ಅಂದು ಭಾರತದ ಕೋಚ್ ಆಗಿದ್ದ ಈ ದಿಗ್ಗಜನಿಗೆ ಇಂದು ಒಪ್ಪೊತ್ತಿನ ಊಟಕ್ಕೂ ಸಂಕಷ್ಟ! ಬಾಡಿಗೆ ಮನೆಯಲ್ಲಿ ವಾಸ-ಸ್ನೇಹಿತರಿಂದ ನೆರವು

Greg Chappell Economic Crisis: ಟೀಂ ಇಂಡಿಯಾದ ಕೋಚ್ ಆಗಿದ್ದ ಅವಧಿಯಲ್ಲಿ, ತಂಡದ ನಾಯಕ ಸೌರವ್ ಗಂಗೂಲಿ ಜೊತೆ ಅನೇಕ ಬಾರಿ ಜಗಳವಾಡಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಂದು ಈ ಆಸ್ಟ್ರೇಲಿಯಾದ ದಿಗ್ಗಜ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಾಪೆಲ್ ಅವರೇ ಮಾಹಿತಿ ನೀಡಿದ್ದಾರೆ.

Written by - Bhavishya Shetty | Last Updated : Oct 29, 2023, 12:50 PM IST
    • ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಗ್ರೆಗ್ ಚಾಪೆಲ್
    • 2005 ಮತ್ತು 2007ರ ನಡುವೆ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು
    • ಈ ಬಗ್ಗೆ ಸ್ವತಃ ಚಾಪೆಲ್ ಅವರೇ ಮಾಹಿತಿ ನೀಡಿದ್ದಾರೆ.
ಅಂದು ಭಾರತದ ಕೋಚ್ ಆಗಿದ್ದ ಈ ದಿಗ್ಗಜನಿಗೆ ಇಂದು ಒಪ್ಪೊತ್ತಿನ ಊಟಕ್ಕೂ ಸಂಕಷ್ಟ! ಬಾಡಿಗೆ ಮನೆಯಲ್ಲಿ ವಾಸ-ಸ್ನೇಹಿತರಿಂದ ನೆರವು title=
Greg Chappell Economic Crisis

Greg Chappell Economic Crisis: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗ್ರೆಗ್ ಚಾಪೆಲ್ ಅವರು 2005 ಮತ್ತು 2007ರ ನಡುವೆ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು.

ಟೀಂ ಇಂಡಿಯಾದ ಕೋಚ್ ಆಗಿದ್ದ ಅವಧಿಯಲ್ಲಿ, ತಂಡದ ನಾಯಕ ಸೌರವ್ ಗಂಗೂಲಿ ಜೊತೆ ಅನೇಕ ಬಾರಿ ಜಗಳವಾಡಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಂದು ಈ ಆಸ್ಟ್ರೇಲಿಯಾದ ದಿಗ್ಗಜ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಾಪೆಲ್ ಅವರೇ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಗಾಯಗೊಂಡ ರೋಹಿತ್ ಶರ್ಮಾ! ಹಿಟ್ ಮ್ಯಾನ್ ಕೈ ತಪ್ಪಿದರೆ ನಾಯಕ ಸ್ಥಾನ ಈತನಿಗೆ!

ವಿವಾದಗಳಿಂದ ತುಂಬಿತ್ತು ಅಧಿಕಾರವಾಧಿ!

2005ರಲ್ಲಿ ಟೀಮ್ ಇಂಡಿಯಾದ ನಾಯಕತ್ವ ಸೌರವ್ ಗಂಗೂಲಿ ಕೈಯಲ್ಲಿತ್ತು. ಮತ್ತು ತಂಡದ ಮುಖ್ಯ ಕೋಚ್ ಗ್ರೆಗ್ ಚಾಪೆಲ್ ಆಗಿದ್ದರು. ಆದರೆ ಇವರಿಬ್ಬರಿಗೆ ಹೊಂದಾಣಿಕೆ ಇರಲಿಲ್ಲ ಎಂಬುದು ಸ್ವಷ್ಟವಾಗಿ ಗೋಚರಿಸುತ್ತಿತ್ತು.

