20 ವರ್ಷಗಳ ಸೇಡು ತೀರಿಸಲು ಅಜೇಯ ಭಾರತ ಸಿದ್ಧ! ಲಕ್ನೋ ಪಿಚ್ ಯಾರಿಗೆ ಪ್ಲಸ್? ಯಾರಿಗೆ ಮೈನಸ್? ಇಲ್ಲಿ ರಿಪೋರ್ಟ್

Cricket news in kannada, Ekna Stadium Pitch Report: ವಿಶ್ವಕಪ್‌’ನಲ್ಲಿ ಎರಡೂ ತಂಡಗಳ ಹೆಡ್ ಟು ಹೆಡ್ ದಾಖಲೆಯ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್‌’ನದ್ದೇ ಮೇಲುಗೈ ಇದೆ. ಉಭಯ ತಂಡಗಳ ನಡುವೆ 8 ಪಂದ್ಯಗಳು ನಡೆದಿದ್ದು, ಇದರಲ್ಲಿ ಇಂಗ್ಲೆಂಡ್ 4 ಪಂದ್ಯಗಳನ್ನು ಗೆದ್ದಿದ್ದರೆ ಭಾರತ 3 ಪಂದ್ಯಗಳನ್ನು ಗೆದ್ದು, 1 ಪಂದ್ಯ ಟೈ ಆಗಿದೆ.

Written by - Bhavishya Shetty | Last Updated : Oct 29, 2023, 01:20 PM IST
    • ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಪಂದ್ಯದ್ಲಲ್ಲಿ ಭಾರತ ಅಜೇಯ ಎನಿಸಿಕೊಂಡಿದೆ.
    • ಆಡಿರುವ ಐದೂ ಪಂದ್ಯಗಳಲ್ಲಿ ಐದನ್ನೂ ಗೆದ್ದಿರುವ ಏಕೈಕ ತಂಡ ಭಾರತ.
    • ಆದರೆ ಇಂಗ್ಲೆಂಡ್ ಇಲ್ಲಿಯವರೆಗೆ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ
20 ವರ್ಷಗಳ ಸೇಡು ತೀರಿಸಲು ಅಜೇಯ ಭಾರತ ಸಿದ್ಧ! ಲಕ್ನೋ ಪಿಚ್ ಯಾರಿಗೆ ಪ್ಲಸ್? ಯಾರಿಗೆ ಮೈನಸ್? ಇಲ್ಲಿ ರಿಪೋರ್ಟ್  title=
Ekna Stadium Pitch Report

IND vs ENG LIVE: ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಇಂದು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಾಯಿಂಟ್ ಟೇಬಲ್’ನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಮತ್ತು, ಕೊನೆಯ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಯಲಿದೆ.

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಪಂದ್ಯದ್ಲಲ್ಲಿ ಭಾರತ ಅಜೇಯ ಎನಿಸಿಕೊಂಡಿದೆ. ಆಡಿರುವ ಐದೂ ಪಂದ್ಯಗಳಲ್ಲಿ ಐದನ್ನೂ ಗೆದ್ದಿರುವ ಏಕೈಕ ತಂಡ ಭಾರತ. ಆದರೆ ಇಂಗ್ಲೆಂಡ್ ಇಲ್ಲಿಯವರೆಗೆ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಹೀಗಿರುವಾಗ ಟೂರ್ನಿಯಲ್ಲಿ ಕೇವಲ ನಾಮಕಾವಸ್ತೆಗೆ ಆಡುವ ಪರಿಸ್ಥಿತಿ ಆಂಗ್ಲರದ್ದು.

ಇದನ್ನೂ ಓದಿ: ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಗಾಯಗೊಂಡ ರೋಹಿತ್ ಶರ್ಮಾ! ಹಿಟ್ ಮ್ಯಾನ್ ಕೈ ತಪ್ಪಿದರೆ ನಾಯಕ ಸ್ಥಾನ ಈತನಿಗೆ!

ಹೆಡ್ ಟು ಹೆಡ್ ದಾಖಲೆ:

ವಿಶ್ವಕಪ್‌’ನಲ್ಲಿ ಎರಡೂ ತಂಡಗಳ ಹೆಡ್ ಟು ಹೆಡ್ ದಾಖಲೆಯ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್‌’ನದ್ದೇ ಮೇಲುಗೈ ಇದೆ. ಉಭಯ ತಂಡಗಳ ನಡುವೆ 8 ಪಂದ್ಯಗಳು ನಡೆದಿದ್ದು, ಇದರಲ್ಲಿ ಇಂಗ್ಲೆಂಡ್ 4 ಪಂದ್ಯಗಳನ್ನು ಗೆದ್ದಿದ್ದರೆ ಭಾರತ 3 ಪಂದ್ಯಗಳನ್ನು ಗೆದ್ದು, 1 ಪಂದ್ಯ ಟೈ ಆಗಿದೆ. ಕಳೆದ ಬಾರಿ 2003ರ ವಿಶ್ವಕಪ್‌’ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಂದಿನಿಂದ ಇಂಗ್ಲೆಂಡ್ ಪ್ರತಿ ಬಾರಿಯೂ ಭಾರತವನ್ನು ಸೋಲಿಸುತ್ತಲೇ ಬಂದಿದೆ. ಇದೀಗ ಟೀಂ ಇಂಡಿಯಾ 20 ವರ್ಷಗಳ ಸೇಡನ್ನು ತೀರಿಸಿಕೊಂಡು, ಸೆಮಿಫೈನಲ್ ತಲುಪುವ ನಿರೀಕ್ಷೆಯಲ್ಲಿದೆ.

