Jio, Airtel, BSNL: 3300GB ಉಚಿತ ಡೇಟಾ ಹಾಗೂ ಉಚಿತ ಕರೆ ನೀಡುವ ಅಗ್ಗದ ಪ್ಲಾನ್ ಗಳು, ಆರಂಭಿಕ ಬೆಲೆ ರೂ.400

Jio, Airtel, BSNL: ಕಳೆದ ಕೆಲವು ತಿಂಗಳುಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಗಳು ಬಳಕೆದಾರರಿಗೆ ಅನೇಕ ಆಕರ್ಷಕ ಮತ್ತು ಉತ್ತಮ-ಲಾಭದ ಯೋಜನೆಗಳನ್ನು ನೀಡುತ್ತಿವೆ. ವಿಶೇಷವೆಂದರೆ ಈ ಯೋಜನೆಗಳಲ್ಲಿ ಡೇಟಾ ಮತ್ತು ಕರೆಗಳ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ. 

Written by - Nitin Tabib | Last Updated : Nov 6, 2021, 02:20 PM IST
  • ಕಳೆದ ಕೆಲವು ತಿಂಗಳುಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ.
  • ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಗಳು ಬಳಕೆದಾರರಿಗೆ ಅನೇಕ ಆಕರ್ಷಕ ಮತ್ತು ಉತ್ತಮ-ಲಾಭದ ಯೋಜನೆಗಳನ್ನು ನೀಡುತ್ತಿವೆ.
  • ವಿಶೇಷವೆಂದರೆ ಈ ಯೋಜನೆಗಳಲ್ಲಿ ಡೇಟಾ ಮತ್ತು ಕರೆಗಳ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ.
Jio, Airtel, BSNL: 3300GB ಉಚಿತ ಡೇಟಾ ಹಾಗೂ ಉಚಿತ ಕರೆ ನೀಡುವ ಅಗ್ಗದ ಪ್ಲಾನ್ ಗಳು, ಆರಂಭಿಕ ಬೆಲೆ ರೂ.400  title=
Cheapest Broadband Plans

Jio, Airtel, BSNL: ಕಳೆದ ಕೆಲವು ತಿಂಗಳುಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಗಳು ಬಳಕೆದಾರರಿಗೆ ಅನೇಕ ಆಕರ್ಷಕ ಮತ್ತು ಉತ್ತಮ-ಲಾಭದ ಯೋಜನೆಗಳನ್ನು ನೀಡುತ್ತಿವೆ. ವಿಶೇಷವೆಂದರೆ ಈ ಯೋಜನೆಗಳಲ್ಲಿ ಡೇಟಾ ಮತ್ತು ಕರೆಗಳ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ. ನೀವು ಸಹ ನಿಮಗಾಗಿ ಉತ್ತಮ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹುಡುಕುತ್ತಿದ್ದರೆ, ಇಲ್ಲಿವೆ ನಿಮಗಾಗಿ ಕೆಲ ಆಪ್ಸನ್ ಗಳು.

ಬಿಎಸ್‌ಎನ್‌ಎಲ್, ಜಿಯೋ ಮತ್ತು ಏರ್‌ಟೆಲ್‌ನ ಕೆಲವು ಅಗ್ಗದ ಬ್ರಾಡ್‌ಬ್ಯಾಂಡ್ (Broadband Internet) ಯೋಜನೆಗಳ (Cheapest Broadband Plans) ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಯೋಜನೆಗಳಲ್ಲಿ 3300GB ವರೆಗಿನ ಡೇಟಾ ಮತ್ತು ಅನಿಯಮಿತ ಕರೆಯೊಂದಿಗೆ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡಲಾಗುತ್ತಿದೆ. ಈ ಯೋಜನೆಗಳ ಆರಂಭಿಕ ಬೆಲೆ ಕೂಡ 400 ರೂ.ಗಿಂತ ಕಡಿಮೆಯಾಗಿದೆ. ಬನ್ನಿ ಈ ಯೋಜನೆಗಳ ಕುರಿತು ವಿವರವಾಗಿ ತಿಳಿಯೋಣ.