ಸಂದರ್ಶನವೊಂದರಲ್ಲಿ ಗಂಗೂಲಿ ನಾಯಕತ್ವವನ್ನು ತೊರೆಯುವ ಬಗ್ಗೆ ಚಾಪೆಲ್ ಮಾತನಾಡಿದ್ದರು. “ನಾಯಕತ್ವವು ಗಂಗೂಲಿಯ ಬ್ಯಾಟಿಂಗ್‌’ಗೆ ಅಡ್ಡಿ ಪಡಿಸುತ್ತಿದೆ” ಗ್ರೆಗ್ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಗೆ ಗಂಗೂಲಿ ಅಸಮಾಧಾನ ಹೊರಹಾಕಿದ್ದರು. ಆ ಸಮಯದಲ್ಲಿ ಸೌರವ್ ಗಂಗೂಲಿ ಕೆಟ್ಟ ಫಾರ್ಮ್‌’ನಲ್ಲಿ ಹೋರಾಡುತ್ತಿದ್ದದ್ದು ಮಾತ್ರ ನಿಜ.

ಇದಾದ ಬಳಿಕ ಗಂಗೂಲಿ ಅವರನ್ನು ಏಕದಿನ ತಂಡದಿಂದ ಕೈಬಿಡಬೇಕಾಯಿತು. ಹೀಗಾಗಿ ಕೆಲವೇ ದಿನಗಳಲ್ಲಿ ಅವರು ತಮ್ಮ ನಾಯಕತ್ವವನ್ನೂ ಕಳೆದುಕೊಂಡರು. ನಂತರ ಟೆಸ್ಟ್ ತಂಡದಿಂದ ಹೊರಗಿಡಲಾಯಿತು. ಆದರೆ, ದಿಲೀಪ್ ವೆಂಗ್‌ಸರ್ಕರ್ ಮುಖ್ಯ ಆಯ್ಕೆಗಾರ ಸ್ಥಾನದಿಂದ ಕೆಳಗಿಳಿದ ಬಳಿಕ, ನಾಯಕತ್ವವನ್ನು ಗಂಗೂಲಿಗೆ ಹಸ್ತಾಂತರಿಸಲಾಯಿತು. ವಿಶೇಷವೆಂದರೆ ಚಾಪೆಲ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಮಾಡುವಲ್ಲಿ ಗಂಗೂಲಿ ಮಹತ್ವದ ಪಾತ್ರ ವಹಿಸಿದ್ದರು.

ಅಂದಹಾಗೆ ಚಾಪೆಲ್ ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಚಾಪೆಲ್, “ನಾನು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಐಷಾರಾಮಿ ಜೀವನ ನಡೆಸುತ್ತಿಲ್ಲ. ನಾವು ಕ್ರಿಕೆಟ್ ಆಡಿದ್ದರಿಂದ ಐಷಾರಾಮಿ ಜೀವನ ನಡೆಸುತ್ತೇವೆ ಎಂದು ಜನರು ಭಾವಿಸುತ್ತಾರೆ. ಆದರೆ ನಾನು ಖಂಡಿತವಾಗಿಯೂ ಬಡತನ ಬಂತೆಂದು ಅಳುವುದಿಲ್ಲ. ಇಂದಿನ ಕ್ರಿಕೆಟಿಗರು ಪಡೆಯುತ್ತಿರುವ ಪ್ರಯೋಜನಗಳನ್ನು ನಾನು ಪಡೆಯುತ್ತಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಗಾಯಗೊಂಡ ರೋಹಿತ್ ಶರ್ಮಾ! ಹಿಟ್ ಮ್ಯಾನ್ ಕೈ ತಪ್ಪಿದರೆ ನಾಯಕ ಈತ

ಸದ್ಯ ಗ್ರೆಗ್ ಚಾಪೆಲ್ ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಇವರ ಸಂಕಷ್ಟದ ಪರಿಸ್ಥಿತಿ ಕಂಡು ಅವರ ಸ್ನೇಹಿತರು ಸಹಾಯನಿಧಿ ಸಂಗ್ರಹಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News