ಇಂಗ್ಲೆಂಡ್ ಸೇರಿದಂತೆ ಉಳಿದಿರುವ ನಾಲ್ಕು ಪಂದ್ಯಗಳ ಪೈಕಿ ಅಗ್ರ-4 ಸ್ಥಾನಕ್ಕೇರಲು ಭಾರತ ಕೇವಲ 2 ಪಂದ್ಯಗಳನ್ನು ಗೆಲ್ಲಬೇಕಿದೆ. ಇಂಗ್ಲೆಂಡ್ ಇದುವರೆಗೆ ಆಡಿದ ಪಂದ್ಯಗಳಲ್ಲಿ ತನ್ನ ಸಂಪೂರ್ಣ ತಂಡವನ್ನು ಬಳಸಿಕೊಂಡಿದೆ. ಆದರೆ ಸಿಕ್ಕಿದ್ದು ಒಂದೇ ಒಂದು ಗೆಲುವು. ಅಂದಹಾಗೆ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಕಾಣುವ ಸಾಧ್ಯತೆ ಇದೆ.

ಇಂಗ್ಲೆಂಡ್ ವಿಶ್ವಕಪ್ ತಂಡ:

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಜೋ ರೂಟ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಮಾರ್ಕ್ ವುಡ್, ಬ್ರೈಡನ್ ಕಾರ್ಸೆ, ಗಸ್ ಅಟ್ಕಿನ್ಸನ್, ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್

ಭಾರತ ವಿಶ್ವಕಪ್ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ ಒಟ್ಟು 106 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದೆ. ಭಾರತ 57 ಪಂದ್ಯಗಳನ್ನು ಮತ್ತು ಇಂಗ್ಲೆಂಡ್ 44 ಪಂದ್ಯಗಳನ್ನು ಗೆದ್ದಿದೆ ಮತ್ತು 3ರ ರಿಸಲ್ಟ್ ಬಂದಿಲ್ಲ.  ಇದಲ್ಲದೇ 2 ಪಂದ್ಯಗಳು ಟೈ ಆಗಿವೆ.

ರೋಹಿತ್ 100ನೇ ಪಂದ್ಯ:

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ವಿಶಿಷ್ಟ ಶತಕ ಪೂರೈಸಲಿದ್ದಾರೆ. ರೋಹಿತ್ ಭಾರತದ ನಾಯಕನಾಗಿ 100ನೇ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ.

ಅಜೇಯ ಭಾರತ:

2023ರ ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾದ ಅಜೇಯ ಪಯಣ ಮುಂದುವರಿದಿದೆ. ಹೀಗಿರುವಾಗ ಭಾರತ ಇಂಗ್ಲೆಂಡ್ ವಿರುದ್ಧ ಉತ್ಸಾಹದಿಂದ ಕಣಕ್ಕಿಳಿಯಲಿದ್ದು, ಭಾರತವನ್ನು ಸೋಲಿಸುವುದು ಇಂಗ್ಲೆಂಡ್‌’ಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಅಂದು ಭಾರತದ ಕೋಚ್ ಆಗಿದ್ದ ಈ ದಿಗ್ಗಜನಿಗೆ ಇಂದು ಒಪ್ಪೊತ್ತಿನ ಊಟಕ್ಕೂ ಸಂಕಷ್ಟ!

ಪಿಚ್ ಹೇಗಿದೆ?

ಐಪಿಎಲ್ 2023ರ ಸಮಯದಲ್ಲಿ, ಎಕಾನಾ ಸ್ಟೇಡಿಯಂನಲ್ಲಿ ಬೌಲರ್‌’ಗಳು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ್ದರು. ಬ್ಯಾಟ್ಸ್‌ಮನ್‌’ಗಳು ಒಂದು ರನ್‌ ಪಡೆಯಲು ಕೂಡ ಪರದಾಡಬೇಕಾಯಿತು. ಆದರೆ ಈಗ ಪಿಚ್ ಸುಧಾರಿಸಿದೆ. ಆದರೆ ಈ ಮೈದಾನ ಬೆಂಗಳೂರು ಅಥವಾ ಮುಂಬೈನಂತಿಲ್ಲ. ಬೌಲರ್‌’ಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಒಟ್ಟಾರೆ ಹೇಳುವುದಾದರೆ ಈ ಪಿಚ್‌ ಸ್ಪಿನ್ನರ್’ಗಳಿಗೆ ಸಹಾಯವ ಮಾಡುವುದು ಖಚಿತ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News