Smartphone: ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತೆ ಬಳಕೆದಾರರ ಈ 5 ಅಭ್ಯಾಸಗಳು

Smartphone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಜೀವನದ ಪ್ರಪಂಚವೇ ಆಗಿಬಿಟ್ಟಿದೆ. ಆದರೆ, ನೀವು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಅಜಾಗರೂಕತೆಯಿಂದ ಬಳಸುತ್ತಿದ್ದರೆ ಇದು ನಿಮ್ಮ ಸ್ಮಾರ್ಟ್‌ಫೋನ್‌ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.  

Written by - Yashaswini V | Last Updated : Mar 28, 2024, 10:24 AM IST
  • ನೀವು ಅಗತ್ಯವಿಲ್ಲದಿದ್ದರೂ ನಿಮ್ಮ ಸ್ಮಾರ್ಟ್‌ಫೋನ್‌ನ ಬೇಡದ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ, ಇಂದೇ ಈ ಅಭ್ಯಾಸವನ್ನು ಬದಲಾಯಿಸಿ.
  • ಏಕೆಂದರೆ, ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ನೀವು ಅದನ್ನು ಬಳಸದಿದ್ದರೂ ಸಹ ಅವು ಹಿನ್ನಲೆಯಲ್ಲಿ ಚಾಲನೆಯಲ್ಲಿರುತ್ತವೆ.
  • ಮಾತ್ರವಲ್ಲ, ಇದು RAM ಮತ್ತು ಪ್ರೊಸೆಸರ್ (CPU) ಅನ್ನು ಬಳಸುತ್ತಲೇ ಇರುತ್ತವೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಧಾನಗೊಳಿಸಬಹುದು.
Smartphone: ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತೆ ಬಳಕೆದಾರರ ಈ 5 ಅಭ್ಯಾಸಗಳು  title=

Smartphone Performance: ಪ್ರಸ್ತುತ, ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಮಾತ್ರವಲ್ಲ, ಸ್ಮಾರ್ಟ್‌ಫೋನ್‌ ಎಲ್ಲರ ಜೀವನದ ಪ್ರಮುಖ ಭಾಗವಾಗಿದೆ. ಆದರೇ, ನಮ್ಮ ಕೆಲವು ಅಭ್ಯಾಸಗಳು ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಗೆ ಹಾನಿಕಾರಕವಾದ ಅಭ್ಯಾಸಗಳು ಯಾವುವು. ಇದರಿಂದ ನಿಮ್ಮ ಫೋನ್ ಯಾವ ರೀತಿ ಹಾನಿಗೊಳಗಾಗುತ್ತದೆ ಎಂದು ತಿಳಿಯೋಣ... 

ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಗೆ ಹಾನಿಕಾರಕ ನಿಮ್ಮ ಈ ಅಭ್ಯಾಸಗಳು: 
ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುವುದು: 

ನೀವು ಅಗತ್ಯವಿಲ್ಲದಿದ್ದರೂ ನಿಮ್ಮ ಸ್ಮಾರ್ಟ್‌ಫೋನ್‌ನ ಬೇಡದ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ, ಇಂದೇ ಈ ಅಭ್ಯಾಸವನ್ನು ಬದಲಾಯಿಸಿ. ಏಕೆಂದರೆ, ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ನೀವು ಅದನ್ನು ಬಳಸದಿದ್ದರೂ ಸಹ ಅವು ಹಿನ್ನಲೆಯಲ್ಲಿ ಚಾಲನೆಯಲ್ಲಿರುತ್ತವೆ. ಮಾತ್ರವಲ್ಲ, ಇದು RAM ಮತ್ತು  ಪ್ರೊಸೆಸರ್ (CPU) ಅನ್ನು ಬಳಸುತ್ತಲೇ ಇರುತ್ತವೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಧಾನಗೊಳಿಸಬಹುದು. 

