Realme Smartphone: ಕೇವಲ 2 ಸಾವಿರ ರೂ.ಗೆ ಖರೀದಿಸಿ Realme 5G ಸ್ಮಾರ್ಟ್‌ಫೋನ್..!

ನೀವು ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ ಚೇಂಜ್ ಆಫರ್‌ಗಳನ್ನು ತೆಗೆದುಕೊಂಡರೆ ಈ ಫೋನ್ ನಿಮಗೆ ಕೇವಲ 2 ಸಾವಿರ ರೂ.ಗೆ ಸಿಗಲಿದೆ.

Written by - Puttaraj K Alur | Last Updated : Nov 8, 2021, 09:36 AM IST
  • ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ Realme ಹಬ್ಬದ ದಿನಗಳ ಮಾರಾಟಕ್ಕೆ ಇಂದೇ ಕೊನೆಯ ದಿನ
  • Realme 5G ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿವೆ
  • 22,999 ರೂ. ಮೌಲ್ಯದ Realme 8s 5Gಯ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಆಫರ್
Realme Smartphone: ಕೇವಲ 2 ಸಾವಿರ ರೂ.ಗೆ ಖರೀದಿಸಿ Realme 5G ಸ್ಮಾರ್ಟ್‌ಫೋನ್..! title=
Realme 8s 5Gಯ ಸ್ಮಾರ್ಟ್‌ಫೋನ್‌

ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿ Realme ಹಬ್ಬದ ದಿನಗಳ ಮಾರಾಟ(Realme Festive Days Sale)ವು  ನಡೆಯುತ್ತಿದೆ. ಇಲ್ಲಿ Realme ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಗ್ಗವಾಗಿ ಲಭ್ಯವಿವೆ. 5G ಫೋನ್‌ನ ಮೇಲೆ ಭರ್ಜರಿ ಆಫರ್ ಕೂಡ ಇದೆ. ನೀವು ದೀಪಾವಳಿ ಹಬ್ಬದ ಆಫರ್ ಮಿಸ್ ಮಾಡಿಕೊಂಡಿದ್ದರೆ ಇದುವೇ ಸುವರ್ಣಾವಕಾಶ. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಇದು ಸರಿಯಾದ ಸಮಯ. ಈ Realme ಹಬ್ಬದ ದಿನಗಳ ಮಾರಾಟಕ್ಕೆ ಇಂದೇ(ನ.8) ಕೊನೆಯ ದಿನವಾಗಿದೆ. ಹೀಗಾಗಿ ತಡಮಾಡದೆ ನಿಮ್ಮಿಷ್ಟದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ ಖುಷಿ ಪಡಿ.

ಫ್ಲಿಪ್‌ಕಾರ್ಟ್‌ನಲ್ಲಿ Realme 8s 5G ಸ್ಮಾರ್ಟ್‌ಫೋನ್(Realme 8s 5G) ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ. ನೀವು ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ ಚೇಂಜ್ ಆಫರ್‌ಗಳನ್ನು ತೆಗೆದುಕೊಂಡರೆ ಈ ಫೋನ್ ನಿಮಗೆ ಕೇವಲ 2 ಸಾವಿರ ರೂ.ಗೆ ಸಿಗಲಿದೆ. ಇದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Screen Reading Vs Paper Reading: ಪೇಪರ್ ಓದು ಅಥವಾ ಮೊಬೈಲ್ ಸ್ಕ್ರೀನ್ ಓದು! ಪರಿಣಾಮಕಾರಿ ಓದು ಯಾವುದು?

Realme 8s 5G ಕೊಡುಗೆಗಳು ಮತ್ತು ರಿಯಾಯಿತಿಗಳು

Realme 8s 5Gಯ ​​ಬಿಡುಗಡೆ ಬೆಲೆ 22,999 ರೂ.ಆಗಿದೆ. ಆದರೆ ಇದು ರಿಯಾಲಿಟಿ ಹಬ್ಬದ ದಿನ(Realme Festive Days Sale)ಗಳ ಮಾರಾಟದಲ್ಲಿ ಶೇ.13ರಷ್ಟು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ Realme 8s 5G ನಿಮಗೆ 19,999 ರೂ.ಗಳಲ್ಲಿ ಲಭ್ಯವಿದೆ. ಇದರ ನಂತರ ಅನೇಕ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳು ಇವೆ. ಇದನ್ನು ಪಡೆಯುವ ಮೂಲಕ ನೀವು ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಹೇಗೆಂದು ತಿಳಿಯಿರಿ.

