ವಿರುಷ್ಕಾ Ketto campaign ಗೆ ಸಿಗುತ್ತಿದೆ ಭಾರೀ ಸ್ಪಂದನೆ ; 24 ಗಂಟೆಯಲ್ಲಿ 3.6 ಕೋಟಿ ಸಂಗ್ರಹ

ವಿರಾಟ್ ಮತ್ತು ಅನುಷ್ಕಾ  ಕೋವಿಡ್ ವಿರುದ್ಧದ ಹೋರಾಟದಲ್ಲಿ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದಕ್ಕಾಗಿ ಪರಿಹಾರ ನಿಧಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. 

Written by - Ranjitha R K | Last Updated : May 9, 2021, 12:34 PM IST
  • ದೇಶದಲ್ಲಿ ಸತತ 4ನೇ ದಿನವೂ 4 ಲಕ್ಷ ಪ್ರಕರಣ ವರದಿ
  • ಕೋವಿಡ್ ಹೋರಾಟದಲ್ಲಿ ಜನರೊಂದಿಗೆ ಕೈ ಜೋಡಿಸಿದ ವಿರುಷ್ಕಾ
  • ಕೆಟೋ ಅಭಿಯಾನದ ಮೂಲಕ ಹಣ ಸಂಗ್ರಹ
ವಿರುಷ್ಕಾ Ketto campaign ಗೆ ಸಿಗುತ್ತಿದೆ ಭಾರೀ ಸ್ಪಂದನೆ ; 24 ಗಂಟೆಯಲ್ಲಿ 3.6 ಕೋಟಿ ಸಂಗ್ರಹ title=
ಕೆಟೋ ಅಭಿಯಾನದ ಮೂಲಕ ಹಣ ಸಂಗ್ರಹ (file photo)

ನವದೆಹಲಿ : ಕೊರೊನಾವೈರಸ್ ಎರಡನೇ ಅಲೆಯು (Coronavirus Second Wave) ದೇಶದಲ್ಲಿ ಹಾಹಾಕಾರ ಎಬ್ಬಿಸಿದೆ. ಸತತ ನಾಲ್ಕನೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಸತತ ಎರಡನೇ ದಿನ 4000 ಕ್ಕೂ ಹೆಚ್ಚು ಕರೋನಾ ರೋಗಿಗಳು ಮೃತಪಟ್ಟಿದ್ದಾರೆ. ಈ ಮಧ್ಯೆ, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ದೇಶ ಸೇವೆಗೆ ಮುಂದಾಗಿದ್ದಾರೆ. 

ವಿರಾಟ್ (Virat Kohli) ಮತ್ತು ಅನುಷ್ಕಾ (Anushka Sharma) , ಕೋವಿಡ್ (COVID-19) ವಿರುದ್ಧದ ಹೋರಾಟದಲ್ಲಿ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದಕ್ಕಾಗಿ ಪರಿಹಾರ ನಿಧಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇವರು ಆರಂಭಿಸಿರುವ ಕೆಟೋ ಅಭಿಯಾನದ (Ketto campaign) ಮೂಲಕ 2 ಕೋಟಿ ರೂಪಾಯಿಗಳನ್ನು ದಾನ ನೀಡಿದ್ದಾರೆ. ಅಲ್ಲದೆ, 7 ಕೊಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : ಉಳಿದಿರುವ ಐಪಿಎಲ್ ಪಂದ್ಯಗಳನ್ನು ನಡೆಸಲು ಸಿದ್ದವೆಂದ ಶ್ರೀಲಂಕಾ

ವಿರುಷ್ಕಾ ಅಭಿಯಾನಕ್ಕೆ ಯುಜ್ವೇಂದ್ರ ಚಹಲ್ ಬೆಂಬಲ : 
ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ,  ಯುಜ್ವೇಂದ್ರ ಚಾಹಲ್ (Yuzvendra Chahal) ವಿರಾಟ್ ಅನುಷ್ಕಾ ಕೆಟೋ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಚಹಲ್ ಈ ಪರಿಹಾರ  ನಿಧಿಗೆ 95,000 ರೂಗಳ ದೇಣಿಗೆ ನೀಡಿದ್ದಾರೆ. ಈ ಮೂಲಕ, ಇಲ್ಲಿವರೆಗೆ ಅತಿ ಹೆಚ್ಚು ದೇಣಿಗೆ ನೀಡಿರುವವರಲ್ಲಿ ಚಹಲ್ ಕೂಡಾ ಒಬ್ಬರಾಗಿದ್ದಾರೆ.  ಅವರ ದೇಣಿಗೆಯೊಂದಿಗೆ, ಯುಜ್ವೇಂದ್ರ ಚಾಹಲ್ ಈ ಪರಿಹಾರ ನಿಧಿಯಲ್ಲಿ ಅತ್ಯುತ್ತಮ 10 ದಾನಿಗಳಲ್ಲಿ ಒಬ್ಬರಾಗಿದ್ದಾರೆ.

ವಿರಾಟ್-ಅನುಷ್ಕಾ ಅಭಿಯಾನಕ್ಕೆ ಸಿಗುತ್ತಿದೆ ಭಾರೀ ಸ್ಪಂದನೆ : 
ಕಳೆದ 24 ಗಂಟೆಗಳಲ್ಲಿ ಈ ಅಭಿಯಾನದ ಮೂಲಕ 3.6 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ವಿರಾಟ್ (Virat Kohli) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಜನರ ಸ್ಪಂದನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ವಿರುಷ್ಕಾ (Virushka) ಆರಂಭಿಸಿರುವ ಈ ಕೆಟೋ ಅಭಿಯಾನ 7 ದಿನಗಳವರೆಗೆ ನಡೆಯಲಿದೆ. ಈ ಅಭಿಯಾನದ ಮೂಲಕ ಸಂಗ್ರಹವಾಗುವ ಹಣವನ್ನು ಎಸಿಟಿ ಗ್ರಾಂಟ್ಸ್ (ACT grants) ಎಂಬ ಸಂಸ್ಥೆಗೆ ನೀಡಲಾಗುವುದು. ಎಸಿಟಿ ಗ್ರಾಂಟ್ಸ್ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.   

ಇದನ್ನೂ ಓದಿ : ಕರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಆಟಗಾರ : IPL 2021ರ ಆದಾಯವನ್ನು ಸಿಎಂ ರಿಲೀಫ್ ಫಂಡ್ ಗೆ ನೀಡಲು ನಿರ್ಧಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News