Gmail ಬಳಸುತ್ತೀರಾ? ಹಾಗಿದ್ರೆ ತಕ್ಷಣ ಅಪ್ಡೇಟ್ ಮಾಡಿ!

Gmail ಸೇವೆ ಇಂದಿನಿಂದ ಬದಲಾಗುತ್ತಿದೆ. ಹೌದು, ಹೊಸ ಲೇಔಟ್ ನಲ್ಲಿ ಜಿಮೇಲ್ ಬಳಸುವುದು ಇದೀಗ ಮತ್ತಷ್ಟು ಸುಲಭವಾಗಿದೆ. ಹೊಸ ಲೆಔಟ್ ನಲ್ಲಿ ಮೇಲ್, ಚಾಟ್, ಸ್ಪೇಸ್ ಮತ್ತು ಮೀಟ್ ಆಯ್ಕೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗಿದೆ. ಹೀಗಾಗಿ ಬನ್ನಿ ಈ ಹೊಸ ಲೆಔಟ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.

Written by - Nitin Tabib | Last Updated : Feb 8, 2022, 01:14 PM IST
  • ಇಂದಿನಿಂದ ಜಿಮೇಲ್ ಸೇವೆ ಬದಲಾಗುತ್ತಿದೆ.
  • ಹೊಸ ಜಿಮೇಲ್ ಬಳಕೆ ಮತ್ತಷ್ಟು ಸುಲಭವಾಗಿರಲಿದೆ.
  • ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಮೇಲ್, ಚಾಟ್, ಸ್ಪೇಸ್ ಹಾಗೂ ಮೀಟ್ ಆಯ್ಕೆಗಳನ್ನು ಒದಗಿಸಲಾಗಿದೆ.
Gmail ಬಳಸುತ್ತೀರಾ? ಹಾಗಿದ್ರೆ ತಕ್ಷಣ ಅಪ್ಡೇಟ್ ಮಾಡಿ!  title=
Gmail New Layout (File Photo)

ನವದೆಹಲಿ: Gmail New Layout - ಇಂದಿನಿಂದ Google ನ Gmail  ಸೇವೆ ಬದಲಾಗಲಿದೆ. ಕಂಪನಿಯು ಅಪ್ಲಿಕೇಶನ್‌ಗಾಗಿ ಹೊಸ ಲೇಔಟ್‌ನೊಂದಿಗೆ ಬರುತ್ತಿದೆ, ಅದರ ಪರೀಕ್ಷೆಯು ಪ್ರಾರಂಭವಾಗಿದೆ. ಹೊಸ ವಿನ್ಯಾಸವನ್ನು ಎಲ್ಲಾ ಬಳಕೆದಾರರಿಗೆ ಕ್ರಮೇಣವಾಗಿ ಹೊರತರಲಾಗುತ್ತದೆ. ವರದಿಗಳ  ಪ್ರಕಾರ, ಏಪ್ರಿಲ್ ವೇಳೆಗೆ ಹೊಸ ಲೇಔಟ್ ಎಲ್ಲರಿಗೂ ಲಭ್ಯವಾಗಲಿದೆ. ಹೊಸ ಲೇಔಟ್ Gmail ಬಳಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಮೇಲ್, ಚಾಟ್, ಸ್ಪೇಸ್ ಮತ್ತು ಮೀಟ್ ಆಯ್ಕೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗುತ್ತಿದೆ. ಈ ಹೊಸ ಲೇಔಟ್ ಬಗ್ಗೆ ತಿಳಿಯೋಣ...

ನಾಲ್ಕು ಹೊಸ ಆಯ್ಕೆಗಳನ್ನು ಪಡೆಯುವಿರಿ
ಇದುವರೆಗೆ, ಬಳಕೆದಾರರು Gmail ಅಪ್ಲಿಕೇಶನ್‌ನ ಕೆಳಭಾಗದಲ್ಲಿ Mail ಮತ್ತು Meet ಆಯ್ಕೆಯನ್ನು ಆಯ್ಕೆಗಳನ್ನು ಹೊಂದಿದ್ದರು. ಆದರೆ ಹೊಸ ಲೇಔಟ್‌ನಲ್ಲಿ ಮೇಲ್, ಚಾಟ್, ಸ್ಪೇಸ್ ಮತ್ತು ಮೀಟ್ ಆಯ್ಕೆಗಳನ್ನು ನೀಡಲಾಗುತಿದೆ. ಅಂದರೆ, ಇವುಗಳಿಗಾಗಿ ಬಳಕೆದಾರರು  ಯಾವುದೇ ಹೊಸ ಆಯ್ಕೆಗೆ ಹೋಗುವ ಅವಶ್ಯಕತೆ ಇಲ್ಲ. ಕೇವಲ ಒಂದು ಕ್ಲಿಕ್ ಬಳಕೆದಾರರ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತದೆ. ಸರಳವಾಗಿ ಹೇಳುವುದಾದರೆ, ಬದಲಾಯಿಸಲು ಎಲ್ಲಾ ಆಯ್ಕೆಗಳು ಒಂದೇ ವೇದಿಕೆಯಲ್ಲಿ ಲಭ್ಯವಿರಲಿವೆ.

