ಕೇವಲ 600 ರೂಪಾಯಿಗೆ ಸಿಗುತ್ತದೆ Realmeಯ ಸ್ಮಾರ್ಟ್ ಫೋನ್ ..!

ಮಾರುಕಟ್ಟೆಯಲ್ಲಿ Realme C25Y ಬೆಲೆ 12,999 ರೂ. ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನಲ್ಲಿ 15% ರಿಯಾಯಿತಿಯ ನಂತರ 10,985 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. 

Written by - Ranjitha R K | Last Updated : Jul 27, 2022, 01:23 PM IST
  • 600 ರೂಪಾಯಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್
  • ಅಗ್ಗದ ಬೆಲೆಗೆ ಖರೀದಿಸಿ ರಿಯಲ್‌ಮಿ ಸ್ಮಾರ್ಟ್‌ಫೋನ್
  • Realme C25Y ನ ವೈಶಿಷ್ಟ್ಯಗಳೇನು ತಿಳಿಯಿರಿ
ಕೇವಲ 600 ರೂಪಾಯಿಗೆ ಸಿಗುತ್ತದೆ Realmeಯ ಸ್ಮಾರ್ಟ್ ಫೋನ್ ..! title=
Amazon offers (file photo)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿಯೂ ಸ್ಮಾರ್ಟ್ ಫೋನ್ ಇರುತ್ತದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಗಳಲ್ಲಿ ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ.  ಅಮೆಜಾನ್‌ ನಲ್ಲಿ  12,999 ರೂಪಾಯಿ ಮೌಲ್ಯದ Realme C25Y ಫೋನ್ ಅನ್ನು  600 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.  

ಅಗ್ಗದ ಬೆಲೆಗೆ ಖರೀದಿಸಿ ರಿಯಲ್‌ಮಿ ಸ್ಮಾರ್ಟ್‌ಫೋನ್ :  
ಮಾರುಕಟ್ಟೆಯಲ್ಲಿ Realme C25Y ಬೆಲೆ 12,999 ರೂ. ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನಲ್ಲಿ 15% ರಿಯಾಯಿತಿಯ ನಂತರ 10,985 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಡೀಲ್‌ನಲ್ಲಿ ಅನೇಕ ಬ್ಯಾಂಕ್ ಆಫರ್‌ಗಳು, ನೋ-ಕಾಸ್ಟ್ EMI ಆಯ್ಕೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳನ್ನು ನೀಡಲಾಗುತ್ತಿದೆ.  ಈ ಮೂಲಕ 600 ರೂ.ಗಿಂತ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು. 

ಇದನ್ನೂ ಓದಿ :  ಅಡುಗೆ ಮಾಡಲು Gas Cylinder ಬೇಕಾಗಿಲ್ಲ, ಇದನ್ನು ಬಳಸಿ ಕ್ಷಣ ಮಾತ್ರದಲ್ಲಿ ಮುಗಿಸಬಹುದು ಅಡುಗೆ

ಈ ರೀತಿಯಲ್ಲಿ 600 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಿ  : 
ಈ ಸ್ಮಾರ್ಟ್‌ಫೋನ್ ಅನ್ನು 600 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬೇಕಾದರೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಬೇಕು. Amazon ಈ ಡೀಲ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಅನ್ನು ನೀಡುತ್ತಿದೆ. ಇದರಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ ಖರೀದಿಸುವುದಾದರೆ, 11,400 ರೂಪಾಯಿವರೆಗೆ ರಿಯಾಯಿತಿಯನ್ನು  ನೀಡಲಾಗುತ್ತಿದೆ. ಈ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ ಈ ಫೋನ್‌ನ ಬೆಲೆ 10,985 ರೂ.ಗಳಿಂದ ಕೇವಲ 585 ರೂ.ಗೆ ಇಳಿಯುತ್ತದೆ. 

Realme C25Y ನ ವೈಶಿಷ್ಟ್ಯಗಳು  :
ಈ 4G ಸ್ಮಾರ್ಟ್‌ಫೋನ್ ಯುನಿಸಾಕ್ T618 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 4GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. 6.5-ಇಂಚಿನ HD + ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ.  ಇದರಲ್ಲಿ 50MPನ  ಪ್ರಿಮರಿ ಸೆನ್ಸಾರ್ , 2MP ಯ  ಸೆಕೆಂಡ್ ಸೆನ್ಸಾರ್  ಮತ್ತು 2MPಯ  ಥರ್ಡ್ ಸೆನ್ಸಾರ್ ಇರುತ್ತದೆ.  ಇದರಲ್ಲಿ 8MP ಫ್ರಂಟ್ ಕ್ಯಾಮೆರಾವನ್ನು ಸಹ ನೀಡಲಾಗುತ್ತದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯೊಂದಿಗೆ ಬರುತ್ತದೆ.

ಇದನ್ನೂ ಓದಿ : ಪೂರ್ಣ ಚಾರ್ಜ್‌ನಲ್ಲಿ 3 ದಿನ ಬಾಳಿಕೆ ಬರುವ Nokia ಸ್ಮಾರ್ಟ್‌ಫೋನ್‌ ಕೇವಲ 599 ರೂ.ಗೆ ಲಭ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News