ಜಿಯೋ ಕಂಪನಿಯ 399ರ ಯೋಜನೆ - ಇದು ಜಿಯೋ (Reliance Jio)ಕಂಪನಿಯ ಅತ್ಯಂತ ಅಗ್ಗದ ಬೆಲೆಯ ಯೋಜನೆಯಾಗಿದೆ. ಈ ಯೋಜನೆ 30 ದಿನಗಳ ಸಿಂಧುತ್ವ ಹೊಂದಿದೆ. ಈ ಯೋಜನೆಯಲ್ಲಿ ನಿಮಗೆ 3.3TB ಡೇಟಾ ಸಿಗುತ್ತದೆ. ಹೈಸ್ಪೀಡ್ ಇಂಟರ್ನೆಟ್ ಡೇಟಾದೊಂದಿಗೆ ಬರುವ ಈ ಯೋಜನೆಯಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ನೊಂದಿವೆ ಬರುತ್ತದೆ. ಈ ಪ್ಲಾನ್ ಚಂದಾದಾರರಿಗೆ ಜಿಯೋ ಕಂಪನಿ ಹಲವು ಸೇವೆಗಳನ್ನೂ ಸಹ ಉಚಿತವಾಗಿ ನೀಡುತ್ತದೆ. 

ಇದನೋ ಓದಿ-Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ

ಏರ್ಟೆಲ್ ಕಂಪನಿಯ ರೂ.499ರ ಪ್ಲಾನ್ - ಏರ್‌ಟೆಲ್‌ನ (Airtel) ಕಂಪನಿಯ ಈ ಯೋಜನೆಯು ಬಳಕೆದಾರರಿಗೆ ಕಂಪನಿಯ ಅತ್ಯಂತ ಕೈಗೆಟುಕುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ನೀವು 40Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ಯೋಜನೆಯಲ್ಲಿ, ಕಂಪನಿಯು ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆಗಳನ್ನು ಸಹ ನೀಡುತ್ತಿದೆ. 30 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಬ್ರಾಡ್‌ಬ್ಯಾಂಡ್ ಯೋಜನೆಯು ಅನೇಕ ಜನಪ್ರಿಯ OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ .

ಇದನ್ನೂ ಓದಿ-Indian Railways: ಟಿಕೆಟ್ ಕಾಯ್ದಿರಿಸುವಾಗ ಈ ಕೋಡ್ ನೆನಪಿನಲ್ಲಿಡಿ, ಇಲ್ಲದಿದ್ರೆ ಸೀಟು ಸಿಗಲ್ಲ!

BSNL ಕಂಪನಿಯ ರೂ.499ರ ಪ್ಲಾನ್ - ಕಂಪನಿಯ ಈ ಯೋಜನೆಯಲ್ಲಿ, ನೀವು 30Mbps ವೇಗದಲ್ಲಿ 3300 GB ಡೇಟಾವನ್ನು ಪಡೆಯುತ್ತೀರಿ. ಡೇಟಾ ಮಿತಿ ಮುಗಿದ ನಂತರ, ಯೋಜನೆಯಲ್ಲಿ ಲಭ್ಯವಿರುವ ವೇಗವು 2Mbps ಗೆ ಕಡಿಮೆಯಾಗುತ್ತದೆ. ಯೋಜನೆಯ ವಿಶೇಷತೆ ಎಂದರೆ, ಕಂಪನಿಯು ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಪ್ರಯೋಜನಗಳನ್ನು ಸಹ ನೀಡುತ್ತಿದೆ. BSNL ನ ಈ ಯೋಜನೆಯಲ್ಲಿ ನೀವು ಯಾವುದೇ OTT ಚಂದಾದಾರಿಕೆಯನ್ನು ಪಡೆಯುವುದಿಲ್ಲ.

ಇದನ್ನೂ ಓದಿ-Aryan Khan Drugs Case ಸೇರಿದಂತೆ ಒಟ್ಟು 6 ಪ್ರಕರಣಗಳ ತನಿಖೆ SITಗೆ ಹಸ್ತಾಂತರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News