ಈ ನಾಲ್ಕು ಆಯ್ಕೆಗಳೊಂದಿಗೆ, ನೀವು ಈ ಎಲ್ಲಾ ಕೆಲಸಗಳನ್ನು ಮಾಡಬಹುದು.
1. ಮೇಲ್(Google Mail):
ಅಪ್ಲಿಕೇಶನ್‌ನಲ್ಲಿ ಮೊದಲ ಆಯ್ಕೆಯು ಮೇಲ್ ಆಗಿರಲಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಮೇಲ್‌ಗಳನ್ನು ಓದಲು ಸಾಧ್ಯವಾಗುತ್ತದೆ. ಈ ಪುಟದಲ್ಲಿ ನೀವು ಮೇಲ್ ಕಳುಹಿಸುವ ಆಯ್ಕೆಯನ್ನು ಸಹ ಪಡೆಯುತ್ತೀರಿ (ಕಂಪೋಸ್).

2. ಚಾಟ್ (Google Chat): ಎರಡನೇ ಆಯ್ಕೆಯು ಚಾಟ್ ಆಗಿರುತ್ತದೆ, ಚಾಟ್ ಮಾಡಲು, ಬಳಕೆದಾರರು ಚಾಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ಚಾಟ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಒಂದೇ ಕ್ಲಿಕ್‌ನಲ್ಲಿ ಯಾವುದೇ ಬಳಕೆದಾರರೊಂದಿಗೆ ಚಾಟ್ ನಡೆಸಬಹುದು. ಹೊಸ ಚಾಟ್‌ಗಾಗಿ ನೀವು ಹೊಸ ಚಾಟ್‌ಗೆ ಹೋಗಬೇಕು.

3. ಸ್ಪೇಸ್ (Google Space): ಗ್ರೂಪ್ ಚಾಟ್‌ಗಳಿಗೆ ಸ್ಪೇಸ್ ಆಯ್ಕೆಯನ್ನು ಸೇರಿಸಲಾಗಿದೆ. ನೀವು ಗುಂಪು ಚಾಟ್ ಮಾಡಲು ಬಯಸಿದರೆ, ನೀವು ಗುಂಪು ಚಾಟ್‌ಗೆ ಹೋಗಬೇಕು. ಹೊಸ ಗುಂಪು ಚಾಟ್‌ಗಾಗಿ ನೀವು ಹೊಸ ಸ್ಪೇಸ್‌ಗೆ ಹೋಗಬೇಕು.

ಇದನ್ನೂ ಓದಿ-ಕಾಲೇಜು ಆವರಣದಲ್ಲಿ ಹಿಜಾಬು ಮತ್ತು ಕೇಸರಿ ಶಾಲು ಧಾರಿಗಳು ಎದುರು ಬದುರಾದಾಗ...!

4. ಮೀಟ್ (Google Meet): ಕೋವಿಡ್ ನಂತರ, ಗೂಗಲ್ ಮೀಟ್ ಬಳಕೆ ವೇಗವಾಗಿ ಹೆಚ್ಚಿದೆ. ಆಫೀಸ್ ಮೀಟಿಂಗ್ ಅಥವಾ ಆನ್‌ಲೈನ್ ಕ್ಲಾಸ್ ಆಗಿರಲಿ. ಗೂಗಲ್ ಮೀಟ್ ಮೂಲಕ ಎಲ್ಲಾ ಕೆಲಸಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ವಿನ್ಯಾಸದಲ್ಲಿ Meet ಆಯ್ಕೆಯನ್ನು ಸೇರಿಸಲಾಗಿದೆ. ಮೀಟಿಂಗ್ ಗಳಿಗಾಗಿ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಇಲ್ಲಿ ನೀವು ಹೊಸ ಸಭೆ ಮತ್ತು ಸಭೆ ಸೇರುವ ಆಯ್ಕೆಯನ್ನು ನೀಡಲಾಗುತ್ತಿದೆ. 

ಇದನ್ನೂ ಓದಿ-ಆರೋಗ್ಯಕ್ಕೆ ಬೇಕು ಬಾದಾಮಿ ಹಾಲು : ಇದರಿಂದ ಎಷ್ಟು ಲಾಭ ಇದೆ ಗೊತ್ತಾ?

ಎಲ್ಲಕ್ಕಿಂತ ಮೊದಲು ಈ ಜನರಿಗೆ ಹೊಸ ಅಪ್ಡೇಟ್ ಗಳು ಸಿಗಲಿವೆ
Gmail ನ ಲೇಔಟ್ ಅನ್ನು ಮೊದಲು Google Workspace Business Starter, Business Standard, Business Plus, Enterprise Essentials, Enterprise Standard, Enterprise Plus, Education Fundamentals, Education Plus, Frontline, Nonprofit, G Suite Basic ಅಥವಾ ವ್ಯಾಪಾರ ಖಾತೆಗಳನ್ನು ಹೊಂದಿರುವ ಬಳಕೆದಾರರಿಗೆ ಸಿಗಲಿವೆ. ನೀವು ಹೊಸ ಲೇಔಟ್‌ಗೆ ಬದಲಾಯಿಸಲು ಬಯಸಿದರೆ, ನೀವು ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗಲಿದೆ.

ಇದನ್ನೂ ಓದಿ-ಕ್ಯಾನ್ಸರ್ ಅಂಶ ಇದೆ ಎನ್ನುವ ದೂರು ಹಿನ್ನೆಲೆ, ನಿಷೇಧಕ್ಕೊಳಗಾಗಲಿದೆ Johnson & Johnson powder

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News