಕಾ ಅಶ್ರಫ್) ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನನಗೆ ತಿಳಿದಿದೆ' ಎಂದು ಲತೀಫ್ ಆರೋಪಿಸಿದ್ದಾರೆ. ಇದರ ಜೊತೆಗೆ ಕನಿಷ್ಠ ನಾಲ್ವರು ಆಟಗಾರರ ಐದು ತಿಂಗಳ ವೇತನ ಕೂಡ ಬಾಕಿ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂದು ಭಾರತದ ಕೋಚ್ ಆಗಿದ್ದ ಈ ದಿಗ್ಗಜನಿಗೆ ಇಂದು ಒಪ್ಪೊತ್ತಿನ ಊಟಕ್ಕೂ ಸಂಕಷ್ಟ!

ರಶೀದ್ ಲತೀಫ್ ಮಾತನಾಡಿ, “ಆಟಗಾರರಿಗೆ ಸಂಬಳ ಸಿಕ್ಕಿಲ್ಲ. ಅಧ್ಯಕ್ಷರು ನಾಯಕನ ಕರೆಗೆ ಉತ್ತರಿಸುತ್ತಿಲ್ಲ. ಹೀಗಿರುವಾಗ ತಂಡದಿಂದ ನಾವು ಏನನ್ನು ನಿರೀಕ್ಷಿಸಬಹುದು. ವಿಶ್ವಕಪ್‌’ಗೆ ಹೊರಡುವ ಮೊದಲು ಅವರು ಸಹಿ ಮಾಡಿದ ಕೇಂದ್ರ ಒಪ್ಪಂದಗಳನ್ನು ಈಗ ಪರಿಶೀಲಿಸಲಾಗುತ್ತಿದೆ ಎಂದು ಮಂಡಳಿಯ ಕೆಲವು ಹಿರಿಯ ಅಧಿಕಾರಿಗಳು ಆಟಗಾರರಿಗೆ ತಿಳಿಸಿದ್ದಾರೆ” ಎಂದು ಲತೀಫ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News