ಅನಗತ್ಯ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡುವುದು:
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಅನಗತ್ಯವಾಗಿ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿದಾಗ ಇದರಿಂದ ಅವು  ಶೇಖರಣಾ ಸ್ಥಳವನ್ನು ಆವರಿಸಿಕೊಳ್ಳುವುದರ ಜೊತೆಗೆ ಮತ್ತು RAM ಅನ್ನು ಬಳಸುತ್ತವೆ. ಇದರಿಂದಲೂ ಕೂಡ ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗಬಹುದು. 

ಇದನ್ನೂ ಓದಿ- Voter ID Card: ನಿಮ್ಮ ವೋಟರ್ ಐಡಿ ಕಳೆದುಹೋಗಿದ್ಯಾ? ಈ ರೀತಿ ಸುಲಭವಾಗಿ ಡೌನ್‌ಲೋಡ್ ಮಾಡಿ

ಸಾಫ್ಟ್‌ವೇರ್ ಅಪ್ಡೇಟ್ ಮಾಡದಿರುವುದು: 
ಕೆಲವೊಮ್ಮೆ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅಪ್ಡೇಟ್ ನೋಟಿಫಿಕೇಶನ್ ಅನ್ನು ಸ್ವೀಕರಿಸಿದರೂ ಕೂಡ ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುಡಿಳ್ಳ. ಆದರೆ, ನಿಮ್ಮ ಈ ತಪ್ಪು ಅಭ್ಯಾಸ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಧಾನಗೊಳಿಸಬಹುದು. 

ಸಾಕಷ್ಟು ಫೈಲ್‌ಗಳು ಮತ್ತು ಡೇಟಾವನ್ನು ಸಂಗ್ರಹಿಸುವುದು:
ಸ್ಮಾರ್ಟ್‌ಫೋನ್‌ನಲ್ಲಿ ನೀವು ಸಾಕಷ್ಟು ಫೈಲ್‌ಗಳು ಮತ್ತು ಡೇಟಾವನ್ನು ಸಂಗ್ರಹಿಸುವ ಅಭ್ಯಾಸವನ್ನು ಹೊಂದಿದ್ದರೆ ಇದು ಸಹ ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯನ್ನು ನಿಧಾನಗೊಳಿಸಬಹುದು. 

ಸ್ಮಾರ್ಟ್‌ಫೋನ್ ಬಿಸಿ ಇದ್ದರೂ ವಿರಾಮ ನೀಡದಿರುವುದು: 
ಕೆಲವೊಮ್ಮೆ ಸ್ಮಾರ್ಟ್‌ಫೋನ್ ಎಷ್ಟೇ ಬಿಸಿ ಆಗಿದ್ದರೂ ಕೂಡ ಅದನ್ನು ಕೈ ಬಿಡುವುದೇ ಇಲ್ಲ. ಆದರೆ, ಈ ಅಭ್ಯಾಸವು ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುವುದಷ್ಟೇ ಅಲ್ಲ, ಫೋನ್ ಸ್ಫೋಟಗೊಳ್ಳಲು ಕೂಡ ಕಾರಣವಾಗಿರಬಹುದು. 

ಇದನ್ನೂ ಓದಿ- 

ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸಿದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ: 
* ನೀವು ಬಳಸದೇ ಇರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ
* ಆಗಾಗ್ಗೆ ನಿಮ್ಮ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡುತ್ತಿರಿ. 
* ಸ್ಮಾರ್ಟ್‌ಫೋನ್‌ನಲ್ಲಿ ಶೇಖರಣಾ ಸ್ಥಳವನ್ನು ಆಗಾಗ್ಗೆ ಕ್ಲಿಯರ್ ಮಾಡುತ್ತೀರಿ. 
* ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. 
* ಸ್ಮಾರ್ಟ್‌ಫೋನ್ ಚಾರ್ಜ್ ಗೆ ಇಟ್ಟು ಬಳಸಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News