Realme 8s 5G ಬ್ಯಾಂಕ್ ಕೊಡುಗೆಗಳು

ನೀವು SBI ಕಾರ್ಡ್ ಮೂಲಕ ಪಾವತಿಸಿ ಫೋನ್ ಖರೀದಿಸಿದರೆ 750 ರೂ.ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಇದರೊಂದಿಗೆ ಹೆಚ್ಚುವರಿಯಾಗಿ 1500 ರೂ. ರಿಯಾಯತಿ ಸಿಗಲಿದೆ. ಈ ಆಫರ್ ಪಡೆದ ಬಳಿಕ ನಿಮಗೆ ಫೋನ್‌ನ ಬೆಲೆ 17,749 ರೂ. ಆಗುತ್ತದೆ. ಬಳಿಕ ನೀವು ಎಕ್ಸ್ ಚೇಂಜ್ ಆಫರ್ ತೆಗೆದುಕೊಂಡರೆ ಫೋನ್ ಅನ್ನು ಹೆಚ್ಚು ಅಗ್ಗವಾಗಿ ಖರೀದಿಸಬಹುದು.

ಇದನ್ನೂ ಓದಿ: Malware Alert! ಈಗಲೇ 151 ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಮ್ಮ ಪೋನ್ ನಿಂದ ಡಿಲಿಟ್ ಮಾಡಿ

Realme 8s 5G ಎಕ್ಸ್ ಚೇಂಜ್ ಆಫರ್

Realme 8s 5Gನಲ್ಲಿ 15,750 ರೂ.ಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ಎಕ್ಸ್ ಚೇಂಚ್ ಮಾಡಿಕೊಂಡರೆ ತುಂಬಾ ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಫೋನ್‌ನ ಸ್ಥಿತಿಯು ಉತ್ತಮವಾಗಿದ್ದಾಗ ಮಾತ್ರ ಈ ಆಫರ್ ಲಭ್ಯವಿರುತ್ತದೆ. ನೀವು ಈ ಸಂಪೂರ್ಣ ಆಪರ್ ಗಳನ್ನು ಪಡೆದುಕೊಂಡಾಗ ಈ ಸ್ಮಾರ್ಟ್‌ಫೋನ್‌ ನಿಮಗೆ 1,999 ರೂ.ಗೆ ಸಿಗಲಿದೆ.

Realme 8s 5G ವೈಶಿಷ್ಟ್ಯತೆಗಳು

ಈ ಸ್ಮಾರ್ಟ್‌ಫೋನ್ 6.5-ಇಂಚಿನ ಪೂರ್ಣ HD+ (1080 x 2400 ಪಿಕ್ಸೆಲ್‌ಗಳು) ಡಿಸ್‌ಪ್ಲೇ, 20:9 ಅನುಪಾತ, 90Hz ರಿಫ್ರೆಶ್ ರೇಟ್ ಮತ್ತು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ. MediaTek ಡೈಮೆನ್ಸಿಟಿ 810 SoC ಅನ್ನು 8GB ವರೆಗಿನ LPDDR4x RAM ಮತ್ತು 128GB UFS 2.1 ಸ್ಟೋರೇಜ್‌ನಲ್ಲಿ ಇದು ಲಭ್ಯವಿದೆ. ಇದು 5GB ವರ್ಚುವಲ್ RAM ಬೆಂಬಲವನ್ನು ಸಹ ಹೊಂದಿದೆ.

Realme 8s 5G ಕ್ಯಾಮೆರಾ ಮತ್ತು ಬ್ಯಾಟರಿ

ಇದರ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇದು 64MP ಪ್ರೈಮರಿ ಸೆನ್ಸಾರ್, 2MP Portrait  ಸೆನ್ಸಾರ್, ಹಿಂಭಾಗದಲ್ಲಿ 2MP ಮ್ಯಾಕ್ರೋ ಲೆನ್ಸ್ ಮತ್ತು ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿವೆ. ಇದಲ್ಲದೆ ಈ ಫೋನ್ 5,000 mAh ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ 5G, 4G VoLTE, Wi-Fi 802.11 AC, ಬ್ಲೂಟೂತ್ v5.1, GPS / A-GPS ಮತ್ತು ಚಾರ್ಜ್ ಮಾಡಲು USB ಟೈಪ್-C ಪೋರ್ಟ್ ಇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News