ಈ ಸ್ಮಾರ್ಟ್ ಫೋನ್ ಗಳನ್ನೂ ಸುಲಭವಾಗಿ ಹ್ಯಾಕ್ ಮಾಡುವ ಹ್ಯಾಕರ್‌ಗಳು ..!

ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಆಪಲ್‌ನ ಐಫೋನ್‌ಗಳು ಹಲವು ದೇಶಗಳಲ್ಲಿ ಹ್ಯಾಕ್ ಆಗುತ್ತಿವೆ ಎಂದು ಕೆಲವು ಸಮಯದ ಹಿಂದೆ, ಗೂಗಲ್ ತಿಳಿಸಿದೆ. 

Written by - Ranjitha R K | Last Updated : Jun 24, 2022, 12:45 PM IST
  • ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಇಂದು ಸಾಮಾನ್ಯ ವಿಷಯವಾಗಿದೆ.
  • ಹ್ಯಾಕ್ ಆಗುತ್ತಿವೆ ಆ್ಯಪಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು
  • ಗೂಗಲ್ ನೀಡಿದೆ ಭಯಾನಕ ಮಾಹಿತಿ
ಈ ಸ್ಮಾರ್ಟ್ ಫೋನ್ ಗಳನ್ನೂ ಸುಲಭವಾಗಿ ಹ್ಯಾಕ್ ಮಾಡುವ ಹ್ಯಾಕರ್‌ಗಳು ..!  title=
Apple and Android Smartphones Hacked (file photo)

Apple and Android Smartphones Hacked Google Reports : ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಇಂದು ಸಾಮಾನ್ಯ ವಿಷಯವಾಗಿದೆ.  ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಆಪಲ್‌ನ ಐಫೋನ್‌ಗಳು ಹಲವು ದೇಶಗಳಲ್ಲಿ ಹ್ಯಾಕ್ ಆಗುತ್ತಿವೆ ಎಂದು ಕೆಲವು ಸಮಯದ ಹಿಂದೆ, ಗೂಗಲ್ ತಿಳಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ಹೇಗೆ ಹ್ಯಾಕ್ ಆಗಿವೆ ಮತ್ತು ಇದರ ಹಿಂದಿನ ಕಾರಣ ಯಾರು ಮತ್ತು ಏನಿರಬಹುದು ನೋಡೋಣ. 

 ಹ್ಯಾಕ್ ಆಗುತ್ತಿವೆ ಆ್ಯಪಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು :
ಎಲ್ಲಾ ಆಂಡ್ರಾಯ್ಡ್ ಮತ್ತು ಆಪಲ್ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡಲು ಮತ್ತು ಆ ಫೋನ್ ಗಳ ಪತ್ತೆದಾರಿಕೆಗೆ ಇಟಾಲಿಯನ್ ಕಂಪನಿಯ ಹ್ಯಾಕಿಂಗ್ ಟೂಲ್‌ಗಳನ್ನು ಬಳಸಿದೆ ಎಂದು ಜೂನ್ 23 ರಂದು,  ಗೂಗಲ್ ವರದಿ ಮಾಡಿದೆ. ಮಿಲನ್‌ನಲ್ಲಿರುವ RCS ಲ್ಯಾಬ್, ಟಾರ್ಗೆಟ್ ಮಾಡಲಾದ ಸಾಧನಗಳ ಖಾಸಗಿ ಸಂದೇಶಗಳನ್ನು ಓದಲು ಮತ್ತು ಸಂಪರ್ಕಗಳ ಮೇಲೆ ಕಣ್ಣಿಡುವ ಸಲುವಾಗಿ  ಕೆಲವು ಟೂಲ್ ಗಳನ್ನೂ ಅಭಿವೃದ್ಧಿಪಡಿಸಿದೆ ಎಂದು ವರದಿಯಲ್ಲಿ ಹೇಳಿದೆ.  

ಇದನ್ನೂ ಓದಿ : ಈ ವಿದ್ಯುತ್ ಉಳಿತಾಯ ಸಾಧನವನ್ನು ಅಳವಡಿಸಿ ಎಲೆಕ್ಟ್ರಿಕ್ ಬಿಲ್ ಸಮಸ್ಯೆಯಿಂದ ಮುಕ್ತಿ ಪಡೆಯಿರಿ

ಗೂಗಲ್ ನೀಡಿದೆ  ಭಯಾನಕ ಮಾಹಿತಿ : 
ಗೂಗಲ್ ತನ್ನ ವರದಿಯಲ್ಲಿ ಕೆಲವು ಭಯಾನಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಕೆಲವು ಲ್ಯಾಬ್‌ಗಳು ಮತ್ತು ಕಂಪನಿಗಳು ಈ ಅಪಾಯಕಾರಿ ಹ್ಯಾಕಿಂಗ್ ಸಾಧನಗಳನ್ನು ಹರಡುತ್ತಿವೆ. ಮಾತ್ರವಲ್ಲ, ಸರ್ಕಾರಗಳಿಗೆ ಸಾಮಾನ್ಯವಾಗಿ ತಾವೇ ತಯಾರಿಸಿರುವ ಅಪಾಯಕಾರಿ ಅಸ್ತ್ರವನ್ನು ನೀಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರಸ್ತುತ, ಈ ಆಂಡ್ರಾಯ್ಡ್ ಮತ್ತು ಆಪಲ್ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡುವ ಪ್ರಕರಣಗಳು ಇಟಲಿ ಮತ್ತು ಕಝಾಕಿಸ್ತಾನ್‌ನಲ್ಲಿ ಕಂಡುಬಂದಿವೆ.  

ಅಗತ್ಯ ಕ್ರಮಗಳನ್ನು ಕೈಗೊಂಡಿರುವ google : 
ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಗೂಗಲ್ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ . ಮತ್ತು ಈ ಅಪಾಯಕಾರಿ ಸ್ಪೈವೇರ್ ಬಗ್ಗೆ ಎಚ್ಚರಿಕೆ ಕೂಡಾ ನೀಡಿದೆ.  ಪೆಗಾಸಸ್‌ನಿಂದ, ಸರ್ಕಾರಗಳಿಗೆ ಬೇಹುಗಾರಿಕೆಗಾಗಿ ಮಾಡಿದ ಹ್ಯಾಕಿಂಗ್ ಸಾಧನಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.  ಈ ಹೊಸ ಸ್ಪೈವೇರ್ ಅಪಾಯಕಾರಿ ಅಲ್ಲ ಆದರೆ ಇದು ಜನರ ಸಂದೇಶಗಳನ್ನು ಓದಬಹುದು ಮತ್ತು ಪಾಸ್‌ವರ್ಡ್‌ಗಳನ್ನು ಸಹ ನೋಡಬಹುದು.

ಇದನ್ನೂ ಓದಿ :  Meta Pay ಆಗಿ ಬದಲಾದ ಫೇಸ್‌ಬುಕ್ ಪೇ- ಇಲ್ಲಿದೆ ಇದರ ಪ್ರಯೋಜನಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News