ಕರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಆಟಗಾರ : IPL 2021ರ ಆದಾಯವನ್ನು ಸಿಎಂ ರಿಲೀಫ್ ಫಂಡ್ ಗೆ ನೀಡಲು ನಿರ್ಧಾರ

ಐಪಿಎಲ್ 2021ರ ಕಮೆಂಟ್ರಿ ಟೀಂನಲ್ಲಿದ್ದ ಲಕ್ಷ್ಮಿ ರತನ್ ಶುಕ್ಲಾ ಈ ಐಪಿಎಲ್  ಟೂರ್ನಿಯ ಸಂಪೂರ್ಣ ಆದಾಯವನ್ನು ಕರೋನಾ ಪರಿಹಾರ ಕಾರ್ಯಕ್ಕೆ ದಾನ ಮಾಡಿದ್ದಾರೆ.

Written by - Ranjitha R K | Last Updated : May 7, 2021, 03:28 PM IST
  • ಕರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದ ಲಕ್ಷ್ಮಿ ರತನ್ ಶುಕ್ಲಾ
  • ಐಪಿಎಲ್ ಟೂರ್ನಿಯ ಸಂಪೂರ್ಣ ಆದಾಯವನ್ನು ಕರೋನಾ ಪರಿಹಾರ ಕಾರ್ಯಕ್ಕೆ ದಾನ
  • ಜನ್ಮ ದಿನದ ಅಂಗವಾಗಿ ಸಿಎಂ ರಿಲೀಫ್ ಫಂಡ್ ಗೆ ದೇಣಿಗೆ
ಕರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಆಟಗಾರ : IPL 2021ರ ಆದಾಯವನ್ನು ಸಿಎಂ ರಿಲೀಫ್ ಫಂಡ್ ಗೆ ನೀಡಲು ನಿರ್ಧಾರ title=
ಐಪಿಎಲ್ ಟೂರ್ನಿಯ ಸಂಪೂರ್ಣ ಆದಾಯವನ್ನು ಕರೋನಾ ಪರಿಹಾರ ಕಾರ್ಯಕ್ಕೆ ದಾನ (file photo)

ಕೋಲ್ಕತಾ: ಟೀಂ ಇಂಡಿಯಾ ಮಾಜಿ ಆಟಗಾರ ಲಕ್ಷ್ಮಿ ರತನ್ ಶುಕ್ಲಾ  (Laxmi Ratan Shukla) ಕರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ಐಪಿಎಲ್ 2021 ರ (IPL 2021) ಆದಾಯವನ್ನು ಸಿಎಂ ರಿಪೀಫ್ ಫಂಡ್ ಗೆ ದಾನ ಮಾಡಲು ನಿರ್ಧರಿಸಿದ್ದಾರೆ.

ಸಹಾಯ ಹಸ್ತ ಚಾಚಿದ ಲಕ್ಷ್ಮಿ ರತನ್ ಶುಕ್ಲಾ : 
ಐಪಿಎಲ್ 2021ರ (IPL 2021) ಕಮೆಂಟ್ರಿ ಟೀಂನಲ್ಲಿದ್ದ ಲಕ್ಷ್ಮಿ ರತನ್ ಶುಕ್ಲಾ (Laxmi Ratan Shukla) ಈ ಐಪಿಎಲ್  ಟೂರ್ನಿಯ ಸಂಪೂರ್ಣ ಆದಾಯವನ್ನು ಕರೋನಾ  (Coronavirus) ಪರಿಹಾರ ಕಾರ್ಯಕ್ಕೆ ದಾನ ಮಾಡಿದ್ದಾರೆ.

ಇದನ್ನೂ ಓದಿ : #FightAgainstCorona : ಕರೋನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದ ವಿರುಷ್ಕಾ

 ಈ ವಿಚಾರವನ್ನು  ಲಕ್ಷ್ಮಿ ರತನ್ ಶುಕ್ಲಾ ಟ್ವೀಟ್ (tweet) ಮಾಡುವ ಮೂಲಕ ಪ್ರಕಟಿಸಿದ್ದಾರೆ. ತನ್ನ ಜನ್ಮದಿನದ ಅಂಗವಾಗಿ ಐಪಿಎಲ್ 2021ರಲ್ಲಿ ತಾನು ಸಂಪಾದಿಸಿದ ಆದಾಯವನ್ನು ಸಿಎಂ ರಿಲೀಫ್ ಫಂಡ್ ಗೆ (CM relief fund) ನೀಡುವುದಾಗಿ ಹೇಳಿದ್ದಾರೆ. ಕರೋನಾ ವಿರುದ್ಧದ ಹೋರಾಟದಲ್ಲಿ ನನ್ನ ಕಡೆಯಿಂದ ಸಣ್ಣ ಯೋಗದಾನ ಎಂದು ಅವರು ಬರೆದುಕೊಂಡಿದ್ದಾರೆ. 

ಲಕ್ಷ್ಮಿ ರತನ್ ಶುಕ್ಲಾ  ಭಾರತದ ಪರವಾಗಿ,  ಮೂರು ಏಕದಿನ ಮತ್ತು 137 ಫಸ್ಟ್ ಗ್ರೇಡ್ ಕ್ರಿಕೆಟನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಪಶ್ಚಿಮ ಬಂಗಾಳ ಕಮೆಂಟ್ರಿ ತಂಡದ ಭಾಗವಾಗಿದ್ದರು. ಬಂಗಾಳಿ ವ್ಯಾಖ್ಯಾನ ತಂಡದ ಭಾಗವಾಗಿದ್ದರು.

 
ಇದನ್ನೂ ಓದಿ : IPL 2021- ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಉಳಿದ ಐಪಿಎಲ್ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯುವ ಸಾಧ್ಯತೆ

ಕರೋನಾ ಹೋರಾಟದಲ್ಲಿ ಕೈ ಜೋಡಿಸಿದ ಇತರ ಆಟಗಾರರು : 
ಈ ಹಿಂದೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) , ಶಿಖರ್ ಧವನ್ ಮತ್ತು ವೆಸ್ಟ್ ಇಂಡೀಸ್‌ನ ನಿಕೋಲಸ್, ಜಯದೇವ್ ಉನಾದ್ಕಟ್ ಸೇರಿದಂತೆ ಅನೇಕ ಮಾಜಿ ಮತ್ತು ಪ್ರಸ್ತುತ ಕ್ರಿಕೆಟಿಗರು ಕೊಡುಗೆ ನೀಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ (Kolkata knight riders) ಆಟಗಾರ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಕರೋನಾ ಪರಿಹಾರ ಕಾರ್ಯಕ್ಕಾಗಿ  50,000 ಡಾಲರ್ ಗಳನ್ನು ದೇಣಿಗೆ ನೀಡಿದ್ದಾರೆ. ಇದಲ್ಲದೆ, ಆಸ್ಟ್ರೇಲಿಯಾದ ಮಾಜಿ ಬೌಲರ್ ಬ್ರೆಟ್ ಲಿ ಒಂದು ಬಿಟಾಕಾಯಿನ್ ಅಂದರೆ 41 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News